ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಕೊಲೆ ಆರೋಪ - Mahanayaka

ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ: ಕೊಲೆ ಆರೋಪ

chikkamagaluru
28/03/2025


Provided by

ಚಿಕ್ಕಮಗಳೂರು: ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ. 4 ವರ್ಷದ ಹಿಂದೆ ಮದುವೆಯಾಗಿದ್ದ ಮಮತಾ ಮೃತ ದುರ್ದೈವಿಯಾಗಿದ್ದಾರೆ.


Provided by

ಮದುವೆ ವೇಳೆ 110 ಗ್ರಾಂ. ಚಿನ್ನ ನೀಡಿ ಮಮತಾ ಪೋಷಕರು ಮದುವೆ ಮಾಡಿಕೊಟ್ಟಿದ್ದರು. ಆದರೆ ಇದಾದ ಬಳಿಕವೂ ಹಣಕ್ಕಾಗಿ ಗಂಡನ ಮನೆಯವರಿಂದ ಮಾನಸಿಕ–ದೈಹಿಕ ಕಿರುಕುಳ ನಡೆಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಗಂಡನ ಮನೆಯವರ ಹಿಂಸೆ ತಾಳಲಾರದೆ ಗಂಡನ ಮನೆ ಬಿಟ್ಟು ತವರು ಸೇರಿದ್ದ ಮಮತಾ, ದೊಡ್ಡವರ ರಾಜಿ–ಪಂಚಾಯಿತಿ ಮೂಲಕ ಮತ್ತೆ ಹೊಸ ಜೀವನದ ಕನಸಿನೊಂದಿಗೆ ಗಂಡನ ಮನೆ ಮಮತಾ ಸೇರಿದ್ದರು.

ಕಳೆದ ವರ್ಷ ತೋಟದ ನಿರ್ವಹಣೆಗೆಂದು ಪತ್ನಿಯ ಮನೆಯವರ ಕಡೆಯಿಂದ ಮಮತಾ ಪತಿ ಅವಿನಾಶ್ 50 ಸಾವಿರ ಪಡೆದುಕೊಂಡಿದ್ದ. ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಗಂಡ ಅವಿನಾಶ್ ಆಸ್ಪತ್ರೆಗೆ ಸೇರಿಸಿದ್ದ.


Provided by

ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಾಹಿತಿ ನೀಡಿದ್ದರೆ, ಗಂಡನ ಮನೆಯವರು ಮಮತಾಳಿಗೆ ಹೊಡೆದು ನೇಣು ಹಾಕಿ ಆಸ್ಪತ್ರೆಗೆ ಕರೆತಂದಿರುವ ಅನುಮಾನ ವ್ಯಕ್ತಪಡಿಸಿದ್ದಾರೆ.

ಮಮತಾಳಿಗೆ ಎರಡು ತಿಂಗಳಿಂದ ಪೋಷಕರು ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದ್ರೆ, ಆಕೆ ಹುಷಾರಾಗುವ ಮುನ್ನವೇ ಗಂಡನ ಮನೆಯವರು ಮನೆಗೆ ಕರೆತಂದಿರೋ ಆರೋಪ ಕೇಳಿ ಬಂದಿದೆ. ಮನೆಗೆ ಕರೆದುಕೊಂಡು ಬಂದ ಬಳಿಕ ಮನೆಯಲ್ಲೇ ಮಮತಾ ಕೊನೆಯುಸಿರೆಳೆದಿದ್ದಾಳೆ.

ಸದ್ಯ ಮಮತಾಳ ಗಂಡ, ಅತ್ತೆ–ಮಾವನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ, ಮೃತ ಮಮತಾ ಅಣ್ಣ ಮಂಜುನಾಥ್ ದೂರು ನೀಡಿದ್ದಾರೆ. ಘಟನೆ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/HEkqDgrW2BlJLad5kZ1DX7

ಇತ್ತೀಚಿನ ಸುದ್ದಿ