ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ಬಸ್ ನಿರ್ವಾಹಕ
17/08/2022
ಬೆಳ್ತಂಗಡಿ: ಬಸ್ ನಿರ್ವಾಹಕನೋರ್ವ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಬೆಳ್ತಂಗಡಿಯಲ್ಲಿ ಸಂಭವಿಸಿದೆ.
ಮೃತ ವ್ಯಕ್ತಿ ರೆಖ್ಯ ಗ್ರಾಮದ ನಿವಾಸಿ ಮಂಜುನಾಥ ರೈ(50) ಎಂಬವರಾಗಿದ್ದಾರೆ. ಮೂಡಬಿದ್ರೆ-ಬೆಂಗಳೂರು ಬಸ್ಸನಲ್ಲಿ ಕಂಡಕ್ಟರ್ ಆಗಿರುವ ಇವರು ಇದ್ದ ಬಸ್ ಬುಧವಾರ ಬೆಳಿಗ್ಗೆ ಬೆಳ್ತಂಗಡಿ ಗೆ ಬರುವ ವೇಳೆಗೆ ಇವರಿಗೆ ಹೃದಯಾಘಾತವಾಗಿದ್ದು ಕುಸಿದು ಬಿದ್ದಿದ್ದಾರೆ.
ಕೂಡಲೇ ಇವರನ್ನು ಗುರುವಾಯನಕೆರೆಯ ಅಸ್ಪತ್ರೆಗೆ ದಾಖಲಿಸಲಾದರೂ ಆವೇಳೆಗೆ ಅವರು ಮೃತ ಪಟ್ಟಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka