ಎಷ್ಟು ವಯಸ್ಸಿನವರು ಎಷ್ಟು ಹೊತ್ತು ನಿದ್ರಿಸಬೇಕು? | ತಜ್ಞರು ಏನಂತಾರೆ ನೋಡಿ… - Mahanayaka
5:29 AM Thursday 19 - September 2024

ಎಷ್ಟು ವಯಸ್ಸಿನವರು ಎಷ್ಟು ಹೊತ್ತು ನಿದ್ರಿಸಬೇಕು? | ತಜ್ಞರು ಏನಂತಾರೆ ನೋಡಿ…

age sleep
26/03/2022

ಹೆಚ್ಚಿನ ಜನರು ತಮ್ಮ ಆರೋಗ್ಯದ ಬಗ್ಗೆ ತುಂಬಾ ಕಾಳಜಿ ವಹಿಸುತ್ತಾರೆ.  ಆದರೆ ಅದಕ್ಕಾಗಿ ಶ್ರಮಿಸುವವರು ಬಹಳ ಕಡಿಮೆ.  ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಮತ್ತು ವ್ಯಾಯಾಮ ಉತ್ತಮ ಕ್ರಮವಾದರೆ,  ಒಬ್ಬ ವ್ಯಕ್ತಿಯು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿರಲು ನಿದ್ರೆ ಕೂಡ ಅಷ್ಟೇ ಮುಖ್ಯವಾಗಿದೆ.

ಒಬ್ಬ ವ್ಯಕ್ತಿಯು ಎಷ್ಟು ಗಂಟೆ ನಿದ್ರಿಸಬೇಕು ಎಂದು ಅನೇಕರಿಗೆ ತಿಳಿದಿಲ್ಲ.  ವಯಸ್ಸಿಗೆ ಅನುಗುಣವಾಗಿ ಒಬ್ಬ ವ್ಯಕ್ತಿಯು ಹೆಚ್ಚು ಅಥವಾ ಕಡಿಮೆ ನಿದ್ದೆ ಮಾಡುತ್ತಾನೆ .ಇದು ಆತನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು.

1 ರಿಂದ 3 ತಿಂಗಳ ವಯಸ್ಸಿನ ಶಿಶುಗಳು 14ರಿಂದ 17 ಗಂಟೆಗಳ ಕಾಲ ನಿದ್ರಿಸಬೇಕು.


Provided by

4ರಿಂದ11 ತಿಂಗಳ ವಯಸ್ಸಿನ ಮಕ್ಕಳು 12ರಿಂದ 15 ಗಂಟೆಗಳ ಕಾಲ ನಿದ್ರಿಸಬೇಕು.

1ರಿಂದ2 ವರ್ಷಗಳ ಮಕ್ಕಳು: 11ರಿಂದ 14 ಗಂಟೆ ನಿದ್ರಿಸಬೇಕು.

3ರಿಂದ5 ವರ್ಷದ ಮಕ್ಕಳು  10ರಿಂದ 13 ಗಂಟೆ ಮಲಗ ಬೇಕು.

6ರಿಂದ 13 ವಯಸ್ಸಿನವರು  9ರಿಂದ 11 ಗಂಟೆಗಳ ಕಾಲ ನಿದ್ರಿಸಬೇಕು.

14ರಿಂದ 17 ವರ್ಷ ವಯಸ್ಸಿನವರು  8ರಿಂದ 10 ಗಂಟೆಗಳ ಕಾಲ ಮಲಗಬೇಕು.

18ರಿಂದ 25 ವರ್ಷ ವಯಸ್ಸಿನವರು  7ರಿಂದ 9 ಗಂಟೆ ನಿದ್ರಿಸಬೇಕು.

26ರಿಂದ 64 ವರ್ಷ ವಯಸ್ಸಿನವರು  7ರಿಂದ 9 ಗಂಟೆಗಳ ಕಾಲ ನಿದ್ರಿಸಬೇಕು

65 ಕ್ಕಿಂತ ಹೆಚ್ಚು ವಯಸ್ಸಿನವರು 7ರಿಂದ 8 ಗಂಟೆಗಳ ಕಾಲ ನಿದ್ರಿಸಬೇಕು

ಮಕ್ಕಳಿಗೆ ಹಗಲು, ರಾತ್ರಿ 10 ಗಂಟೆಗಳಿಗಿಂತ ಹೆಚ್ಚು ನಿದ್ರೆ ಬೇಕಾಗುತ್ತದೆ, ಆದರೆ ವಯಸ್ಕರಿಗೆ 9 ಗಂಟೆಗಳಿಗಿಂತ ಕಡಿಮೆ ಸಮಯ ಸಾಕು.  ಹಗಲೊತ್ತು ಒಂದು ಗಂಟೆಗಿಂತ ಹೆಚ್ಚು ನಿದ್ರೆ ಮಾಡುವ ವಯಸ್ಕರು ಅನಾರೋಗ್ಯಕ್ಕೀಡಾಗಬಹುದು ಎಂದು ಅಧ್ಯಯನಗಳು ತೋರಿಸುತ್ತವೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ