ಯೂಟ್ಯೂಬ್ ನಿಂದ ಅತೀ ಸುಲಭವಾಗಿ ಹಣಗಳಿಸುವುದು ಹೇಗೆ? - Mahanayaka
2:10 PM Thursday 12 - December 2024

ಯೂಟ್ಯೂಬ್ ನಿಂದ ಅತೀ ಸುಲಭವಾಗಿ ಹಣಗಳಿಸುವುದು ಹೇಗೆ?

how to make money on youtube
13/05/2021

ಪ್ರಪಂಚದಾದ್ಯಂತ ವೀಕ್ಷಕರಿರುವ ಯೂಟ್ಯೂಬ್ ನಿಂದ ಹಣಗಳಿಸಲು ಸಾಧ್ಯ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಆದರೆ, ಹಣಗಳಿಸುವುದು ಹೇಗೆ ಎನ್ನುವುದು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ. ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರು ಕೂಡ ಮನೆಯಲ್ಲಿರುತ್ತಾರೆ. ಸಾಕಷ್ಟು ಸಮಯ ಕೂಡ ಇರುತ್ತದೆ. ಏನಾದರೊಂದು ಮಾಡಬೇಕು ಎನ್ನುವ ಉದ್ದೇಶ ಇದ್ದರೂ, ಹೊರಗಡೆ ಹೋಗುವಂತಿಲ್ಲ ಮನೆಯಲ್ಲಿ ಕುಳಿತು ಸಮಯ ವ್ಯರ್ಥವಾಗುತ್ತಿರುತ್ತದೆ. ಇಂತಹ ಸಮಯವನ್ನು ಸದುಯೋಗ ಪಡಿಸಿಕೊಳ್ಳುವವರಿಗಾಗಿ ಮಹಾನಾಯಕ ಡಾಟ್ ಇನ್ ಮಾಧ್ಯಮವು, ಯೂಟ್ಯೂಬ್ ನಿಂದ ಹಣಗಳಿಸುವುದು ಹೇಗೆ ಎನ್ನುವ ಮಾಹಿತಿಯನ್ನು ನೀಡುತ್ತಿದೆ.

ನಿಮಗೆ ಯಾವುದೇ ಒಂದು ಟ್ಯಾಲೆಂಟ್ ಇದ್ದರೂ ನೀವು ಯೂಟ್ಯೂಬ್ ಚಾನೆಲ್ ವೊಂದು ಕ್ರಿಯೇಟ್ ಮಾಡಿ ಅದರಲ್ಲಿ ನಿಮ್ಮ ಪ್ರತಿಭೆಯ ವಿಡಿಯೋವನ್ನು ಅಪ್ ಲೋಡ್ ಮಾಡಿ ಸಾಕಷ್ಟು ಜನಪ್ರಿಯತೆಯನ್ನೂ ಹೊಂದಬಹುದು, ಹಣವೂ ಗಳಿಸಬಹುದು. ನಿಮಗೆ ವಿಡಿಯೋಗಳ ಮೂಲಕ ಜನರನ್ನು ಸೆಳೆಯುವ ಕಲೆ ಇದ್ದರೆ ಸಾಕು. ನೀವು ಯೂಟ್ಯೂಬ್ ನಿಂದ ಹಣಗಳಿಸಲು ಅರ್ಹರು ಎಂದೇ ಹೇಳಬಹುದು.  ಕೋಟ್ಯಂತರ ಯೂಟ್ಯೂಬ್ ಚಾನೆಲ್ ಗಳಿವೆ. ನಮ್ಮ ಚಾನೆಲ್ ಗೆ ಯೂಟ್ಯೂಬ್ ನಿಂದ ಜಾಹೀರಾತು ಸಿಗಬಹುದೇ, ಅದರಿಂದ ಹಣ ಬರಬಹುದೇ ಎನ್ನುವ ಅನುಮಾನಗಳು ಬೇಡ.

ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಗೂಗಲ್ ಜಾಹೀರಾತುಗಳು ಸಿಗಬೇಕಾದರೆ, ನಿಮ್ಮ ಚಾನೆಲ್ ಗೆ 1 ಸಾವಿರ ಸಬ್ಸ್ಕ್ರೈಬರ್ ಆಗಿರಬೇಕು. ಜೊತೆಗೆ 4 ಸಾವಿರ ಗಂಟೆಗಳವರೆಗೆ ನಿಮ್ಮ ಚಾನೆಲ್ ಗನ್ನು ಜನರು ವೀಕ್ಷಿಸಿರಬೇಕು. ಈ ಟಾರ್ಗೆಟ್ ನ್ನು ಸಾಧಿಸುವುದು ದೊಡ್ಡ ವಿಷಯ ಅಲ್ಲ. ನೀವು ಮೊದಲು ಚಾನೆಲ್ ಕ್ರಿಯೇಟ್ ಮಾಡಿ, ನಿಮ್ಮ ಚಾನೆಲ್ ಲಿಂಕ್ ನ್ನು ನಿಮ್ಮ ಸ್ನೇಹಿತರಿಗೆ, ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಿ ಸಬ್ಸ್ಕೈಬ್ ಆಗುವಂತೆ ಮನವಿ ಮಾಡಿ. ಜೊತೆಗೆ ಪ್ರತಿ ದಿನ ನಿಮ್ಮ ಆಸಕ್ತಿಯ ವಿಷಯಗಳ ವಿಡಿಯೋಗಳನ್ನು ಮಾಡಿ ಯೂಟ್ಯೂಬ್ ಗೆ ಅಪ್ ಲೋಡ್ ಮಾಡಿ. ಒಂದು ವಿಚಾರವನ್ನು ನೀವು ಸ್ಪಷ್ಟವಾಗಿ ಗಮನಿಸಬೇಕು. ನೀವು ಬೇರೆಯವರ ವಿಡಿಯೋಗಳನ್ನು ಕದ್ದು ತಪ್ಪಿಯೂ ನಿಮ್ಮ ಯೂಟ್ಯೂಬ್ ಚಾನೆಲ್ ಗೆ ಪೋಸ್ಟ್ ಮಾಡಬೇಡಿ. ನಿಮ್ಮ ಸ್ವಂತ ವಿಡಿಯೋಗಳನ್ನು ಮಾತ್ರವೇ ಮಾಡಿ. ಪ್ರತಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿ. ಆಗ ನಿಮ್ಮ ಚಾನೆಲ್ ಗೆ ಹೆಚ್ಚು ಹೆಚ್ಚು ಸಬ್ಸ್ಕೈಬರ್ ಆಗುತ್ತಾರೆ. ನಿಮ್ಮ ಚಾನೆಲ್ ಗೆ 4 ಸಾವಿರ ಗಂಟೆಗಳ ವೀಕ್ಷಣೆಯೂ ದೊರೆಯುತ್ತದೆ. ಆ ಬಳಿಕ ನೀವು ಸುಲಭವಾಗಿ ಜಾಹೀರಾತು ಪಡೆಯಲು ಅಪ್ಲೈ ಮಾಡಬಹುದು.

ಯಾವುದೇ ಒಂದು ಕೆಲಸ ಕೂಡ ಅತೀ ಸುಲಭದಲ್ಲಿ ಆಗುವುದಿಲ್ಲ. ಯೂಟ್ಯೂಬ್ ಚಾನೆಲ್ ಕೂಡ ಹಾಗೆಯೇ. ಆರಂಭದಲ್ಲಿ ಇರುವ ನಿಮ್ಮ ಆಸಕ್ತಿ ಕೊನೆಯವರೆಗೆ ಹಾಗೆಯೇ ಉಳಿಯಬೇಕು. ಒಂದು ವಿಡಿಯೋಗೆ ನಿಮಗೆ ಹೆಚ್ಚು ವೀವ್ಸ್ ಸಿಗಬಹುದು. ಕೆಲವು ವಿಡಿಯೋಗಳಿಗೆ ಕಡಿಮೆ ಸಿಗಬಹುದು ಇವೆಲ್ಲವನ್ನೂ ಬದಿಗಿರಿಸಿ, ಯಶಸ್ವಿಯಾಗುವತ್ತ ಮಾತ್ರವೇ ಯೋಚಿಸಬೇಕು. ಅಂದ ಹಾಗೆ ಯೂಟ್ಯೂಬ್ ಚಾನೆಲ್ ನಲ್ಲಿ ಜಾಹೀರಾತು ಸಿಕ್ಕಿದ ತಕ್ಷಣವೇ ತಾನು ಲಕ್ಷಾಧಿಪತಿಯಾಗುತ್ತೇನೆ ಎನ್ನುವ ಕನಸು ಕೂಡ ಕಾಣ ಬೇಡಿ. ನಿಮ್ಮ ಫರ್ಪಾರ್ಮೆನ್ಸ್ ಹೇಗಿರುತ್ತೋ, ಆ ರೀತಿಯಲ್ಲಿ ಮಾತ್ರವೇ ನಿಮಗೆ ಹಣ ಸಂದಾಯವಾಗುತ್ತದೆ. ಇದರ ಜೊತೆಗೆ ಯಾವುದೇ ವೈಲೆನ್ಸ್(ಹಿಂಸಾತ್ಮಕ) ವಿಡಿಯೋಗಳು, ಹೇಟ್ ಸ್ಪೀಚ್(ಅವಾಚ್ಯ, ಅತಿರೇಕದ ಮಾತುಗಳು) ನಿಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಇರಬಾರದು. ಆ ರೀತಿ ಇದ್ದರೆ, ನಿಮ್ಮ ವಿಡಿಯೋ ಬ್ಲಾಕ್ ಆಗಬಹುದು ಮತ್ತು ನೀವು ಅಂತಹ ವಿಡಿಯೋಗಳನ್ನು ನಿರಂತರವಾಗಿ ಹಾಕಿದರೆ, ನಿಮ್ಮ ಜಾಹೀರಾತನ್ನು ಗೂಗಲ್ ರದ್ದುಪಡಿಸಬಹುದು. ನಿಮ್ಮ ಚಾನೆಲ್ ಗೆ ಹೆಚ್ಚಿನ ವೀವ್ಸ್ ಗಳು ಸಿಗುತ್ತಾ ಹೋದಂತೆ ನಿಯಮಗಳನ್ನು ಸಡಿಲ ಮಾಡಬಹುದು.

ನಿಮಗೆ ಸಾಕಷ್ಟು ವಿಷಯಗಳಲ್ಲಿ ವಿಡಿಯೋ ಮಾಡಬಹುದು. ನಿಮಗೆ ಒಳ್ಳೆಯ ಅಡುಗೆ ಬರುತ್ತದೆಯಾದರೆ, ಅಡುಗೆಯ ಕಾರ್ಯಕ್ರಮಗಳನ್ನು ಮಾಡಬಹುದು. ಉತ್ತಮ ಆರ್ಟಿಸ್ಟ್ ಆಗಿದ್ದರೆ, ಚಿತ್ರ ಬಿಡಿಸಿ, ವಿಡಿಯೋ ಮಾಡಬಹುದು. ಒಬ್ಬ ಉತ್ತಮ ಹಾಡುಗಾರ ಆದರೆ ಹಾಡುಗಳನ್ನು ಹಾಡಿ ವಿಡಿಯೋ ಮಾಡಬಹುದು. ಇನ್ನೂ ದೇಶ ವಿದೇಶಗಳ ಅಚ್ಚರಿಯ ಸುದ್ದಿಗಳನ್ನು ವಾಚಿಸ ಬಹುದು. ನಿಮ್ಮ ಊರಿನ ಅಚ್ಚರಿ ವಿಚಾರಗಳನ್ನು ವಿಡಿಯೋ ಮಾಡಬಹುದು. ಫಿಶಿಂಗ್, ಟ್ರಾವೆಲಿಂಗ್ ಇಂತಹ ನಾನಾ ವಿಚಾರಗಳ ಬಗ್ಗೆ ನೀವು ವಿಡಿಯೋ ಮಾಡಬಹುದು. ನಿಮಗೆ ವಿಡಿಯೋ ಎಡಿಟಿಂಗ್ ಗಳು ಗೊತ್ತಿದ್ದರೆ, ನೋ ಕಾಪಿ ರೈಟ್ ಮ್ಯೂಸಿಕ್ ಗಳನ್ನು ಬಳಸಿ, ಮೊಬೈಲ್ ನಲ್ಲಿಯೇ ವಿಡಿಯೋ ಎಡಿಟಿಂಗ್ ಮಾಡಬಹುದು. ಕೈನ್ ಮಾಸ್ಟರ್ ವಿಡಿಯೋ ಸಾಫ್ಟರ್ ವೇರ್ ಮೊಬೈಲ್ ವಿಡಿಯೋ ಎಡಿಟಿಂಗ್ ಆಪ್ ಗಳಲ್ಲಿಯೇ ಉತ್ತಮವಾಗಿದೆ.

ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುವುದು ಹೇಗೆ ಅದರಿಂದ ಹಣಗಳಿಸುವುದು ಹೇಗೆ ಎಂಬ ಬಗ್ಗೆ ಈ ಕೆಳಗೆ ವಿವರಗಳನ್ನು ನೀಡಲಾಗಿದೆ. ಈ ವಿಡಿಯೋಗಳನ್ನು ಕ್ಲಿಕ್ ಮಾಡಿ ಮಾಹಿತಿ ಪಡೆದುಕೊಳ್ಳಬಹುದು.

ಯೂಟ್ಯೂಬ್ ಚಾನೆಲ್ ಕ್ರಿಯೇಟ್ ಮಾಡುವುದು ಹೇಗೆ?

ಜಾಹೀರಾತಿಗೆ ಅಪ್ಲೈ ಮಾಡುವುದು ಹೇಗೆ?

ಇತ್ತೀಚಿನ ಸುದ್ದಿ