ಮಹಾಲಕ್ಷ್ಮಿ ಮರ್ಡರ್ ಕೇಸ್: ಮರಣೋತ್ತರ ಪರೀಕ್ಷೆಯಲ್ಲಿ ಭಯಾನಕ ಅಂಶ ಬಯಲು!
ಬೆಂಗಳೂರು: ವಯ್ಯಾಲಿಕಾವಲ್ ನ ಮನೆಯೊಂದರಲ್ಲಿ ವಾಸವಿದ್ದ ನೇಪಾಳ ಮೂಲದ ಮಹಾಲಕ್ಷ್ಮಿ ಮರ್ಡರ್ ಕೇಸ್ ನಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬಹಿರಂಗವಾಗಿದೆ.
ವರದಿಗಳ ಪ್ರಕಾರ, ಮಹಾಲಕ್ಷ್ಮಿಯ ಎದೆ ಮತ್ತು ಹೊಟ್ಟೆ ಭಾಗಕ್ಕೆ ಚುಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚುಚ್ಚಿ ಸಾಯಿಸಿದ ಬಳಿಕ ತಲೆ ಬೇರ್ಪಡಿಸಲಾಗಿದೆ. ತಲೆ ಬೇರ್ಪಡಿಸಿದ ಬಳಿಕ ಒಟ್ಟು 52 ಪೀಸ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮರಣೋತ್ತರ ಪರೀಕ್ಷೆ ವೇಳೆ ಇಷ್ಟೂ ಭಾಗಗಳನ್ನು ವೈದ್ಯರು ಮರು ಜೋಡಿಸಿದ್ದಾರೆ. ಶ್ವಾಸಕೋಶವನ್ನು ಮಾತ್ರ ಬೇರ್ಪಡಿಸಲಾಗಿತ್ತು. ಇದೀಗ ಕರುಳಿನ ಭಾಗ ಮತ್ತು ಹೊಟ್ಟೆ ಭಾಗವನ್ನು ಟೆಸ್ಟ್ ಗೆ ಕಳುಹಿಸಲಾಗಿದೆ. ಸಾಯಿಸುವ ಮುನ್ನ ವಿಷ ಅಥವಾ ಪ್ರಜ್ಞೆ ತಪ್ಪಿಸಲಾಗಿದೆಯೇ ಎಂದು ವರದಿಯಿಂದ ತಿಳಿಯಬೇಕಿದೆ. ಇನ್ನೂ ದೇಹದಲ್ಲಿ ವಿಷ ಸೇವನೆ ಖಚಿತವಾಗಲು ಕನಿಷ್ಠ 2 ತಿಂಗಳು ಬೇಕಂತೆ.
ಬರೋಬ್ಬರಿ 2 ಗಂಟೆಗಳ ಕಾಲ ವೈದ್ಯರು ಶ್ರಮವಹಿಸಿ ಮೃತಳ ಮರಣೋತ್ತರ ಪರೀಕ್ಷೆ ನಡೆಸಿದ್ದರು. ಈ ಪ್ರಕರಣದ ತನಿಖೆಯಲ್ಲಿ ಮರಣೋತ್ತರ ಪರೀಕ್ಷೆ ಪ್ರಮುಖ ಪಾತ್ರವಹಿಸಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: