ಗಣಿ ಅಧಿಕಾರಿ ಪ್ರತಿಮಾ ಕೊಲೆ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಹೇಗೆ?
ಬೆಂಗಳೂರು: ಗಣಿ ಅಧಿಕಾರಿ ಪ್ರತಿಮಾ ಅವರನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಸಣ್ಣ ಸುಳಿವೊಂದನ್ನು ಹಿಂಬಾಲಿಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರತಿಮಾ ಹತ್ಯೆ ಪ್ರಕರಣದ ತನಿಖೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿದ್ದರು. ಪೊಲೀಸರು ತನಿಖೆ ಆರಂಭ ನಡೆಸಿದ ವೇಳೆ ಆರೋಪಿಯ ಸಣ್ಣ ಸುಲಿವು ಲಭ್ಯವಾಗಿತ್ತು. ಕಿರಣ್, ಪ್ರತಿಮಾ ಅವರನ್ನು ಹತ್ಯೆ ಮಾಡುವುದಕ್ಕೂ ಮೊದಲು ಸ್ಥಳದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿದ್ದ. ಈತನ ಬಳಿ ಒಟ್ಟು 2 ಮೊಬೈಲ್ ಗಳಿದ್ದವು. ಒಂದು ಮೊಬೈಲ್ ಮನೆಯಲ್ಲೇ ಇಟ್ಟಿದ್ದನು.
ಕೊಲೆಯ ಬಳಿಕ ತನ್ನ ಇಬ್ಬರು ಸ್ನೇಹಿತರನ್ನು ಕರೆದುಕೊಂಡು ಮಲೆಮಹದೇಶ್ವರ ಬೆಟ್ಟಕ್ಕೆ ತೆರಳಿದ್ದನು. ತಾನು ಕೊಲೆ ಮಾಡಿರುವ ವಿಚಾರವನ್ನು ಆತ ಸ್ನೇಹಿತರಿಗೆ ತಿಳಿಸಿರಲಿಲ್ಲ.
ಇನ್ನೊಂದೆಡೆ ಪ್ರಕರಣ ತನಿಖೆ ನಡೆಸುತ್ತಿದ್ದ ಪೊಲೀಸರು CDR ಕಲೆ ಹಾಕಲು ಆರಂಭಿಸಿದ್ದಾರೆ.
ಪ್ರತಿಮಾ ಅವರ ಜೊತೆಗೆ ಫೋನ್ ನಲ್ಲಿ ಸಂಪರ್ಕ ಇದ್ದ ಎಲ್ಲರ ಮೊಬೈಲ್ ಗಳು ಆನ್ ಆಗಿದ್ದವು. ಆದರೆ ಕಿರಣ್ ನ ಮೊಬೈಲ್ ಮಾತ್ರ ಸ್ವಿಚ್ ಆಫ್ ಆಗಿತ್ತು. ಈ ಅನುಮಾನದ ಮೇಲೆ ತನಿಖೆ ನಡೆಸಿದಾಗ ಕಿರಣ್ ಸಿಕ್ಕಿ ಬಿದ್ದಿದ್ದಾನೆ. ತನ್ನ ಎರಡು ಮೊಬೈಲ್ ಗಳ ಪೈಕಿ ಒಂದನ್ನು ಮನೆಯಲ್ಲೇ ಇಟ್ಟಿದ್ದ ಕಿರಣ್ ಇನ್ನೊಂದು ಮೊಬೈಲ್ ನ್ನು ಸ್ವಿಚ್ ಆಫ್ ಮಾಡಿ ತನ್ನೊಂದಿಗೆ ತೆಗೆದುಕೊಂಡು ಹೋಗಿದ್ದನು.