“ಹೊಸ ಧರ್ಮಗಳ ಉದಯ” ಪಾಠ ಬೋಧಿಸದಂತೆ ಆದೇಶ ನೀಡಿದ ಶಿಕ್ಷಣ ಇಲಾಖೆ - Mahanayaka
9:01 PM Friday 20 - September 2024

“ಹೊಸ ಧರ್ಮಗಳ ಉದಯ” ಪಾಠ ಬೋಧಿಸದಂತೆ ಆದೇಶ ನೀಡಿದ ಶಿಕ್ಷಣ ಇಲಾಖೆ

19/02/2021

ಬೆಂಗಳೂರು: 2020-21ನೇ ಸಾಲಿನ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿನ 7ನೇ ಪಾಠ “ಹೊಸ ಧರ್ಮಗಳ ಉದಯ”ವನ್ನು ಬೋಧಿಸದಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯು ಆದೇಶ ಹೊರಡಿಸುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದೆ.

6ನೇ ತರಗತಿಯ ಸಮಾಜ ವಿಜ್ಞಾನ ಭಾಗ-1ರಲ್ಲಿನ ಪಾಠ 7 ಹೊಸ ಧರ್ಮಗಳ ಉದಯ ಈ ಪಾಠದಲ್ಲಿನ ಪುಟ ಸಂಖ್ಯೆ: 82 ಹಾಗೂ 83ರಲ್ಲಿನ ವಿಷಯವನ್ನು  2020-21ನೇ ಶೈಕ್ಷಣಿಕ ಸಾಲಿಗೆ ಬೋಧನೆ-ಕಲಿಕೆಗೆ/ ಮೌಲ್ಯಮಾಪನಕ್ಕೆ ಪರಿಗಣಿಸದಿರುವಂತೆ  ಸೂಚನೆ ನೀಡಲಾಗಿದೆ.

ಈ ಬಗ್ಗೆ ಶಿಕ್ಷಣಧಿಕಾರಿಗಳು ಮತ್ತು ಮುಖ್ಯ ಶಿಕ್ಷಕರಿಗೆ ಸೂಕ್ತ ಸೂಚನೆ ನೀಡಲು ತಿಳಿಸಲಾಗಿದ್ದು,  ಬೋಧನೆ-ಕಲಿಕೆಗೆ, ಮೌಲ್ಯಮಾಪನಕ್ಕೆ ಪರಿಗಣಿಸದಿರುವ ಅಂಶಗಳನ್ನು ಅನುಬಂಧದಲ್ಲಿ ಲಗತ್ತಿಸಲಾಗಿದೆ. ಸದರಿ ವಿಷಯದ ಕುರಿತು ಕೈಗೊಂಡ ಕ್ರಮಗಳ ಬಗ್ಗೆ ದಿನಾಂಕ 28-02-2021ರೊಳಗೆ ವರದಿ ನೀಡಲು ಸೂಚನೆ ನೀಡಲಾಗಿದೆ.


Provided by

ಸರ್ಕಾರದ ಈ ಆದೇಶವು ಇದೀಗ ಹೊಸ ವಿವಾದವನ್ನು ಸೃಷ್ಟಿಸಿದ್ದು, ಹೊಸ ಧರ್ಮಗಳ ಉದಯದ ಇತಿಹಾಸವನ್ನು ಸರ್ಕಾರ ಮರೆ ಮಾಡಲು ಮುಂದಾಗಿದೆ. ಸರ್ಕಾರ ತನ್ನ ಸೂಚನೆಯ ಬಗ್ಗೆ ತಕ್ಷಣವೇ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಬೇಕು ಎಂಬ ಆಗ್ರಹಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ