ತೀವ್ರ ಹೊಟ್ಟೆ ನೋವಿನಿಂದ ಬೇಸತ್ತು ಮಹಿಳೆ ಆತ್ಮಹತ್ಯೆ - Mahanayaka

ತೀವ್ರ ಹೊಟ್ಟೆ ನೋವಿನಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

stomach pain
08/09/2022

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೋರ್ವಳು ಕೊಟ್ಟಿಗೆಯ ಮರದ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಮೊಳಹಳ್ಳಿ ಗ್ರಾಮದ ಕೆಚ್ಚಾಬಾಳು ಎಂಬಲ್ಲಿ ಇಂದು ಬೆಳಿಗ್ಗೆ ಬೆಳಕಿಗೆ ಬಂದಿದೆ‌.

ಮೃತರನ್ನು ಮೊಳಹಳ್ಳಿ ಗ್ರಾಮದ ಕೆಚ್ಚಾಬಾಳು ನಿವಾಸಿ 55ವರ್ಷ ಪ್ರಾಯದ ಜ್ಯೋತಿ ಶೆಡ್ತಿ ಎಂದು ಗುರುತಿಸಲಾಗಿದೆ. ಇವರು ಒಂದು ತಿಂಗಳಿನಿಂದ  ವಿಪರೀತ ನಿತ್ರಾಣ ಹಾಗೂ ಹೊಟ್ಟೆನೋವಿನಿಂದ ಬಳಲುತ್ತಿದ್ದುರು. ಚಿಕಿತ್ಸೆ ಪಡೆದುಕೊಂಡರು ಗುಣಮುಖರಾಗಿಲ್ಲ ಎನ್ನಲಾಗಿದೆ.

ಇದೇ ಕಾರಣದಿಂದ ಅವರು ಜೀವನದಲ್ಲಿ ಮನನೊಂದು ಸೆ. 6ರ ರಾತ್ರಿ 9ಗಂಟೆಯಿಂದ ಸೆ.7ರ ಬೆಳಿಗ್ಗೆ 5.30ರ ಮಧ್ಯಾವಧಿಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ