ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ: ಕುಮಾರಸ್ವಾಮಿ - Mahanayaka
11:10 AM Wednesday 12 - March 2025

ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ: ಕುಮಾರಸ್ವಾಮಿ

kumaraswamy
19/12/2021

ಬೆಂಗಳೂರು: ನಮ್ಮ ಹೆಮ್ಮೆಯ ಕಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ ದೇಶ ದ್ರೋಹಿಗಳಿಗೆ ತಕ್ಕ ಪಾಠ ಕಲಿಸುವುದು ಬಿಟ್ಟು ಕನ್ನಡಪರ ಹೋರಾಟಗಾರರ ಮೇಲೆ ರಾಜ್ಯ ಸರ್ಕಾರ ಪ್ರತಾಪ ತೋರಿಸುವುದು ಬೇಡ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಕನ್ನಡ ಭಾವುಟ ಸುಟ್ಟಿದ್ದು, ಬೆಳಗಾವಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆ ಧ್ವಂಸ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ದೇಶದ್ರೋಹಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಶಿವಾಜಿ ಪ್ರತಿಮೆ ವಿರೂಪ ಮಾಡಿದ ವಿಷಯವನ್ನು ಪ್ರಸ್ತಾಪ ಮಾಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಅನಗತ್ಯ ಹೇಳಿಕೆ ಒಪ್ಪಲು ಸಾಧ್ಯವಿಲ್ಲ. ಮುಖ್ಯಮಂತ್ರಿ ಪದವಿಯಲ್ಲಿದ್ದು ಒಕ್ಕೂಟ ವ್ಯವಸ್ಥೆ ಆಶಯವನ್ನು ಗಾಳಿಗೆ ತೂರುವ ಉದ್ಧಟತನದ ಮಾತೇಕೆ?’ ಎಂದು ಅವರು ಪ್ರಶ್ನಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಗುರುದ್ವಾರದಲ್ಲಿ ಧಾರ್ಮಿಕ ಧ್ವಜ ತೆಗೆಯಲು ಯತ್ನಿಸಿದ ಆರೋಪ: ವ್ಯಕ್ತಿಗೆ ಥಳಿತ

ಶ್ರೀಲಂಕಾಕ್ಕೆ ಸೇರಿದ ಗಡಿಯಲ್ಲಿ ಮೀನುಗಾರಿಕೆ: 43 ಭಾರತೀಯ ಮೀನುಗಾರರ ಬಂಧನ

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಜವಾಬ್ದಾರಿಯುತವಾಗಿ ಬಳಸಿ: ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು

ಪಶ್ಚಿಮ ಬಂಗಾಳ: ಬೆಳೆ ನಾಶ ಬೇಸತ್ತು ಮೂವರು ರೈತರ ಆತ್ಮಹತ್ಯೆ

‘ವೀರ ಸಾವರ್ಕರ್’  ಪುಸ್ತಕ ಬಿಡುಗಡೆ: ಅಂಬೇಡ್ಕರ್ ಹಾಗೂ ಸಾವರ್ಕರ್ ನಡುವೆ ಉತ್ತಮ ಸಂಬಂಧವಿತ್ತು | ಬಿ.ಎಲ್.ಸಂತೋಷ್

ಆಟೋ ಮೇಲೆ ಮಗುಚಿ ಬಿದ್ದ ಬೃಹತ್ ಕಂಟೈನರ್: ನಾಲ್ವರ ದಾರುಣ ಸಾವು

ಇತ್ತೀಚಿನ ಸುದ್ದಿ