ಜ್ವರ, ವಾಂತಿಯಿಂದ ಮಹಿಳೆ ನರಳುತ್ತಿದ್ದರೂ ತಿರುಗಿಯೂ ನೋಡದ ಆಸ್ಪತ್ರೆ ಸಿಬ್ಬಂದಿ: ಇದೆಂಥಾ ಅಮಾನವೀಯತೆ

shringeri
22/10/2023

ಚಿಕ್ಕಮಗಳೂರು :  ತೀವ್ರ ಜ್ವರ, ವಾಂತಿಯಿಂದ ರೋಗಿಯೋರ್ವ ಪರದಾಡುತ್ತಿದ್ದರೂ,  ಆಸ್ಪತ್ರೆ ಸಿಬ್ಬಂದಿ ಅತ್ತ ಕಡೆಗೆ ತಿರುಗಿಯೂ ನೋಡದ ಅಮಾನವೀಯ ಘಟನೆ ಶೃಂಗೇರಿ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಬೆಳಗ್ಗೆಯಿಂದ ಆಸ್ಪತ್ರೆ ಆವರಣದ ಬೆಂಚ್ ಮೇಲೆ ಮಲಗಿದ್ದ ರೋಗಿಗೆ ಚಿಕಿತ್ಸೆ ನೀಡಲು ಆಸ್ಪತ್ರೆ ಸಿಬ್ಬಂದಿ, ವೈದ್ಯರು ಮುಂದಾಗಿಲ್ಲ. ಆಸ್ಪತ್ರೆಯಲ್ಲಿ ಬೆಡ್ ಇದ್ರು ಕೂಡ ದಾಖಲು ಮಾಡಿಕೊಳ್ಳದೇ ನಿರ್ಲಕ್ಷ್ಯವಹಿಸಲಾಗಿದೆ.

ತೀವ್ರ ಅನಾರೋಗ್ಯವಿದ್ರು ಚಿಕಿತ್ಸೆ ನೀಡದ ಶೃಂಗೇರಿ ತಾಲೂಕು ಆಸ್ಪತ್ರೆ ವಿರುದ್ಧ ಸಾರ್ವಜನಿಕರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಚ್ ಮೇಲೆ ಮಲಗಿ ಮಹಿಳೆ ನರಳಾಡಿದ್ರು ತಿರುಗಿಯು ನೋಡದ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಶೃಂಗೇರಿ  ತಾಲೂಕಿನ ಅಡ್ಡಗದ್ದೆ ಗ್ರಾಮದಿಂದ ಆಸ್ಪತ್ರೆಗೆ ಬಂದಿದ್ದ ದಂಪತಿ, ತೀವ್ರ ಜ್ವರ ವಾಂತಿಯಿಂದ ಅಸ್ವಸ್ಥವಾಗಿದ್ದ ಮಹಿಳೆ ಕಮಲ ಎಂಬ ಮಹಿಳೆ ಸೂಕ್ತ ಚಿಕಿತ್ಸೆ ದೊರಕದೇ ಕಂಗಾಲಾಗಿದ್ದಾರೆ. ಬೆಳಗ್ಗೆ ಆಸ್ಪತ್ರೆಗೆ ಬಂದ್ರು ಚಿಕಿತ್ಸೆ ಶೃಂಗೇರಿ ತಾಲೂಕು ಆಸ್ಪತ್ರೆಯ ಸಿಬ್ಬಂದಿ ಚಿಕಿತ್ಸೆ ನೀಡದೇ ನಿರ್ಲಕ್ಷ್ಯವಹಿಸಿದ್ದಾರೆ.

ಬೆಳಗ್ಗೆಯಿಂದ ಸಂಜೆ ವರೆಗೂ ಮಹಿಳೆ ಬೆಂಚ್ ಮೇಲೆ ಮಲಗಿ ನರಳಾಡಿದ್ದಾರೆ. ಮಹಿಳೆಯ ಪರದಾಟ ನೋಡಿ ಆಸ್ಪತ್ರೆ ಸಿಬ್ಬಂದಿಗೆ ಸಾರ್ವಜನಿಕರು ಕ್ಲಾಸ್ ತೆಗೆದುಕೊಂಡಿದ್ದಾರೆ. ಸಾರ್ವಜನಿಕರು ಆಕ್ರೋಶ ಹೆಚ್ಚಾಗ್ತಿದ್ದಂತೆಯೇ ಬೇರೆ ಉಪಾಯವಿಲ್ಲದೇ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿಕೊಂಡಿದ್ದಾರೆ.

ನಿನ್ನೆ ಚಿಕಿತ್ಸೆ ಸಿಗದೆ ಬೆಳಗ್ಗೆಯಿಂದ ಸಂಜೆವರೆಗೂ ಮಹಿಳೆ ಕಮಲ ಗೋಳಾಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ವಿರುದ್ಧ ತಕ್ಷಣವೇ ಮೇಲಾಧಿಕಾರಿಗಳು ಸೂಕ್ತ ಕಾನೂನು ಕ್ರಮವಹಿಸಬೇಕು ಎನ್ನುವ ಒತ್ತಾಯ ಕೇಳಿ ಬಂದಿದೆ.

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version