ಕಳೆದ 24 ಗಂಟೆಗಳಲ್ಲಿ  91,೦೦೦ ಹೊಸ ಕೊರೊನಾ ಕೇಸ್ ದಾಖಲು!

covid
06/01/2022

ನವದೆಹಲಿ:  ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ ಕೊರೊನಾ ಪ್ರಕರಣಗಳು 91,೦೦೦ ಹೊಸ ಕೊರೊನಾ ಪ್ರಕರಣಗಳು ವರದಿಯಾಗಿದ್ದು,  ಈ ಅವಧಿಯಲ್ಲಿ, 325 ಜನರು ಕೊರೊನಾದಿಂದ ಮೃತರಾಗಿದ್ದಾರೆ.

ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ 90,928 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ಇದರೊಂದಿಗೆ ಕೊರೊನಾದ ಒಟ್ಟು ಪ್ರಕರಣಗಳು 3,51,09,286ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಸಕ್ರಿಯ ಪ್ರಕರಣಗಳು 2,85,401 ಕ್ಕೆ ಹೆಚ್ಚಿವೆ. ಜತೆಗೆ, ಒಟ್ಟು ಸಾವಿನ ಸಂಖ್ಯೆ 4,82,876ಕ್ಕೆ ಏರಿಕೆಯಾಗಿದೆ.

ಸುಮಾರು 200 ದಿನಗಳ ನಂತರ, ದೇಶದಲ್ಲಿ ಅನೇಕ ಹೊಸ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಹಿಂದೆ ಜೂನ್ 10ರಂದು 92,291 ಹೊಸ ಪ್ರಕರಣಗಳು ವರದಿಯಾಗಿದ್ದವು. ಮಂಗಳವಾರ 58,೦೦೦ ಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ವರದಿಯಾಗಿವೆ.

ಕೊರೊನಾ ವೈರಸ್ ನ ವೆರಿಯಂಟ್ ಒಮೈಕ್ರಾನ್ ಪ್ರಕರಣಗಳು ಸಹ ವೇಗವಾಗಿ ಹೆಚ್ಚುತ್ತಿವೆ. ಒಮೈಕ್ರಾನ್ ಪ್ರಕರಣಗಳು ಈಗ 2,630 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕಾರಿನಲ್ಲಿಯೇ ಉದ್ಯಮಿಯನ್ನು ಕೊಚ್ಚಿ ಭೀಕರ ಹತ್ಯೆ

ಫುಡ್ ಡೆಲಿವರಿ ಬಾಯ್ ಗೆ ಹಿಗ್ಗಾಮುಗ್ಗಾ ಥಳಿಸಿದ ಪೊಲೀಸ್: ವಿಡಿಯೋ ವೈರಲ್

ದಕ್ಷಿಣ ಕೋರಿಯಾದ ಕಿಂಗ್ ಪಿನ್’ ನಂತೆ ಸಚಿವ ಮಾಧುಸ್ವಾಮಿ! | ಪತ್ರಿಕಾಗೋಷ್ಠಿಯಲ್ಲಿ ಪಿಸುಗುಟ್ಟಿದ ಬಿಜೆಪಿ ನಾಯಕರು

ತೋಟದ ಕೆಲಸಕ್ಕೆ ಹೊರಟಿದ್ದ ವೇಳೆ ಆನೆ ದಾಳಿ:  ಕಾರ್ಮಿಕ ಸಾವು

ಜಡೆಯಿಂದ ಡಬಲ್ ಡಕರ್ ಬಸ್ ಎಳೆದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಮಾಡಿದ ಮಹಿಳೆ

ಇತ್ತೀಚಿನ ಸುದ್ದಿ

Exit mobile version