ಹೊಟೇಲ್ ನಲ್ಲಿ 16 ವರ್ಷ ವಯಸ್ಸಿನ ಬಾಲಕಿಯ ಅತ್ಯಾಚಾರ | ಬಿಜೆಪಿ, ಜೆಡಿಯು ಮುಖಂಡರ ಸಹಿತ ಮೂವರ ಬಂಧನ
ಭೋಪಾಲ್: ವೇಶ್ಯಾವಾಟಿಕೆಗೆ ತಳ್ಳಲ್ಪಟ್ಟಿದ್ದ ಹರ್ಯಾಣ ಮೂಲದ 16 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಜೆಪಿ ನಾಯಕ ಮತ್ತು ಜೆಡಿಯು ನಾಯಕನನ್ನು ಭೋಪಾಲ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಹರ್ಯಾಣದ ಪಲ್ವಾಲ್ ಜಿಲ್ಲೆಯ ನಿವಾಸಿ 16 ವರ್ಷ ವಯಸ್ಸಿನ ಬಾಲಕಿಗೆ ಮನೆಯಲ್ಲಿ ಪೋಷಕರು ಗದರಿದ್ದು, ಇದರಿಂದ ನೊಂದ ಬಾಲಕಿ ಆಗಸ್ಟ್ 13ರಂದು ಮನೆ ಬಿಟ್ಟು ಪರಾರಿಯಾಗಿದ್ದಾಳೆ. ಬಳಿಕ ಆಗ್ರಾದ ರೈಲು ಹತ್ತಿದ್ದಳು. ಈ ಸಂದರ್ಭ ಆಕೆಗೆ ಸೀಮಾ ಮತ್ತು ಪಾರುಲ್ ಎಂಬ ಇಬ್ಬರು ಮಹಿಳೆಯರ ಪರಿಚಯವಾಗಿದೆ. ಅವರು ಬಾಲಕಿಯನ್ನು ವಿಚಾರಿಸಿದಾಗ ಆಕೆ ಮನೆ ಬಿಟ್ಟು ಬಂದಿರುವುದು ಮತ್ತು ಕೆಲಸ ಹುಡುಕಿಕೊಂಡು ಹೊರಟಿರುವುದು ಅವರಿಗೆ ತಿಳಿದಿದೆ.
ಬಾಲಕಿಗೆ ಯಾರೂ ಇಲ್ಲ ಎನ್ನುವುದು ತಿಳಿಯುತ್ತಿದ್ದಂತೆಯೇ ಮಹಿಳೆಯರು, ನಿನಗೆ ಭೋಪಾಲ್ ನಲ್ಲಿ ಉತ್ತಮ ಉದ್ಯೋಗ ನೀಡುತ್ತೇವೆ ಎಂದು ಭರವಸೆ ನೀಡಿ ಭೋಪಾಲ್ ಗೆ ಕರೆದೊಯ್ದಿದ್ದು, ಕೆಲಸ ಕೊಡಿಸುವ ಬದಲು ವೇಶ್ಯಾವಾಟಿಕೆಗೆ ದೂಡಿದ್ದಾರೆ.
ಈ ನಡುವೆ ಕಳೆದ ತಿಂಗಳು ಭೋಪಾಲ್ ನ ಟಿಟಿ ನಗರದ ಹೊಟೇಲ್ ನಲ್ಲಿ ಇದೇ ಬಾಲಕಿಯ ಮೇಲೆ ಬಿಜೆಪಿಯ ಮಾಜಿ ಮಂಡಲ ಅಧ್ಯಕ್ಷ, ದಿಂಡೋರಿ ಜಿಲ್ಲೆಯ ಕಚೇರಿ ಕಾರ್ಯದರ್ಶಿ ಮನೀಶ್ ನಾಯಕ್, ಜೆಡಿಯು ದಿಂಡೋರಿ ಜಿಲ್ಲಾ ಅಧ್ಯಕ್ಷ ದಿನೇಶ್ ಅವಧಿಯಾ ಮತ್ತು ಪೆಟ್ರೋಲ್ ಪಂಪ್ ಮಾಲಿಕ ಅಮಿತ್ ಸೋನಿ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಘಟನೆಗೆ ಸಂಧಿಸಿದಂತೆ ಬಿಜೆಪಿ ಮುಖಂಡ ಮನೀಶ್ ನಾಯಕ್, ಜೆಡಿಯು ಮುಖಂಡ ದಿನೇಶ್ ಅವಧಿಯಾ, ಪೆಟ್ರೋಲ್ ಪಂಪ್ ಮಾಲಿಕ ಅಮಿತ್ ಸೋನಿ ಈ ಮೂವರನ್ನೂ ಪೊಲೀಸರು ಬಂಧಿಸಿದ್ದಾರೆ.
ಇನ್ನಷ್ಟು ಸುದ್ದಿಗಳು…
ದೋಣಿ ಮಗುಚಿ ಮೂವರು ಮಕ್ಕಳು ಸೇರಿದಂತೆ 6 ಮಂದಿ ಜಲಸಮಾಧಿ!
ಪಕ್ಷ ಯಾವುದೇ ಇರಲಿ, ಮುಂದಿನ ಬಾರಿ ರಾಜ್ಯದಲ್ಲಿ ದಲಿತ ಸಿಎಂ ಆಗಬೇಕು | ಜೆಡಿಎಸ್ ಶಾಸಕ ಗೌರಿಶಂಕರ್ ಕರೆ
ಲೈಂಗಿಕ ಆಯಾಸ ಪರಿಹಾರ ಸೇರಿದಂತೆ ಹಲವು ಸಮಸ್ಯೆಗಳಿಗೆ ಖರ್ಜೂರದಲ್ಲಿದೆ ಪರಿಹಾರ
ತಾಲಿಬಾನ್ ಉಗ್ರನ ಬಂದೂಕಿಗೆ ಎದೆಯೊಡ್ಡಿದ ಅಫ್ಘಾನಿಸ್ತಾನದ ಮಹಿಳೆಯ ಧೈರ್ಯಕ್ಕೆ ಭೇಷ್ ಎಂದ ನೆಟ್ಟಿಗರು!
ಲಿಫ್ಟ್ ನೀಡುವ ನೆಪದಲ್ಲಿ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ, ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ!
ಅನುಶ್ರೀ ವಿರುದ್ಧ ಮತ್ತೆ ವಿಚಾರಣೆ ನಡೆಯುವ ಸಾಧ್ಯತೆ ಕಡಿಮೆ | ಮಂಗಳೂರು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್