ಛತ್ತೀಸ್ ಗಢ : ಪಿಯುಸಿ ವಿದ್ಯಾರ್ಥಿಗಳಿಗೆ “ಎಕ್ಸಾಮ್ ಫ್ರಂ ಹೋಮ್” ಹೊಸ ಮಾದರಿಯ ಪರೀಕ್ಷೆ - Mahanayaka
3:47 AM Wednesday 11 - December 2024

ಛತ್ತೀಸ್ ಗಢ : ಪಿಯುಸಿ ವಿದ್ಯಾರ್ಥಿಗಳಿಗೆ “ಎಕ್ಸಾಮ್ ಫ್ರಂ ಹೋಮ್” ಹೊಸ ಮಾದರಿಯ ಪರೀಕ್ಷೆ

exam from home
23/05/2021

ರಾಯ್ಪುರ: ಕೊವಿಡ್ ಸಂಕಷ್ಟದ ನಡುವೆಯೇ ಛತ್ತೀಸ್ ಗಢ ಪ್ರೌಢ ಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದ್ದು, ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ “ಎಕ್ಸಾಮ್ ಫ್ರಮ್ ಹೋಮ್” ಎಂಬ ಹೊಸ ಮಾದರಿಯ ಪರೀಕ್ಷೆ ನಡೆಸಲು ನಿರ್ಧರಿಸಿದೆ.

ವಿದ್ಯಾರ್ಥಿಗಳಿಗೆ ನಿಗದಿತ ಕೇಂದ್ರಗಳಿಂದ ಪ್ರಶ್ನೆ ಪತ್ರಿಕೆ ಹಾಗೂ ಖಾಲಿ ಉತ್ತರ ಪತ್ರಿಕೆಯನ್ನು ನೀಡಲಾಗುವುದು. ಈ ಉತ್ತರ ಪತ್ರಿಕೆಗೆ ಐದು ದಿನಗಳಲ್ಲಿ ಉತ್ತರ ಬರೆದು ಸಲ್ಲಿಸಲು ತಿಳಿಸಲಾಗಿದೆ.

ಜೂನ್ 1ರಿಂದ 5ರವರೆಗೆ  5 ದಿನಗಳ ಕಾಲಾವಕಾಶವನ್ನು ನೀಡಲಾಗಿದೆ. ಈ ಬಗ್ಗೆ ಛತ್ತೀಸ್ ಗಢ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ವಿ.ಕೆ.ಗೋಯೆಲ್ ಅಧಿಕೃತ ಆದೇಶ ಹೊರಡಿಸಿದ್ದಾರೆ.

2.86 ಲಕ್ಷ ವಿದ್ಯಾರ್ಥಿಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.  ಜೂನ್ 1ರಿಂದ 5ರ ನಡುವಿನ ಯಾವುದೇ ದಿನದಲ್ಲಿ ಪ್ರಶ್ನೆ ಪತ್ರಿಕೆ ಪಡೆದುಕೊಂಡು, 5ರೊಳಗೆ ಉತ್ತರ ಬರೆದು ಸಲ್ಲಿಸಬೇಕು ಎಂದು ತಿಳಿಸಲಾಗಿದೆ.

ಇತ್ತೀಚಿನ ಸುದ್ದಿ