ಹೊಸ ಜೀವನಕ್ಕೆ ಕಾಲಿಟ್ಟ ಆಸಿಡ್ ದಾಳಿಯ ಸಂತ್ರಸ್ತೆ

03/03/2021

ಭುವನೇಶ್ವರ: ಆಸಿಡ್ ದಾಳಿಯಿಂದ ಮುಖದ ಸೌಂದರ್ಯ ಹೋಯಿತು. ಕಣ್ಣುಗಳನ್ನೂ ಆಕೆ ಕಳೆದುಕೊಂಡರು. ಆದರೆ ಆ ಯುವತಿಯ ಬಾಳಿನಲ್ಲಿ ಆಕೆಯ ಬಾಲ್ಯ ಸ್ನೇಹಿತ ಬೆಳಕು ತುಂಬಿದ್ದಾನೆ.

ಒಡಿಶಾದ “ಚಪಾಕ್” ಹುಡುಗಿ ಎಂದೇ ಕರೆಯಲ್ಪಡುವ ಪ್ರಮೋದಿನಿ ಆಸಿಡ್ ದಾಳಿಯಿಂದ ತತ್ತರಿಸಿ ಹೋಗಿದ್ದರೂ ಇದೀಗ ಅವರು ತಮ್ಮ ಬಾಲ್ಯದ ಸ್ನೇಹಿತ ಸರೋಜ್ ಸಾಹೂ ಅವರನ್ನು ಮದುವೆಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

2009ರಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಸಂತೋಷ್ ಎಂಬಾತ ಪ್ರಮೋದಿನಿಯ ಬಾಳನ್ನು ಕತ್ತಲೆಗೆ ದೂಡಿದ್ದ. ಪ್ರಮೋದಿನಿಯ ಬಳಿ ಸಂತೋಷ್  ಪ್ರೇಮ ನಿವೇದನೆ ಮಾಡಿಕೊಂಡಿದ್ದಾನೆ. ಆದರೆ ಆಕೆ ಇದಕ್ಕೆ ನಿರಾಕರಿಸಿದ್ದಾಳೆ. ಇದರಿಂದ ಕೋಪಗೊಂಡ ಆತ ಪ್ರಮೋದಿನಿ ಮುಖಕ್ಕೆ ಆಸಿಡ್ ಎರಚಿದ್ದ. ಇದರ ಪರಿಣಾಮ ಆಕೆ ಶೇ.80ರಷ್ಟು ಗಾಯಗೊಂಡಿದ್ದು, ತಮ್ಮ ಎರಡೂ ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.

ಆಸಿಡ್ ದಾಳಿಗೊಳಗಾಗಿದ್ದ ಪ್ರಮೋದಿನಿ ಐದು ವರ್ಷಗಳ ಕಾಲ ಕಟಕ್ ನ ಎಸ್ ಸಿಬಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ತನ್ನ ಮೇಲೆ ನಡೆದ ದಾಳಿ ಹಾಗೂ ಸುದೀರ್ಘವಾಗಿ ನಡೆದ ಚಿಕಿತ್ಸೆಯಿಂದ ಪ್ರಮೋದಿನಿ ಕಂಗಾಲಾಗಿದ್ದರು. ಇದಾದ ಬಳಿಕ ತಮ್ಮ ಸ್ನೇಹಿತ ಸರೋಜ್ ಪ್ರಮೋದಿನಿ ಅವರನ್ನು ಭೇಟಿಯಾಗಿದ್ದು, ಆಕೆಗೆ ಮಾರ್ಗದರ್ಶಕರಾಗಿ ಆಧಾರ ಸ್ತಂಭವಾಗಿದ್ದಾರೆ.  ಹೀಗೆ 2018ರಲ್ಲಿ ಇವರಿಬ್ಬರೂ ಪ್ರೇಮಿಗಳ ದಿನದಂದು ವಿವಾಹ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ವಿವಾಹವಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ.

whatsapp

ಇತ್ತೀಚಿನ ಸುದ್ದಿ

Exit mobile version