ಸಂವಿಧಾನ ಪರ ಸಂಘಟನೆಗಳಿಂದ ಹೊಸ ಮಾಧ್ಯಮ ತರಲು ಗಂಭೀರ ಚಿಂತನೆ! - Mahanayaka
3:59 PM Thursday 12 - December 2024

ಸಂವಿಧಾನ ಪರ ಸಂಘಟನೆಗಳಿಂದ ಹೊಸ ಮಾಧ್ಯಮ ತರಲು ಗಂಭೀರ ಚಿಂತನೆ!

samvidhan
20/02/2022

ಬೆಂಗಳೂರು: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ನ್ಯಾಯಾಧೀಶರೊಬ್ಬರು ಅವಮಾನಿಸಿರುವುದನ್ನು ವಿರೋಧಿಸಿ, ನಿನ್ನೆ ಸಂವಿಧಾನ ಸಂರಕ್ಷಣಾ ಒಕ್ಕೂಟ ಬೆಂಗಳೂರಿನಲ್ಲಿ ‘ವಿಧಾನಸೌಧ-ಹೈಕೋರ್ಟ್ ಚಲೋ’ ಬೃಹತ್ ಹೋರಾಟ ನಡೆಸಿತ್ತು. ಇಡೀ ಬೆಂಗಳೂರೇ ನೀಲಿ ಮಯವಾದರೂ ದೃಶ್ಯ ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗದ ಬಗ್ಗೆ ಹೋರಾಟಗಾರರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಸದ್ಯ ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಗಳಾಗುತ್ತಿದ್ದು, ಬಹುತೇಕ ಸರ್ಕಾರಿ ನೌಕರರು, ಪತ್ರಕರ್ತರು, ಸಣ್ಣ ಉದ್ಯಮಿಗಳು ಹೊಸ ಮಾಧ್ಯಮವೊಂದನ್ನು ಕರ್ನಾಟಕದಲ್ಲಿ ಲಾಂಚ್ ಮಾಡುವ ಬಗ್ಗೆ ಗಂಭೀರ ಚಿಂತನೆ ನಡೆಸಿದ್ದಾರೆ.

ಸಂವಿಧಾನ ಸಂರಕ್ಷಣಾ ಒಕ್ಕೂಟದ ನೇತೃತ್ವದಲ್ಲಿ ಒಂದು ಹೊಸ ಮಾಧ್ಯಮವನ್ನು ತರಬೇಕು. ಈ ಮೂಲಕ ಶೋಷಿತರ ಪರವಾಗಿ ಧ್ವನಿಯಾಗಬೇಕು ಎನ್ನುವ ಕೂಗು ಕೇಳಿ ಬಂದಿದೆ.

ಒಂದು ಮಾಧ್ಯಮವನ್ನು ಸೃಷ್ಟಿಸುವುದು ಸುಲಭದ ಕೆಲಸ, ಆದರೆ ಅದನ್ನು ಮುನ್ನಡೆಸುವುದು ಬಹಳ ಕಷ್ಟಕರವಾದ ಕೆಲಸ. ಹಾಗಾಗಿ ಒಂದು ವ್ಯವಸ್ಥಿತ ಮಾಧ್ಯಮವನ್ನು ತರಬೇಕು. ಕರ್ನಾಟಕದಲ್ಲಿ ಸಂವಿಧಾನ ಪರ ಸಂಘಟನೆಗಳು ಒಂದು ಮಾಧ್ಯಮ ಆರಂಭಿಸಿದರೆ, ಜಾತಿ ವಾದಿ ಪರ  ಮಾಧ್ಯಮಗಳಿಗೆ ಒಂದು ಪರ್ಯಾಯ ಶಕ್ತಿಯಾಗುತ್ತದೆ ಎನ್ನುವ ಅಭಿಪ್ರಾಯಗಳು ಕೂಡ ಕೇಳಿ ಬಂದಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಭೀಕರ ರಸ್ತೆ ಅಪಘಾತ: ಜಾತ್ರೆಗೆ ತೆರಳುತ್ತಿದ್ದ ಐವರು ಸಾವು; ಓರ್ವ ಗಂಭೀರ

ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ

ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇನೆ ಎಂಬ ಹೇಳಿಕೆ: ಸಚಿವ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ

ಮತಗಟ್ಟೆಯಲ್ಲಿ ನೂಕುನುಗ್ಗಲು: ಕ್ಷಮೆ ಕೇಳಿದ ತಮಿಳು ನಟ ವಿಜಯ್

ಜಮ್ಮು ಕಾಶ್ಮಿರದಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ; ಇಬ್ಬರು ಯೋಧರು ಹುತಾತ್ಮ

ಇತ್ತೀಚಿನ ಸುದ್ದಿ