ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಸಾರ್ವಜನಿಕರ ದಾಳಿಗೆ ಕಾರಣ ಏನು?: 3 ತಿಂಗಳಲ್ಲಿ ಆನೆಗೆ ಬಲಿಯಾದವರೆಷ್ಟು?

mudigere mla mp kumaraswamy
21/11/2022

ಚಿಕ್ಕಮಗಳೂರು: ಆನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ್ದ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿಗೆ ತಾಲೂಕಿನ ಹುಲ್ಲೆಹಳ್ಳಿ-ಕುಂದೂರು ಭಾಗದ ರೈತರು ಹಲ್ಲೆ ಮಾಡಿ ಶಾಸಕ ಕುಮಾರಸ್ವಾಮಿಯ ಶರ್ಟ್ ಹರಿದರಾ…? ಎಂಬ ಪ್ರಶ್ನೆ ಮೂಡಿದೆ.

ಮೂಡಿಗೆರೆ ತಾಲೂಕಿನ ಹುಲ್ಲೆಹಳ್ಳಿ-ಕುಂದೂರು ಗ್ರಾಮದಲ್ಲಿ ತೋಟದಲ್ಲಿ ಹುಲ್ಲು ಕೊಯ್ಯುತ್ತಿದ್ದ 35 ವರ್ಷದ ಶೋಭಾ ಎಂಬ ಮಹಿಳೆ ಮೇಲೆ ದಾಳಿ ಮಾಡಿದ ಕಾಡಾನೆ ಮಹಿಳೆಯನ್ನ ಸ್ಥಳದಲ್ಲೇ ಕೊಂದಿತ್ತು. ಸ್ಥಳೀಯರು ಸರ್ಕಾರ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದರು. ಮಧ್ಯಾಹ್ನದ ವೇಳೆಗೆ ಸ್ಥಳಕ್ಕೆ ಬಂದ ಶಾಸಕ ಕುಮಾರಸ್ವಾಮಿ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕಿದ್ದರು. ಸ್ಥಳಕ್ಕೆ ಡಿ.ಎಫ್.ಓ. ಬರುವವರೆಗೆ ಮೃತದೇಹವನ್ನ ತೆಗೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು. ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಬಂದ ಮೇಲೆ ಹಿರಿಯ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿ ಸಾವಿಗೆ ಸೂಕ್ತ ನ್ಯಾಯ ಒದಗಿಸುವಂತೆ ಆಗ್ರಹಿಸಿದರು. ಬಳಿಕ ಮಧ್ಯಾಹ್ನ ಮೂರು ಗಂಟೆ ಬಳಿಕ ಬಂದ ಶಾಸಕರ ವಿರುದ್ಧ ಸ್ಥಳಿಯರು ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಗುಂಪನ್ನ ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಕೂಡ ನಡೆಸಿದರು. ಸ್ಥಳದಲ್ಲಿದ್ದ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಹರಸಾಹಸಪಟ್ಟು ಕುಮಾರಸ್ವಾಮಿಯನ್ನ ರಕ್ಷಿಸಿದ್ದಾರೆ. ಪೊಲೀಸರು ಸುತ್ತುವರಿದು ಕುಮಾರಸ್ವಾಮಿಯನ್ನ ಸೇಫಾಗಿ ತಂದು ಜೀಪಿನಲ್ಲಿ ಕೂರಿಸಿ ಸುರಕ್ಷಿತವಾಗಿ ವಾಪಸ್ ಕಳುಹಿಸಿದ್ದಾರೆ.

ಶಾಸಕರ ಬಟ್ಟೆಯನ್ನ ಸ್ಥಳೀಯರು ಹರಿದರಾ….?

ಸಾವಿರಾರು ಜನರಾರು ಜನರ ಆಕ್ರೋಶದ ಮಧ್ಯೆಯೂ ಪೊಲೀಸರು ಹರಸಾಹಸಪಟ್ಟು ಶಾಸಕ ಕುಮಾರಸ್ವಾಮಿಯನ್ನ ಸೇಫಾಗಿ ತಂದು ಜೀಪಿನಲ್ಲಿ ಕೂರಿಸಿದ್ದರು. ಆಗ ಅವರ ಬಟ್ಟೆಗೆ ಯಾವುದೇ ರೀತಿಯಲ್ಲೂ ಏನು ಸಮಸ್ಯೆಯಾಗಿರಲಿಲ್ಲ. ಹರಿದು ಹೋಗಿರಲಿಲ್ಲ. ಆದರೆ, ಕುಮಾರಸ್ವಾಮಿ ಅಲ್ಲಿಂದ ಬಂದ ಮೇಲೆ ಬಟ್ಟೆ ಹರಿದಿರೋದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶಾಸಕರ ಬಟ್ಟೆ ಅಲ್ಲೇ ಹರಿದು ಹೋಯ್ತಾ ಅಥವಾ ಬೇರೆ ಕಡೆ ಹರಿದು ಹೋಯ್ತಾ ಎಂಬ ಪ್ರಶ್ನೆ ಮೂಡಿದೆ. ಆದರೆ, ಪೊಲೀಸರು ಅಲ್ಲಿಂದ ಶಾಸಕರನ್ನ ಕರೆತಂದು ಜೀಪಿನಲ್ಲಿ ಕೂರಿಸುವಾಗ ಅವರ ಬಟ್ಟೆ ಚೆನ್ನಾಗಿಯೇ ಇತ್ತು. ಬಟ್ಟೆ ಎಲ್ಲಿ ಹರಿದು ಹೋಯ್ತು ಅನ್ನೋದನ್ನ ಶಾಸಕರೇ ಸ್ಪಷ್ಟಪಡಿಸಬೇಕು.

ಆನೆ ಕಂಡ ಕೂಡಲೇ ಪತ್ನಿಯನ್ನು ಓಡಿಸಿದ್ದ ಪತಿ

ರಸ್ತೆ ಬದಿಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಮೃತ ಶೋಭಾಳ ಪತಿ ಸತೀಶ್ ಕೂಡ ಜೊತೆಗಿದ್ದರು. ಆನೆ ಘೀಳಿಟ್ಟ ಕೂಡಲೇ ಪತಿ ಸತೀಶ್ ಪತ್ನಿ ಶೋಭಾಳನ್ನ ಓಡು ಎಂದು ಓಡಿಸಿದ್ದಾರೆ. ಆದರೆ, ಸುಮಾರು ಎರಡು ಫರ್‍ಲಾಂಗ್ ದೂರವಿದ್ದು, ಆನೆ ಶೋಭಾ 15–20 ಮೀಟರ್ ದೂರಕ್ಕೆ ಓಡುವಷ್ಟರಲ್ಲಿ ಶೋಭಾ ಮೇಲೆ ಆನೆ ದಾಳಿ ಮಾಡಿದೆ. ಅಷ್ಟು ವೇಗವಾಗಿ ಓಡಿ ಬಂದು ಸೊಂಡಿಲಿನಿಂದ ಎತ್ತಿ ಬಿಸಾಡಿದೆ. ಶೋಭಾ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಬ್ಬರ ಜೀವ ಉಳಿಸಿದ ನಾಯಿ

ಹೊಲದಲ್ಲಿ ಒಟ್ಟು ಮೂವರು ಹುಲ್ಲು ಕೊಯ್ಯುತ್ತಿದ್ದರು. ಆನೆಯನ್ನ ನೋಡಿದ ಕೂಡಲೇ ನಾಯಿಗಳು  ಬೊಗಳಿದ್ದಾವೆ. ನಾಯಿಗಳು ಬೊಗಳುತ್ತಿದ್ದಂತೆ ಹಳ್ಳಿಯ ನಾಯಿಗಳೆಲ್ಲಾ ಓಡಿ ಬಂದು ಆನೆಯನ್ನ ಹೆದರಿಸುವ ಪ್ರಯತ್ನ ಮಾಡಿವೆ. ಆನೆ ಮೇಲೆ ದಾಳಿ ಮಾಡಲು ಯತ್ನಿಸಿವೆ. ಈ ವೇಳೆ, ಹುಲ್ಲು ಕೊಯ್ಯುತ್ತಿದ್ದ ಮೂವರಲ್ಲಿ ಇಬ್ಬರು ಓಡಿ ಹೋಗಿದ್ದಾರೆ. ಮೃತ ಶೋಭಾ ಕೂಡ ಓಡಿ ಹೋಗಿದ್ದಾರೆ. ಆದರೆ, ತೋಟದ ತಗ್ಗು-ದಿಬ್ಬ-ಕಲ್ಲು-ಮುಳ್ಳಿನ ಹಾದಿಯಲ್ಲಿ ಶೋಭಾಗೆ ವೇಗವಾಗಿ ಓಡಲು ಸಾಧ್ಯವಾಗಿಲ್ಲ. 10 ಅಡಿಗೆ ಒಂದೊಂದು ಹೆಜ್ಜೆ ಇಟ್ಟು ಓಡಿರುವ ಆನೆ ಶೋಭಾ ಗೇಟಿನ ಬಳಿ ಬರುವಷ್ಟರಲ್ಲಿ ದಾಳಿ ಮಾಡಿದೆ.

ಅರಣ್ಯ ಇಲಾಖೆಗೆ ಸ್ಥಳೀಯರ ಪ್ರಶ್ನೆ :

ಕಳೆದ ಮೂರು ತಿಂಗಳಲ್ಲಿ ತಿಂಗಳಿಗೆ ಒಬ್ಬರಂತೆ ರೈತರು ಆನೆ ದಾಳಿಗೆ ಬಲಿಯಾಗಿದ್ದಾರೆ. ಈ ತಿಂಗಳು ನಾನು ಬದುಕಿದೆ. ಮುಂದಿನ ತಿಂಗಳು ಏನೋ ಎಂದು ರೈತರು ದಿನ ಎಣಿಸಿಕೊಂಡು ಬದುಕುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಇಷ್ಟು ದಿನ ಆನೆ ದಾಳಿಯಾದಾಗ ಅರಣ್ಯ ಅಧಿಕಾರಿಗಳು ಕಾಡಿನಲ್ಲಿ ಅವರಿಗೇನು ಕೆಲಸ ಎಂದು ಪ್ರಶ್ನೆ ಮಾಡುತ್ತಿದ್ದರು. ಆದರೆ, ಇಂದು ಆನೆ ದಾಳಿ ಮಾಡಿರುವುದು ಹಳ್ಳಿಯ ಮುಖ್ಯ ರಸ್ತೆಯ ಪಕ್ಕದಲ್ಲಿ. ಇಡುವಳಿ ಜಮೀನಿನಲ್ಲಿ. ಈಗ ಸ್ಥಳೀಯ ಅಧಿಕಾರಿಗಳು ಇದಕ್ಕೆ ಏನು ಹೇಳುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಆನೆ ಇಲ್ಲಿಗೆ ಏಕೆ-ಹೇಗೆ ಬಂತು. ಇದಕ್ಕೆ ನಿಮ್ಮ ಉತ್ತರ ಏನು ಎಂದು ಪ್ರಶ್ನಿಸಿದ್ದಾರೆ.


Video:

YouTube video player


Video:

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ

Exit mobile version