ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸಿ ಬೆಳ್ತಂಗಡಿಯಲ್ಲಿ ಕ್ಯಾಂಪಸ್ ಫ್ರಂಟ್ ತಹಶೀಲ್ದಾರ್ ಕಚೇರಿಗೆ ಮಾರ್ಚ್
ಬೆಳ್ತಂಗಡಿ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯು ಭವಿಷ್ಯದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕತ್ತರಿ ಹಾಕುವ ನೀತಿಯಾಗಿದ್ದು ಈ ವ್ಯವಸ್ಥೆಯನ್ನು ಜಾರಿಗೊಳಿಸುವ ತೀರ್ಮಾನವನ್ನು ಕೈಗೊಂಡಿದ್ದು, ಇದನ್ನು ತಕ್ಷಣಾ ಹಿಂಪಡೆಯಬೇಕೆಂದು ಆಗ್ರಹಿಸಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಸಮಿತಿ ವತಿಯಿಂದ ತಹಶೀಲ್ದಾರ್ ಕಚೇರಿಗೆ ಮಾರ್ಚ್ ಮೂಲಕ ಪ್ರತಿಭಟಿಸಲಾಯಿತು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ನಾಯಕಿ ಗೌಸಿಯಾ ಮಂಗಳೂರು ಮಾತನಾಡಿ ಹೊಸ ಶಿಕ್ಷಣ ನೀತಿಯನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಚರ್ಚೆ ನಡೆಸದೆ, ತರಾತುರಿಯಲ್ಲಿ ಹಿಂಬಾಗಿಲಿನ ಮೂಲಕ ಜಾರಿಗೊಳಿಸಲು ಸರಕಾರವು ಹೊರಟಿದೆ. ಇದು ಭಾರತದ ಒಕ್ಕೂಟ ವ್ಯವಸ್ಥೆ ಮತ್ತು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ. ಇದು ಸಂಪೂರ್ಣವಾಗಿ ಕೇಸರೀಕರಣಗೊಳಿಸುವ ಮತ್ತು ಖಾಸಗೀಕರಣಗೊಳಿಸುವ ಹುನ್ನಾರ ವಾಗಿದೆ, ಹಾಗೂ ಹೊಸ ಶಿಕ್ಷಣ ನೀತಿಯ ಅಡಿಯಲ್ಲಿ 3 ವರ್ಷ ಇರುವ ಪದವಿಯನ್ನು 4 ವರ್ಷಕ್ಕೆ ಏರಿಸಿದ್ದು, ಒಂದು ವರ್ಷ ಪದವಿ ಕಲಿತರೂ ಪ್ರಮಾಣ ಪತ್ರ ನೀಡುವಂತಹ ಈ ನೀತಿಯಿಂದ ಮೌಲ್ಯಯುತ ಶಿಕ್ಷಣಕ್ಕೆ ತೊಂದರೆಯಾಗಲಿದೆ, ಮತ್ತು ನಿರುದ್ಯೋಗ ಸಮಸ್ಯೆ ಇನ್ನೂ ಹೆಚ್ಚಾಗಲಿದೆ. ಆದ್ದರಿಂದ ರಾಜ್ಯದಲ್ಲಿ ಜಾರಿ ಮಾಡುತ್ತಿರುವ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ತಕ್ಷಣ ಹಿಂಪಡೆಯಬೇಕೆಂದು ಆಗ್ರಹಿಸಿದರು.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ದ.ಕ. ಜಿಲ್ಲಾ ಮುಖಂಡ, ರಿಯಾಜ್ ಅಂಕತಡ್ಕ ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಮೊದಲ ಧ್ವನಿ ಕ್ಯಾಂಪಸ್ ಫ್ರಂಟ್ ಎತ್ತಿದೆ. ಹಲವಾರು ಹೋರಾಟಗಳನ್ನು ಮಾಡಿದೆ. ಮುಂದೆಯೂ ನಾವು ಜಿಲ್ಲಾ ಕೇಂದ್ರಗಳಲ್ಲಿ ಮಾಡಲಿದ್ದೇವೆ ಎಂದು ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.
ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾಧ್ಯಕ್ಷ ಯಾಸೀನ್ ಬಂಗೇರಕಟ್ಟೆ NEP ಯು ಒಂದು ಸಿದ್ಧಾಂತದಿಂದ ಕೂಡಿದೆ. ಇದರ ವಿರುದ್ಧ ಕ್ಯಾಂಪಸ್ ಫ್ರಂಟ್ ಕೊನೆಯ ಸದಸ್ಯ ಇರುವವರೆಗೂ ವಿರೋಧಿಸಿಯೇ ತೀರುವೆವು ಎಂದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ಕಾರ್ಯದರ್ಶಿ ಶಹೀರ್ ಪಾಂಡವರಕಲ್ಲು, ಜಿಲ್ಲಾ ಕೋಶಾಧಿಕಾರಿ ಝಾಹೀದ್ ಸುನ್ನತ್ಕೆರೆ, ಜಿಲ್ಲಾ ನಾಯಕರಾದ ಸಹಝಾದ್, ಫೈಝಲ್ ಬಂಗೇರಕಟ್ಟೆ ಹಾಗೂ ನೂರಾರು ವಿದ್ಯಾರ್ಥಿ ಹಾಗು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ರಸ್ತೆ ಬದಿಯ 10 ಟನ್ ಸ್ಫೋಟಕ ತುಂಬಿದ್ದ ಲಾರಿ ನಿಂತದ್ದು ಕಂಡು ಬೆಚ್ಚಿಬಿದ್ದ ಜನರು!
ಶಾಕಿಂಗ್ ನ್ಯೂಸ್: ಹುಟ್ಟು ಹಬ್ಬದ ಪಾರ್ಟಿಗೆ ಆಗಮಿಸಿದ್ದ ಮಹಿಳಾ ಪೊಲೀಸ್ ಮೇಲೆ ಸಾಮೂಹಿಕ ಅತ್ಯಾಚಾರ
ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ | ಬಿಜೆಪಿ ಸಂಸದನಿಗೂ ಗಾಯ
“ಗದ್ದೆ ನೋಡಲು ಹೋಗೋಣ ಬಾ” ಎಂದು ಪತ್ನಿಯನ್ನು ಕರೆದೊಯ್ದು ಹತ್ಯೆ ಮಾಡಿದವನಿಗೆ ಜೀವಾವಧಿ ಶಿಕ್ಷೆ
ಸೆ.27ರಂದು ಭಾರತ ಬಂದ್: ಈ ಬಾರಿ ಬಂದ್ ತೀವ್ರ ರೀತಿಯಲ್ಲಿ ನಡೆಯಲಿದೆ | ಕೋಡಿಹಳ್ಳಿ ಚಂದ್ರಶೇಖರ್