ಕೆನಡಾ ಮೂಲದ ಗ್ಯಾಂಗ್ ಸ್ಟಾರ್ ನಿಂದ ಖ್ಯಾತ ಪಾಪ್ ಗಾಯಕ ಹನಿ ಸಿಂಗ್ ಗೆ ಕೊಲೆ ಬೆದರಿಕೆ - Mahanayaka

ಕೆನಡಾ ಮೂಲದ ಗ್ಯಾಂಗ್ ಸ್ಟಾರ್ ನಿಂದ ಖ್ಯಾತ ಪಾಪ್ ಗಾಯಕ ಹನಿ ಸಿಂಗ್ ಗೆ ಕೊಲೆ ಬೆದರಿಕೆ

22/06/2023

ಕಳೆದ ವರ್ಷ ಪಂಜಾಬ್ ನಲ್ಲಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯ ಮಾಸ್ಟರ್ ಮೈಂಡ್ ಎಂದು ಆರೋಪಿಸಲಾಗಿರುವ ಕೆನಡಾ ಮೂಲದ ಗ್ಯಾಂಗ್ ಸ್ಟಾರ್ ಗೋಲ್ಡಿ ಬ್ರಾರ್ ಎಂಬಾತನಿಂದ ಪಂಜಾಬಿ ಪಾಪ್ ಗಾಯಕ ಹನಿ ಸಿಂಗ್ ಗೆ ಕೊಲೆ ಬೆದರಿಕೆಗಳು ಬಂದಿವೆ ಎಂದು ಆರೋಪಿಸಲಾಗಿದೆ.

‌‌‌ಖ್ಯಾತ ಪಾಪ್ ಗಾಯಕ ಈಗ ತನ್ನ ಜೀವಕ್ಕೆ ಬೆದರಿಕೆ ಇದೆ ಎಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದಾರೆ.  ತನಗೆ ಬೆದರಿಕೆ ವಾಯ್ಸ್ ನೋಟ್ ಬಂದಿದೆ ಎಂದು ಹನಿ ಸಿಂಗ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ದೆಹಲಿ ಪೊಲೀಸ್ ಪ್ರಧಾನ ಕಚೇರಿಯಲ್ಲಿ ದೆಹಲಿ ಪೊಲೀಸ್ ಆಯುಕ್ತರನ್ನು ಭೇಟಿಯಾದರು. ಈ ಘಟನೆಯ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ನಾನು ಮತ್ತು ನನ್ನ ಇಡೀ ಕುಟುಂಬ ಭಯಭೀತವಾಗಿದೆ. ಸಾವಿಗೆ ಯಾರು ಹೆದರುವುದಿಲ್ಲ..? ನನಗೆ ಇಂತಹ ಬೆದರಿಕೆ ಬಂದಿರುವುದು ಇದೇ ಮೊದಲು. ನಾನು ಜನರಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದ್ದೇನೆ” ಎಂದು ಹನಿ ಸಿಂಗ್ ಹೇಳಿದ್ದಾರೆ ಎಂದು ಎನ್ ಡಿಟಿವಿ ವರದಿ ಮಾಡಿದೆ.

ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಎಂದು ಹೇಳಿಕೊಳ್ಳುವ ವ್ಯಕ್ತಿಯಿಂದ ತನಗೆ ಮತ್ತು ತನ್ನ ಸಿಬ್ಬಂದಿಗೆ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಕರೆಗಳು ಮತ್ತು ವಾಯ್ಸ್ ಮೆಸೇಜ್ ಬರುತ್ತಿವೆ ಎಂದು ಸಿಂಗ್ ಹೇಳಿದ್ದಾರೆ.

ದೆಹಲಿ ಪೊಲೀಸರಿಂದ ಭದ್ರತೆಯನ್ನು ಕೋರಿದ ಹನಿ ಸಿಂಗ್ ಅವರು ಪೊಲೀಸ್ ಆಯುಕ್ತರೊಂದಿಗೆ ಈ ಕುರಿತಾದ ಪುರಾವೆಗಳನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದರು.

ಗ್ಯಾಂಗ್ ಸ್ಟಾರ್ ಗೋಲ್ಡಿ ಬ್ರಾರ್ 2022 ರ ಮೇ 29 ರಂದು ಪಂಜಾಬ್ ನ ಮಾನಸಾ ಜಿಲ್ಲೆಯಲ್ಲಿ ಗಾಯಕ ಸಿಧು ಮೂಸ್ ವಾಲಾ ಅವರನ್ನು ಕೊಲ್ಲಲು ಪಿತೂರಿ ನಡೆಸಿದ ಆರೋಪವೂ ಇದೆ. ಗೋಲ್ಡಿ ಬ್ರಾರ್ ಅವರ ಪೋಸ್ಟ್ ಕೂಡ ವೈರಲ್ ಆಗಿತ್ತು, ಅದರಲ್ಲಿ ಅವರು ಮೂಸ್ ವಾಲಾ ಅವರ ಕೊಲೆಗೆ ಯೋಜಿಸಿದ್ದರು ಎಂದು ಹೇಳಿಕೊಂಡಿದ್ದರು.

ಮೂಸ್ ವಾಲಾ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ಭೂಗತ ಪಾತಕಿ ಲಾರೆನ್ಸ್ ಬಿಷ್ಣೋಯ್ ನ ನಿಕಟವರ್ತಿಯೂ ಬ್ರಾರ್ ಎಂದು ಹೇಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ