ವಾಟ್ಸಾಪ್ ಮೂಲಕ ಕೊವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ? - Mahanayaka
11:30 PM Thursday 21 - November 2024

ವಾಟ್ಸಾಪ್ ಮೂಲಕ ಕೊವಿಡ್ ಲಸಿಕೆ ಪ್ರಮಾಣ ಪತ್ರ ಪಡೆಯುವುದು ಹೇಗೆ?

covid vaccination certificate
08/08/2021

ಬೆಂಗಳೂರು:  ಲಸಿಕೆ ಪ್ರಮಾಣ ಪತ್ರ ಇದೀಗ ವಾಟ್ಸಾಪ್ ಮೂಲಕವೂ ಪಡೆದುಕೊಳ್ಳಬಹುದಾಗಿದೆ ಎಂದು ಆರೋಗ್ಯ ಇಲಾಖೆ ಕಚೇರಿ ತಿಳಿಸಿದ್ದು, ಇನ್ನು ಮುಂದೆ ಕೊರೊನಾ ಲಸಿಕೆ ಪಡೆದವರು ಪ್ರಮಾಣ ಪತ್ರಕ್ಕಾಗಿ ಕಚೇರಿಗಳಿಗೆ ಅಲೆಯಬೇಕಾಗಿಲ್ಲ.

MyGov Corona Helpdesk ಮೂಲಕ 3 ಸ್ಟೆಪ್(ಹಂತ)ಗಳನ್ನು ನಿಮ್ಮ ಮೊಬೈಲ್ ಮೂಲಕ ಮಾಡಿದರೆ, ನೀವು ಕೊರೊನಾ ಲಸಿಕೆ ಪಡೆದಿದ್ದರೆ ಅತ್ಯಂತ ಸುಲಭವಾಗಿ ನಿಮ್ಮ ವಾಟ್ಸಾಪ್ ಗೆ ಕೊರೊನಾ ಲಸಿಕೆ ಪಡೆದ ಬಗ್ಗೆ ಪ್ರಮಾಣ ಪತ್ರ ಬಂದು ತಲುಪುತ್ತದೆ. ಈ ಪ್ರಮಾಣ ಪತ್ರವನ್ನು ನೀವು ಪ್ರಿಂಟ್ ತೆಗೆಸಿ ಕೂಡ ಇಟ್ಟುಕೊಳ್ಳಬಹುದಾಗಿದೆ.

ನೀವು ಮಾಡಬೇಕಿರುವುದು ಇಷ್ಟೆ…

* ಮೊದಲು  MyGov Corona Helpdesk ಸಂಪರ್ಕ ಸಂಖ್ಯೆ +91 9013151515ನ್ನು ನಿಮ್ಮ ಮೊಬೈಲ್ ನಲ್ಲಿ ಸೇವ್ ಮಾಡಿಕೊಳ್ಳಬೇಕು




* ಆ ಬಳಿಕ Covid Certificate ಎಂದು ಮೇಲೆ ಸೂಚಿಸಿರುವ ವಾಟ್ಸಾಪ್ ನಂಬರ್ ಗೆ  ವಾಟ್ಸಾಪ್ ಮೂಲಕ ಮೆಸೆಜ್ ಮಾಡಬೇಕು.

 * ನೀವು ವಾಟ್ಸಾಪ್ ಮೆಸೆಜ್ ಮಾಡಿದ ತಕ್ಷಣವೇ ನಿಮ್ಮ ಮೊಬೈಲ್ ಗೆ ಒಂದು ಒಟಿಪಿ ಮೆಸೆಜ್ ಬರುತ್ತದೆ. ಆ ಒಟಿಪಿಯನ್ನು ವಾಟ್ಸಾಪ್ ಚಾಟ್ ನಲ್ಲಿ ಟೈಪ್ ಮಾಡಿ ಅದೇ ಮೇಲೆ ನೀಡಲಾಗಿರುವ ಅದೇ ಮೊಬೈಲ್ ನಂಬರ್ ಗೆ ಕಳಹಿಸಿ ಕೊಡಿ.

ಇನ್ನಷ್ಟು ಸುದ್ದಿಗಳು…

 

ದಾಳಿಂಬೆ ಹಣ್ಣಿನ ರಸ ಸೇವಿಸಿ, ಈ ರೋಗಗಳಿಂದ ಮುಕ್ತಿ ಪಡೆಯಿರಿ!

ಮಲಯಾಳಂ ಖ್ಯಾತನಟ ಮಮ್ಮುಟ್ಟಿ ಸಹಿತ 300 ಮಂದಿಯ ವಿರುದ್ಧ ಪ್ರಕರಣ ದಾಖಲು!

ಆನ್ ಲೈನ್ ಕ್ಲಾಸ್ ಗೆ ನೆಟ್ ವರ್ಕ್ ಇಲ್ಲ: ಗುಡ್ಡದಲ್ಲಿ ಟೆಂಟ್ ಹಾಕಿ ಕುಳಿತ ಹೆಣ್ಣು ಮಕ್ಕಳು!

ನೀವು ಬೆಳೆದ ಬೆಳೆಗಳನ್ನು ಕೊಟ್ಟು, ಐಶಾರಾಮಿ ಕಾರು ಕೊಂಡುಹೋಗಿ: ಟೊಯೋಟಾದಿಂದ ರೈತರಿಗೆ ಆಫರ್

ತುಳುನಾಡಿನ ದೈವ ಕೊರಗಜ್ಜನ ಚಿತ್ರವನ್ನು ಅಶ್ಲೀಲವಾಗಿ ಎಡಿಟ್ ಮಾಡಿದ ಕಿಡಿಗೇಡಿಗಳು!

ಇತ್ತೀಚಿನ ಸುದ್ದಿ