ವಾಣಿಜ್ಯ ವಾಹನಗಳ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ಜೆನ್ಯೂನ್ ಡಿಇಎಫ್ ಬಿಡುಗಡೆ ಮಾಡಿದ ಎಚ್‌ ಪಿಸಿಎಲ್ ಮತ್ತು ಟಾಟಾ ಮೋಟಾರ್ಸ್‌

tata moters
05/03/2025

ಬೆಂಗಳೂರು: ಭಾರತದ ಮಹಾರತ್ನ ತೈಲ ಕಂಪನಿ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್‌ ಪಿಸಿಎಲ್) ಮತ್ತು ದೇಶದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕ ಸಂಸ್ಥೆಯಾಗಿರುವ ಟಾಟಾ ಮೋಟಾರ್ಸ್ ಜಂಟಿಯಾಗಿ ಸಂಸ್ಥಾಪನೆ ಮಾಡಿರುವ ಜೆನ್ಯೂನ್ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಬ್ರಾಂಡ್ ಅನ್ನು ಬಿಡುಗಡೆ ಮಾಡಿದೆ. ಈ ಅತ್ಯುತ್ತಮ ಗುಣಮಟ್ಟದ ಡಿಇಎಫ್ ಉತ್ಪನ್ನವು ವಾಹನಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದ್ದು, ಡ್ರೈವ್‌ ಟ್ರೇನ್ ದಕ್ಷತೆಯನ್ನು ಉತ್ತಮಗೊಳಿಸುತ್ತದೆ ಮತ್ತು ವಾಹನದ ಆಯುಷ್ಯವನ್ನು ಜಾಸ್ತಿ ಮಾಡುತ್ತದೆ. ಉದ್ಯಮದ ಉನ್ನತ ಮಾನದಂಡಗಳನ್ನು ಪೂರೈಸುವ ಬಿಐಎಸ್- ಪ್ರಮಾಣೀಕೃತ ಸೌಲಭ್ಯಗಳಲ್ಲಿ ತಯಾರಾದ ಈ ಕೋಬ್ರಾಂಡೆಡ್ ಡಿಇಎಫ್ ಉತ್ಪನ್ನವು ಎಚ್‌ಪಿಸಿಎಲ್‌ ನ ದೇಶಾದ್ಯಂತ ಇರುವ 23,000 ಇಂಧನ ಕೇಂದ್ರಗಳ ವ್ಯಾಪಕ ಜಾಲದ ಮೂಲಕ ಲಭ್ಯವಾಗಲಿದೆ. ಇದರಿಂದ ಗ್ರಾಹಕರಿಗೆ ಸುಲಭವಾಗಿ ಮತ್ತು ತ್ವರಿತವಾಗಿ ಈ ಉತ್ಪನ್ನ ದೊರೆಯಲಿದೆ.

ಈ ಕಾಲದ ಆಧುನಿಕ ಬಿಎಸ್ 6 ಡೀಸೆಲ್ ವಾಹನಗಳಿಗೆ ಡಿಇಎಫ್ ಒಂದು ಪ್ರಮುಖ ಅಂಶವಾಗಿದೆ. ಇದು ಹಾನಿಕಾರಕ ನೈಟ್ರೋಜನ್ ಆಕ್ಸೈಡ್‌ ಗಳನ್ನು ಸುರಕ್ಷಿತ ಮತ್ತು ಸ್ವಚ್ಛವಾದ ನೈಟ್ರೋಜನ್ ಮತ್ತು ನೀರಾಗಿ ಪರಿವರ್ತಿಸುವ ಮೂಲಕ ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಈ ಹೊಸ ಜೆನ್ಯೂನ್ ಡಿಇಎಫ್ ಉತ್ಪನ್ನ ಬಳಸುವ ಮೂಲಕ ಟಾಟಾ ಮೋಟಾರ್ಸ್ ಗ್ರಾಹಕರು ವಾಹನ ದಕ್ಷತೆಯನ್ನು ಸುಲಭವಾಗಿ ಹೆಚ್ಚಿಸಬಹುದು ಮತ್ತು ಇಂಗಾಲ ಹೊರಸೂಸುವಿಕೆಯನ್ನು ಕಡಮೆ ಮಾಡಿ ಪರಿಸರ ನಿಯಮಗಳನ್ನು ಪಾಲಿಸಬಹುದು.

ಈ ಕುರಿತು ಮಾತನಾಡಿರುವ ಎಚ್‌ಪಿಸಿಎಲ್‌ ನ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕ ಶ್ರೀ ಅಮಿತ್ ಗಾರ್ಗ್ ಅವರು, “ಎಚ್‌ಪಿಸಿಎಲ್‌ ಸಂಸ್ಥೆಯಲ್ಲಿ ನಾವು ಸಾರಿಗೆ ಕ್ಷೇತ್ರದಲ್ಲಿ ಹೊಸತನ ಮತ್ತು ಸುಸ್ಥಿರತೆಯನ್ನು ಸಾಧಿಸಲು ಬದ್ಧರಾಗಿದ್ದೇವೆ. ಟಾಟಾ ಮೋಟಾರ್ಸ್ ಜೊತೆಗಿನ ಈ ಪಾಲುದಾರಿಕೆಯ ಮೂಲಕ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ (ಡಿಇಎಫ್) ಅನ್ನು ಪರಿಚಯಿಸಿರುವುದು ಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸ್ವಚ್ಛ ಸಾರಿಗೆ ಉತ್ಪನ್ನಗಳಿಗೆ ನೆರವು ಒದಗಿಸುವ ವಿಚಾರದಲ್ಲಿ ನಮ್ಮ ಮಹತ್ವದ ಹೆಜ್ಜೆಯಾಗಿದೆ. ನಮ್ಮ 23,000ಕ್ಕೂ ಹೆಚ್ಚು ರಿಟೇಲ್ ಔಟ್‌ ಲೆಟ್‌ ಗಳ ಜಾಲ ಮತ್ತು ಟಾಟಾ ಮೋಟಾರ್ಸ್‌ ನ ತಾಂತ್ರಿಕ ಪರಿಣತಿಯನ್ನು ಬಳಸಿಕೊಂಡು, ಗ್ರಾಹಕರಿಗೆ ಉತ್ತಮ ಗುಣಮಟ್ಟದ, ಸುಲಭವಾಗಿ ಲಭ್ಯವಾಗುವ ಮತ್ತು ಪರಿಸರ ಸ್ನೇಹಿ ಉತ್ಪನ್ನವನ್ನು ಒದಗಿಸುವ ಗುರಿಯನ್ನು ಹೊಂದಿದ್ದೇವೆ. ಇದು ಹಸಿರು ಭವಿಷ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ ಎಂಬ ನಂಬಿಕೆ ನಮಗಿದೆ” ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಟಾಟಾ ಮೋಟಾರ್ಸ್‌ ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಗಿರೀಶ್ ವಾಘ್ ಅವರು, “ಎಚ್‌ಪಿಸಿಎಲ್ ಜೊತೆಗಿನ ಈ ಸಹಯೋಗವು ವಾಣಿಜ್ಯ ವಾಹನ ಉದ್ಯಮಕ್ಕೆ ಹೊಸತನ ಮತ್ತು ಸುಸ್ಥಿರ ಉತ್ಪನ್ನಗಳನ್ನು ಒದಗಿಸುವ ನಮ್ಮ ಬದ್ಧತೆಯಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ನಮ್ಮ ಕೋ- ಬ್ರ್ಯಾಂಡೆಡ್ ಜೆನ್ಯೂನ್ ಡೀಸೆಲ್ ಎಕ್ಸಾಸ್ಟ್ ಫ್ಲೂಯಿಡ್ ಉತ್ಪನ್ನವನ್ನು ನಮ್ಮ ಟಾಟಾ ಮೋಟಾರ್ಸ್ ಗ್ರಾಹಕರು ದೇಶಾದ್ಯಂತ ಸುಲಭವಾಗಿ ಪಡೆಯಬಹುದು ಮತ್ತು ಪರಿಸರ ಮಾನದಂಡಗಳನ್ನು ಪಾಲಿಸುತ್ತಲೇ ಅತ್ಯುತ್ತಮ ಕಾರ್ಯಕ್ಷಮತೆ ಸಾಧಿಸಬಹುದು. ಈ ಉತ್ಪನ್ನವು ವಾಹನ ದಕ್ಷತೆಯನ್ನು ಹೆಚ್ಚಿಸುವುದರ ಜೊತೆಗೆ ಪರಿಸರವನ್ನು ಸ್ವಚ್ಛಗೊಳಿಸಲು ಮತ್ತು ಭವಿಷ್ಯವನ್ನು ಹಸಿರಾಗಿಸಲು ಸಹಾಯ ಮಾಡುತ್ತದೆ. ಎಚ್‌ಪಿಸಿಎಲ್ ಜೊತೆಗಿನ ಈ ಪಾಲುದಾರಿಕೆಗೆ ನಾವು ಸಂತೋಷ ಹೊಂದಿದ್ದೇವೆ” ಎಂದು ತಿಳಿಸಿದರು.

ನಾವೀನ್ಯತೆ, ಸುಸ್ಥಿರತೆ ಮತ್ತು ಗ್ರಾಹಕ ಕೇಂದ್ರಿತ ಸೇವೆಗಳಿಗೆ ಬದ್ಧವಾಗಿರುವ ಎಚ್‌ಪಿಸಿಎಲ್, ಸ್ವಚ್ಛ ಇಂಧನಗಳು, ನವೀಕರಿಸಬಹುದಾದ ಶಕ್ತಿ ಮತ್ತು ಇಂಧನ ಯೋಜನೆಗಳು, ಡಿಜಿಟಲ್ ಪ್ರಗತಿಗಳ ಮೂಲಕ ಭಾರತದ ಇಂಧನ ರಿಟೇಲ್ ಕ್ಷೇತ್ರದ ಪರಿವರ್ತನೆಯನ್ನು ನಡೆಸುತ್ತಿದೆ. ಕಂಪನಿಯು ಉತ್ತಮವಾದ ಪೂರೈಕೆ ಸರಪಳಿ ಮತ್ತು ಆಧುನಿಕ ಮೂಲಸೌಕರ್ಯಗಳು, ಸಂಸ್ಕರಣಾಗಾರಗಳು ಮತ್ತು ಟರ್ಮಿನಲ್‌ ಗಳನ್ನು ಒಳಗೊಂಡಿದ್ದು, ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಸುಗಮವಾಗಿ ಉತ್ಪನ್ನಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ. ಸುಸ್ಥಿರ ಸಾರಿಗೆ ಮತ್ತು ಇಂಗಾಲ ಹೊರಸೂಸುವಿಕೆ ಕಡಿತಗೊಳಿಸುವ ಕಡೆಗೆ ಗಮನಹರಿಸುತ್ತಿರುವ ಎಚ್‌ಪಿಸಿಎಲ್, ಭಾರತದ ಸಾರಿಗೆ ಕ್ಷೇತ್ರಕ್ಕೆ ಹಸಿರು ಭವಿಷ್ಯ ಮತ್ತು ದಕ್ಷ ಭವಿಷ್ಯವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

ಸಂಪೂರ್ಣ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ಟಾಟಾ ಮೋಟಾರ್ಸ್‌ ನ ವಾಣಿಜ್ಯ ವಾಹನಗಳು ಸಂಪೂರ್ಣ ಸೇವಾ 2.0 ಯೋಜನೆಯನ್ನು ಒದಗಿಸುತ್ತದೆ. ಈ ಸೌಲಭ್ಯದ ಮೂಲಕ ವಾಹನದ ಸಂಪೂರ್ಣ ಜೀವನ ಚಕ್ರ ನಿರ್ವಹಣೆಯನ್ನು ಮಾಡಲಾಗುತ್ತಿದ್ದು, ಬ್ರೇಕ್‌ ಡೌನ್ ಅಸಿಸ್ಟೆನ್ಸ್, ತ್ವರಿತ ನೆರವು, ವಾರ್ಷಿಕ ನಿರ್ವಹಣಾ ಒಪ್ಪಂದಗಳು ಮತ್ತು ಜೆನ್ಯೂನ್ ಬಿಡಿಭಾಗಗಳ ಸುಲಭ ಲಭ್ಯತೆ ಮುಂತಾದ ಸೌಕರ್ಯ ಒದಗಿಸುತ್ತದೆ. ಇದರ ಜೊತೆಗೆ ಟಾಟಾ ಮೋಟಾರ್ಸ್ ತನ್ನ ಕನೆಕ್ಟೆಡ್ ವೆಹಿಕಲ್ ಪ್ಲಾಟ್ ಫಾರ್ಮ್ ಆದ ಫ್ಲೀಟ್ ಎಡ್ಜ್ ಅನ್ನು ಬಳಸಿಕೊಂಡು ವಾಹನಗಳ ನಿರ್ವಹಣೆಯನ್ನು ಉತ್ತಮಗೊಳಿಸುತ್ತದೆ ಮತ್ತು ವಾಹನವು ಗರಿಷ್ಠ ಸಮಯ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳುತ್ತದೆ. ದೇಶಾದ್ಯಂತ ಟಾಟಾ ಮೋಟಾರ್ಸ್ 2,500ಕ್ಕೂ ಹೆಚ್ಚು ಮಾರಾಟ ಮತ್ತು ಸೇವಾ ಸಂಪರ್ಕ ಕೇಂದ್ರಗಳನ್ನು ಹೊಂದಿದ್ದು, ತನ್ನ ವಾಹನಗಳಿಗೆ ಉತ್ತಮ ಸೇವಾ ಲಭ್ಯತೆಯನ್ನು ಒದಗಿಸುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ

Exit mobile version