ಸಮುದ್ರದಲ್ಲಿ ಮುಳುಗಿ ಹೋದ ಪ್ರಸಿದ್ಧ ತೇಲುವ ರೆಸ್ಟೋರೆಂಟ್!
ಹಾಂಕಾಂಗ್: ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಹಾಂಕಾಂಗ್ ನ ಪ್ರಮುಖ ಆಕರ್ಷಣೆಯಾಗಿದ್ದ ಜಂಬೋ ತೇಲುವ ರೆಸ್ಟೋರೆಂಟ್ ಸಮುದ್ರದಲ್ಲಿ ಸಂಪೂರ್ಣವಾಗಿ ಮುಳುಗಿದೆ.
ಕೋವಿಡ್ ನಿಂದ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ರೆಸ್ಟೋರೆಂಟ್ ಮುಚ್ಚಲ್ಪಟ್ಟ ನಂತರ ಜಂಬೋ ಹಾಂಗ್ ಕಾಂಗ್ ತೀರವನ್ನು ತೊರೆಯಲು ನಿರ್ಧರಿಸಿತ್ತು. ಕೆಲವು ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಜಂಬೋ ಮುಳುಗಿದೆ ಎಂದು ವರದಿಯಾಗಿದೆ.
ಅಬರ್ಡೀನ್ ರೆಸ್ಟೋರೆಂಟ್ ಎಂಟರ್‌ಪ್ರೈಸಸ್ ಒಡೆತನದ ಫ್ಲೋಟಿಂಗ್ ರೆಸ್ಟೋರೆಂಟ್ ಅನ್ನು ಇನ್ನೂ ಹೆಸರಿಡದ ಬೀಚ್‌ಗೆ ತರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಜಂಬೂದಲ್ಲಿ ಅನೇಕ ಅಂತರರಾಷ್ಟ್ರೀಯ ಚಲನಚಿತ್ರಗಳನ್ನು ಚಿತ್ರೀಕರಿಸಲಾಗಿದೆ. ರಾಣಿ ಎಲಿಜಬೆತ್ ಸೇರಿದಂತೆ ಸೆಲೆಬ್ರಿಟಿಗಳು ಕೂಡ ಜಂಬೂ ರೆಸ್ಟೋರೆಂಟ್ ಗೆ ಅತಿಥಿಗಳಾಗಿದ್ದರು.
ಜಂಬೋ ತೇಲುವ ರೆಸ್ಟೋರೆಂಟ್ ಹೇಗೆ ಮುಳಗಡೆಗೊಂಡಿತು ಎನ್ನುವ ಪ್ರಶ್ನೆಗಳು ತೀವ್ರವಾಗಿ ಕೇಳಿ ಬಂದ ನಂತರ ಹಾಂಕಾಂಗ್ ಸರ್ಕಾರವು ಮಾಲಿಕರಿಗೆ ಕಾರಣ ಕೇಳಿದ್ದು, ಈ ಬಗ್ಗೆ ವರದಿ ನೀಡುವಂತೆ ಕೇಳಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಾವೋವಾದಿಗಳ ದಾಳಿಗೆ 3 CRPF ಸಿಬ್ಬಂದಿ ಹುತಾತ್ಮ
ಸೇತುವೆ ಬಳಿ ಪತ್ತೆಯಾಗಿದ್ದ ನವಜಾತ ಶಿಶು ಸಾವು
ಬುಡಕಟ್ಟು ನಾಯಕಿ ದ್ರೌಪದಿ ಮುರ್ಮು ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ
ಮಗುವಿನ ಜೀವ ಉಳಿಸು ಎಂದು ಶಿಲುಬೆ ಮುಂದೆ ಮಲಗಿಸಿದ ತಂದೆ ತಾಯಿ!
ಅಂಗನವಾಡಿ ಕಾರ್ಯಕರ್ತೆ ಸಹಿತ ಐವರ ಮಕ್ಕಳ ಮೇಲೆ ಬಿದ್ದ ಗಂಜಿ ನೀರು
ಶಾಸಕ ರಾಮ್ ದಾಸ್ ಬೆನ್ನಿಗೆ ಗುದ್ದುವಷ್ಟು ಪ್ರೀತಿ ಮೋದಿಜಿಗೆ ಯಾಕೆ?: ರಾಮ್ ದಾಸ್ ಏನು ಹೇಳಿದ್ರು?