ಧನರಾಜ ಮುಸ್ತಾಪೂರಗೆ ಗೌರವ ಡಾಕ್ಟರೇಟ್!
ಔರಾದ್: ತಾಲೂಕಿನ ಮುಸ್ತಾಪೂರ ಗ್ರಾಮದ ಸಮಾಜ ಸೇವಕ ಹೋರಾಟಗಾರ ಧನರಾಜ ಮುಸ್ತಾಪೂರ ಅವರಿಗೆ ನೆರೆಯ ತೆಲಂಗಾಣದ ಜಹೀರಾಬಾದನಲ್ಲಿ ಮೆಕ್ಸಿಕೊ ಟೋಲೋಸಾ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ.
ಜಿಲ್ಲೆಯಾದಾದ್ಯಂತ ಸದಾ ಸಾಮಾಜಿಕ ಕಾರ್ಯಗಳಲ್ಲಿ ಹಾಗೂ ವಿವಿಧ ಹೋರಾಟಗಳ ಮೂಲಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಜನಪರ ಕೆಲಸ ಮಾಡಿರುವುದನ್ನು ಪರಿಗಣಿಸಿ ಮೆಕ್ಸಿಕೊ ಟೋಲೋಸಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಧನರಾಜ ಮುಸ್ತಾಪೂರ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದಕ್ಕೆ ಮಾಣಿಕ ಡೋಳೆ, ಸಾಯಿ ಸಿಂಧೆ, ಸತೀಶ ವಗ್ಗೆ, ತುಕಾರಾಮ ಹಸನ್ಮುಖಿ, ಘಾಳೆಪ್ಪ, ಜಗದೀಶ ಸೋನಿ, ವಿಜಯಕುಮಾರ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ವರದಿ: ರವಿಕುಮಾರ ಶಿಂಧೆ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: