ಜ್ಞಾನವಾಪಿ ಮಸೀದಿ ಮತ್ತೊಂದು ಬಾಬರಿ ಮಸೀದಿ ಆಗುವ ಸಾಧ್ಯತೆ: ಅಸಾದುದ್ದೀನ್ ಓವೈಸಿ ಆತಂಕ
ಜ್ಞಾನವಾಪಿ ಮಸೀದಿ ಮತ್ತೊಂದು ಬಾಬರಿ ಮಸೀದಿ ಆಗುವ ಆತಂಕವನ್ನು ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಜ್ಞಾನವಾಪಿ ಸಮೀಕ್ಷೆಯ ವರದಿ ಬಂದ ಬಳಿಕ ಬಾಬರಿ ಮಾದರಿಯ ನಿರೂಪಣೆಯನ್ನು ಬಿಜೆಪಿ-ಆರ್‌ಎಸ್‌ಎಸ್ ಮಾಡಲಿದೆ ಎಂದು ಓವೈಸಿ ಹೇಳಿದ್ದಾರೆ.
ಡಿಸೆಂಬರ್ 23, 1949 ರಂದು ಬಾಬರಿ ಮಸೀದಿಯಲ್ಲಿ ವಿಗ್ರಹಗಳನ್ನು ಇರಿಸಿದ ಬಳಿಕ ಮಸೀದಿಯಲ್ಲಿ ಪ್ರಾರ್ಥನೆಗಳನ್ನು ನಿಲ್ಲಿಸಲಾಯಿತು ಎಂದು ಓವೈಸಿ ಹೇಳಿದ್ದಾರೆ. ನಾವು ಮಸೀದಿಯಿಂದ ವಂಚಿತರಾಗಿದ್ದೇವೆ. ಮತ್ತೊಂದು ಡಿಸೆಂಬರ್ 6 (ಮಸೀದಿ ಉರುಳಿಸಿದ ದಿನ) ನಡೆಯುತ್ತದೆಯೇ ಎಂದು ನಮಗೆ ಆತಂಕವಾಗುತ್ತದೆ. ಎಎಸ್‌ಐ ವರದಿ ಬಂದ ನಂತರ ಇದು ಎರಡನೇ (ಬಾಬರಿ ಮಸೀದಿ) ಆಗಬಹುದೋ ಎಂಬ ಭಯ ನಮಗಿದೆ ಎಂದು ಅವರು ಹೇಳಿದ್ದಾರೆ.
ಸಮೀಕ್ಷೆಯ ನಂತರ ಮಸೀದಿಯ ಧಾರ್ಮಿಕ ಸ್ವರೂಪ ಉಳಿಯುತ್ತದೆಯೇ ಅಥವಾ ಬದಲಾಗಲಿದೆಯೇ ಎಂದು ಅಸಾದುದ್ದೀನ್ ಓವೈಸಿ ಪ್ರಶ್ನಿಸಿದ್ದಾರೆ. ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಹೇಳಿಕೆಗೆ ಪ್ರತಿಕ್ರಿಯಿಸಿದ ಓವೈಸಿ, ಆದೇಶ ಬರುವ ಮುನ್ನವೇ ಮುಖ್ಯಮಂತ್ರಿ ಒಲವು ತೋರುತ್ತಿರುವುದು ಸಮಸ್ಯೆ. ನಮಗೆ ಬಾಬರಿಯಂತಹ ಇನ್ನೊಂದು ವಿವಾದ ಬೇಡ ಎಂದು ಅವರು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw