ನೋಡ ನೋಡುತ್ತಿದ್ದಂತೆಯೇ ಉರುಳಿ ಬಿದ್ದ ಮೂರು ಅಂತಸ್ತಿನ ಹೊಟೇಲ್ ಕಟ್ಟಡ!
ಉತ್ತರಾಖಂಡ: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಭೂಕುಸಿತಗಳು ನಡೆಯುತ್ತಿದ್ದು, ಮಳೆ ನೀರಿನಿಂದ ಪರ್ವತಗಳ ಮಣ್ಣು ದುರ್ಬಲವಾಗಿ ಭೂಕುಸಿತಗಳು ಸಂಭವಿಸುತ್ತಿವೆ. ಇಲ್ಲಿನ ಜೋಶಿಮಠದ ಜಡ್ಕುಲಾ ಪ್ರದೇಶದಲ್ಲಿರುವ ಮೂರು ಅಂತಸ್ತಿನ ಹೊಟೇಲೊಂದು ನೋಡನೋಡುತ್ತಿದ್ದಂತೆಯೇ ಧರೆಗುರುಳಿದೆ.
ಜೋಶಿಮಠದ ಬದರಿನಾಥ ಹೆದ್ದಾರಿ ಬದಿಯಲ್ಲಿರುವ ಮೂರು ಅಂತಸ್ತಿನ ಹೊಟೇಲ್ ನ ಒಂದು ಭಾಗ ಏಕಾಏಕಿ ಕುಸಿದಿದೆ. ಈ ಭೀಕರ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ವರದಿಗಳ ಪ್ರಕಾರ ಹೊಟೇಲ್ ಆಡಳಿತ ಮಂಡಳಿಯು ಅಪಾಯದ ಮುನ್ನೆಚ್ಚರಿಕೆಯಿಂದ ಶನಿವಾರ ಬೆಳಗ್ಗೆ ಹೊಟೇಲ್ ನ್ನು ಸಂಪೂರ್ಣವಾಗಿ ಖಾಲಿ ಮಾಡಿಸಿದೆ. ಮಧ್ಯಾಹ್ನದ ವೇಳೆಗೆ ಕಟ್ಟಡದ ಒಂದು ಭಾಗ ಸಂಪೂರ್ಣವಾಗಿ ಉರುಳಿ ಬಿದ್ದಿದೆ.
ಇನ್ನೂ ತೀವ್ರವಾದ ಭೂಕುಸಿತದಿಂದ ಬದರಿನಾಥ ಹೆದ್ದಾರಿಯ ಸುಮಾರು 200 ಮೀಟರ್ ವ್ಯಾಪ್ತಿ ಅಪಾಯಕ್ಕೆ ಸಿಲುಕಿದ್ದು, ಸದ್ಯ ಹೊಟೇಲ್ ಕುಸಿದು ಬಿದ್ದ ಪ್ರದೇಶಕ್ಕಿಂತಲೂ ಕೆಳಗಡೆ ಜನವಸತಿ ಪ್ರದೇಶ ಕೂಡ ಇದೆ. ಆದರೆ ಅದೃಷ್ಟವಶಾತ್ ಯಾರಿಗೂ ಅಪಾಯವಾಗಿಲ್ಲ.
ತಪೋವನ್ ವಿಷ್ಣುಗಡ್ ಜಲವಿದ್ಯುತ್ ಯೋಜನೆಯ ಸುರಂಗದ ಮುಂದೆ ಭಾರೀ ಭೂಕುಸಿತ ಉಂಟಾಗಿತ್ತು. ಮತ್ತೊಂದೆಡೆ, ತೆಹ್ರಿಯ, ಚಂಬಾ ಧರಸು ಹೆದ್ದಾರಿ ಶನಿವಾರ ಬೆಳಿಗ್ಗೆ 7 ಗಂಟೆಗಳ ಕಾಲ ಮುಚ್ಚಲ್ಪಟ್ಟಿತ್ತು. ಇಲ್ಲಿನ ಗೋಜ್ಮೇರ್ ಹಳ್ಳಿಯ ಬಳಿ ಭಾರೀ ಭೂಕುಸಿತ ಉಂಟಾಗಿ ಹೆದ್ದಾರಿಯ ಎರಡೂ ಬದಿಗಳಲ್ಲಿ ವಾಹನಗಳು ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂತು.
#WATCH | Uttarakhand: A part of a hotel building collapses near Jhadkula in Joshimath.
The administration had vacated the hotel this morning. pic.twitter.com/zaKgVkVLZq
— ANI (@ANI) August 7, 2021
ಇನ್ನಷ್ಟು ಸುದ್ದಿಗಳು…
ಎಲ್ಲ ವಿದ್ಯಾರ್ಥಿಗಳು ಪಾಸ್, ಶಿಕ್ಷಣ ಸಚಿವರು ಫೇಲ್! | ರಿ ಎಕ್ಸಾಮ್ ಬರೀತಾರಾ ಸುರೇಶ್ ಕುಮಾರ್?
403 ಕ್ಷೇತ್ರಗಳಲ್ಲಿಯೂ ASP ಸ್ಪರ್ಧೆ | ಮಾಯಾವತಿಗೆ ಅಸುರಕ್ಷಿತ ಭಾವನೆ ಇದೆ- ಚಂದ್ರಶೇಖರ್ ಆಜಾದ್