ಇಸ್ರೇಲ್ ಹಮಾಸ್ ಯುದ್ಧ: ಇಸ್ರೇಲ್ ಮೇಲೆ ದಾಳಿ ಆರಂಭಿಸಿದ ಯೆಮನ್; ನೆತನ್ಯಾಹು ಪಡೆಗೆ ನಡುಕ

ಗಾಝಾ ಮೇಲೆ ಇಸ್ರೇಲ್ ತನ್ನ ಅಟ್ಟಹಾಸವನ್ನು ಮುಂದುವರಿಸಿದಂತೆ ಯೆಮನ್‌ನ ಬುಡಕಟ್ಟು ಹೌತಿಗಳ ಬಂಡುಕೋರ ಗುಂಪು ಇಸ್ರೇಲ್ ಮೇಲೆ ದಾಳಿ ಆರಂಭಿಸಿದೆ.
ಈ ಮೂಲಕ ಸದ್ಯ ನಡೆಯುತ್ತಿರುವ ಸಂಘರ್ಷಕ್ಕೆ ಅಧಿಕೃತವಾಗಿ ಕಾಲಿಟ್ಟಿದೆ.
ಹೌತಿ ಬಂಡುಕೋರರು ಇಸ್ರೇಲ್ ಕಡೆಗೆ ಕ್ಷಿಪಣಿಗಳು ಮತ್ತು ಡ್ರೋನ್‌ಗಳ ದಾಳಿಯನ್ನು ಪ್ರಾರಂಭಿಸಿದ್ದಾರೆ.
ಯೆಮೆನ್‌ನ ಮಹತ್ವದ ಪ್ರದೇಶಗಳನ್ನು ಇರಾನ್‌ನ ಬೆಂಬಲದೊಂದಿಗೆ ಹೌತಿ ಬಂಡುಕೋರರು ನಿಯಂತ್ರಿಸುತ್ತಿದ್ದಾರೆ. ದಕ್ಷಿಣ ಇಸ್ರೇಲಿ ನಗರವಾದ ಐಲಾಟ್ ಅನ್ನು ಗುರಿಯಾಗಿಟ್ಟುಕೊಂಡು ಬ್ಯಾಲಿಸ್ಟಿಕ್ ಕ್ಷಿಪಣಿಗಳು, ಕ್ರೂಸ್ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಹೌತಿಗಳು ಉಡಾಯಿಸಿದ್ದಾರೆ.
ಈ ದಾಳಿಯ ಮೂಲಕ ಹೌತಿ ಹಮಾಸ್‌ನೊಂದಿಗೆ ಕೈಜೋಡಿಸಿದೆ. ಅದಾಗ್ಯೂ, ಇಸ್ರೇಲ್‌ನ ಆರೋ ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಫೈಟರ್ ಜೆಟ್‌ಗಳು ಹೌತಿಗಳು ಉಡಾಯಿಸಿದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ತಡೆ ಹಿಡಿದಿವೆ.
ಜೊತೆಗೆ ಇಸ್ರೇಲ್ ಲೆಬನಾನ್ ಗಡಿಯಲ್ಲಿ ಹಿಜ್ಬುಲ್ಲಾ ಮತ್ತು ಇಸ್ರೇಲಿ ಸೇನೆಯ ನಡುವಿನ ಗುಂಡಿನ ವಿನಿಮಯ ನಡೆದಿದೆ. ಹೀಗಾಗಿ ದಾಳಿಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ.