ಹೊಸ ವರ್ಷಾಚರಣೆಗೆ ಬಜರಂಗದಳ ವಿರೋಧ - Mahanayaka
11:19 AM Thursday 12 - December 2024

ಹೊಸ ವರ್ಷಾಚರಣೆಗೆ ಬಜರಂಗದಳ ವಿರೋಧ

bajarangadal
31/12/2021

ವಾರಾಣಸಿ: ಹೊಸ ವರ್ಷಾಚರಣೆಗೂ ಬಜರಂಗದಳ ವಿರೋಧ ವ್ಯಕ್ತಪಡಿಸಿದ್ದು, ಇದರ ವಿರುದ್ಧ ವಾರಣಾಸಿಯ ಸಾರ್ವಜನಿಕ ಸ್ಥಳಗಳಾದ ಹೊಟೇಲ್ ಮಾಲ್ ಗಳಲ್ಲಿ ಪೋಸ್ಟರ್ ಅಂಟಿಸಿ ವಿರೋಧ ವ್ಯಕ್ತಪಡಿಸಿದೆ.

ಹೊಸ ವರ್ಷಾಚರಣೆ ಪಾಶ್ಚಿಮಾತ್ಯ ಸಂಸ್ಕೃತಿ ಎಂದು ಹೇಳಿರುವ ಬಜರಂಗದಳದ ಮುಖಂಡರು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಹೊಸ ವರ್ಷಾಚರಣೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಜರಂಗದಳದ ಸಂಚಾಲಕ ನಿಖಿಲ್ ತ್ರಿಪಾಠ ರುದ್ರ ಈ ಬಗ್ಗೆ ಪ್ರತಿಕ್ರಿಯಿಸಿ, ಹೊಸ ವರ್ಷಾಚರಣೆ ಅರ್ಥ ಹೀನ. ಇದರಲ್ಲಿ ಯಾವುದೇ ನೈತಿಕತೆ ಇಲ್ಲ. ಇದಕ್ಕೂ ಆಧ್ಯಾತ್ಮಿಕತೆಗೆ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಇದು ಯುವಜನತೆಯನ್ನು ತಪ್ಪು ದಾರಿಗೆ ಎಳೆಯುತ್ತದೆ. ಇದರ ವಿರುದ್ಧ ಪೊಲೀಸ್ ಅನುಮತಿಯೊಂದಿಗೆ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕ್ರಿಸ್ಮಸ್ ಆಚರಣೆಗೆ ಅಡ್ಡಿ:  ಬಜರಂಗದಳ ಕಾರ್ಯಕರ್ತರನ್ನು ತರಾಟೆಗೆತ್ತಿಕೊಂಡ ಮಹಿಳೆಯರು | ವಿಡಿಯೋ ವೈರಲ್

ಸಿಹಿ ಸುದ್ದಿ ಹಂಚಿಕೊಂಡ ನಟಿ ರಶ್ಮಿಕಾ ಮಂದಣ್ಣ

ಅರುಣ್ ಸಿಂಗ್ ಮುಂದೆ ತನ್ನ ಬಯಕೆ ಹೇಳಿಕೊಂಡ ರೇಣುಕಾಚಾರ್ಯ

“ರಾಜ್ಯದಲ್ಲಿ ಕಾಂಗ್ರೆಸ್ ಪರ ಗಾಳಿ ಬೀಸುತ್ತಿದೆ”

ನಾಳೆ ಕರ್ನಾಟಕ ಬಂದ್ ಇದೆಯಾ?  | ಸಿಎಂ ಜೊತೆಗೆ ಕನ್ನಡ ಪರ ಸಂಘಟನೆ ಸಭೆ 

ಇತ್ತೀಚಿನ ಸುದ್ದಿ