ಹಲ್ಲು ಬೆಳ್ಳಗಾಗಲು ಸುಲಭ ಪರಿಹಾರ ಏನು?
ಬಹುತೇಕರು ಹಲ್ಲು ಬೆಳ್ಳಗೆ ಕಾರಣಬೇಕಿದ್ದರೆ, ಯಾವ ಟೂತ್ ಪೇಸ್ಟ್ ಬಳಸಬೇಕು ಎಂದು ಪ್ರಶ್ನಿಸುತ್ತಿರುತ್ತಾರೆ. ಇನ್ನು ಕೆಲವರಿಗೆ ಹಲ್ಲಿನ ಕಲೆಗಳನ್ನು ಹೋಗಲಾಡಿಸುವುದು ಹೇಗೆ ಎನ್ನುವ ಚಿಂತೆ. ನಾವು ಪ್ರತಿನಿತ್ಯದ ಜೀವನದಲ್ಲಿ ಬಹಳಷ್ಟು ಜನರನ್ನು ಎದುರುಗೊಳ್ಳುತ್ತೇವೆ. ಈ ವೇಳೆ ಮೊದಲು ಅವರು ಗಮನಿಸುವುದು ನಮ್ಮ ಮುಖ ಮತ್ತು ನಮ್ಮ ಹಲ್ಲು. ಈ ಸಂದರ್ಭದಲ್ಲಿ ಬಹುತೇಕ ಬಾರಿ ನಾವು ಮುಜುಗರಕ್ಕೊಳಗಾಗುವ ಸ್ಥಿತಿಯೂ ಸೃಷ್ಟಿಯಾಗುತ್ತವೆ.
ಹಲ್ಲುಗಳ ಸಮಸ್ಯೆಗೆ ಟೂತ್ ಪೇಸ್ಟ್ ಗಳೇ ಪರಿಹಾರ ಎಂದು ಬಹಳಷ್ಟು ಜನರು ತಿಳಿದುಕೊಂಡಿರುತ್ತಾರೆ. ಆದರೆ, ನಮ್ಮ ಸುತ್ತಮುತ್ತಲಿನಲ್ಲಿಯೇ ಸಿಗುವ ನೈಸರ್ಗಿಕ ವಸ್ತುಗಳನ್ನು ಬಳಸಿ ಹಲ್ಲುಗಳ ಸಮಸ್ಯೆಗಳಿಂದ ಶಾಶ್ವತ ಪರಿಹಾರವನ್ನು ನಾವು ಪಡೆದುಕೊಳ್ಳಬಹುದಾಗಿದೆ.
ಹಲ್ಲಿನ ಆರೋಗ್ಯ ಕಾಪಾಡಲು ಅರಿಶಿನವನ್ನು ಸಾಕಷ್ಟು ಜನರು ಬಳಸುತ್ತಾರೆ. ಅರಿಶಿನವು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೊಂದಿದ್ದು, ಹೀಗಾಗಿ ಅರಿಶಿನದ ಬಳಕೆಯಿಂದ ನಾವು ಹಲ್ಲು ಮಾತ್ರವಲ್ಲ, ಬಾಯಿಗಳ ಹಲವು ರೋಗಗಳಿಂದ ಮುಕ್ತರಾಗಬಹುದಾಗಿದೆ.
ಅಡುಗೆ ಸೋಡಾಕ್ಕೆ ಅರಿಶಿನವನ್ನು ಬೆರೆಸಿ ಪ್ರತೀ ದಿನ ಬೆಳಿಗ್ಗೆ ಮತ್ತು ಸಂಜೆ ಹಲ್ಲುಜ್ಜ ಬೇಕು. ಇದರಿಂದಾಗಿ ಹಲ್ಲಿನ ಆರೋಗ್ಯ ಮತ್ತು ಬಣ್ಣ ಕೂಡ ಹೆಚ್ಚಾಗುತ್ತದೆ. ನಿಮ್ಮ ಹಲ್ಲುಗಳು ಹೊಳಪಿನಿಂದ ಕೂಡಿರುತ್ತದೆ. ಜೊತೆಗೆ ಹಲ್ಲಿನಲ್ಲಿದ್ದ ಕಲೆಗಳನ್ನು ಕೂಡ ತೆಗೆದು ಹಾಕಿ ನಿಮ್ಮ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಸದಾ ಹಿಂಸಿಸುವ ಮೈಕೈ ನೋವಿಗೆ ಶಾಶ್ವತ ಪರಿಹಾರ ಏನು?
ತೂಕವನ್ನು ಇಳಿಸಿಕೊಳ್ಳಲು ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ!
ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆಯಾದರೆ ಗಂಭೀರ ಸಮಸ್ಯೆ ಉಂಟಾಗಬಹುದು | ಇದಕ್ಕೆ ಪರಿಹಾರವೇನು?
ನೆಲಗಡಲೆ, ಬಾದಾಮಿ, ಒಣದ್ರಾಕ್ಷಿ ಹೃದಯಕ್ಕೆ ಚೈತನ್ಯ ತುಂಬುವ ತಿನಿಸುಗಳು
ಮೂತ್ರಪಿಂಡಗಳ ಆರೋಗ್ಯ ಕಾಪಾಡಲು ಈ ಕ್ರಮಗಳನ್ನು ಅನುಸರಿಸಿ!
ನೀವು ಲಿಂಬೆ ಸೋಡಾವನ್ನು ಅತೀಯಾಗಿ ಕುಡಿಯುತ್ತೀರಾ? | ಹಾಗಿದ್ದರೆ, ಈ ವಿಚಾರ ನೀವು ತಿಳಿಯಲೇ ಬೇಕು