ರಸ್ತೆಯಲ್ಲಿ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ವೇಳೆ ಅಪಘಾತ | ಇಬ್ಬರು ಯುವಕರ ದಾರುಣ ಸಾವು - Mahanayaka
10:23 AM Wednesday 15 - January 2025

ರಸ್ತೆಯಲ್ಲಿ ಹೊಸ ವರ್ಷದ ಶುಭಾಶಯ ಬರೆಯುತ್ತಿದ್ದ ವೇಳೆ ಅಪಘಾತ | ಇಬ್ಬರು ಯುವಕರ ದಾರುಣ ಸಾವು

01/01/2021

ಉಡುಪಿ: ಹೊಸ ವರ್ಷದ ಹುಮ್ಮಸ್ಸಿನಲ್ಲಿ ರಸ್ತೆಯಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಬರೆಯುತ್ತಿದ್ದ ವೇಳೆ ವೇಗವಾಗಿ ಬಂದ ಕಾರೊಂದು ಡಿಕ್ಕಿಯಾಗಿ ಇಬ್ಬರು ಯುವಕರು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮೀಯಾರು ಕಾಜರಬೈಲು ಬಳಿ ನಡೆದಿದೆ.

ಶರಣ್(32), ಸಿದ್ದು(28) ಮೃತಪಟ್ಟವರಾಗಿದ್ದಾರೆ.  ಇವರಿಬ್ಬರು ಕೂಡ ಬಾಗಲಕೋಡೆ ಮೂಲದವರು ಎಂದು ತಿಳಿದು ಬಂದಿದೆ. ಉಡುಪಿಯಲ್ಲಿ ಟಿಪ್ಪರ್ ಚಾಲಕರಾಗಿ ಕೆಲಸ ಮಾಡುತ್ತಿದ್ದ ಇವರು, ಹೊಸ ವರ್ಷ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಶುಭಾಶಯ ಬರೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.


ADS

ನಿನ್ನೆ ತಡರಾತ್ರಿ ಶರಣ್ ಹಾಗೂ ಸಿದ್ದು  ಹೊಸ ವರ್ಷದ ಹುಮ್ಮಸ್ಸಿನಲ್ಲಿ ಶುಭಾಶಯ ಬರೆಯುತ್ತಿದ್ದರು. ಆದರೆ ಹೊಸ ವರ್ಷದಂದೇ ಇವರಿಬ್ಬರು ರಸ್ತೆ ಅಪಘಾತದಿಂದಾಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ  ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ