ಹುಡುಗಿ ನೋಡಿ ಬರುತ್ತೇನೆ ಎಂದು ಹೊರಟಿದ್ದ ಯುವಕ ನೀರುಪಾಲು!
ಗದಗ: ಮದುವೆಗೆ ಹುಡುಗಿ ನೋಡಲು ಹೋಗಿದ್ದ ಯುವಕನೋರ್ವ ಬೈಕ್ ಸಮೇತ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಎಕ್ಲಾಸಪೂರ ಬಳಿಯಲ್ಲಿ ನಡೆದಿದೆ.
25 ವರ್ಷ ವಯಸ್ಸಿ ಟಿಪ್ಪು ಸುಲ್ತಾನ್ ಮೃತ ಯುವಕನಾಗಿದ್ದು, ಕೊಪ್ಪಳ ಜಿಲ್ಲೆಯ ಉಪ್ಪಿನ ಬೆಟಗೇರಿಗೆ ಹುಡುಗಿ ನೋಡಲು ಹೋಗುವುದಾಗಿ ತೆರಳಿದ್ದ. ಆದರೆ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ಮನೆಯವರು, ಇಂದು ಮುಂಡರಗಿಯಲ್ಲೇ ಇದ್ದು, ನಾಳೆ ಬಾ ಎಂದು ಹೇಳಿದ್ದರು. ಆದರೆ ಮಾತು ಕೇಳದ ಟಿಪ್ಪು ರಾತ್ರಿಯೇ ಹೊರಟಿದ್ದು, ಹಳ್ಳದಾಟಲು ಮುಂದಾಗಿದ್ದಾನೆ. ಪರಿಣಾಮವಾಗಿ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದು, ದಾರುಣವಾಗಿ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಹಶೀಲ್ದಾರ್ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಘಟನೆ ಸಂಬಂಧ ಮುಂಡರಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತೂಕ ಇಳಿಸಲು ಸಹಕಾರಿಯಾಗಿರುವ 3 ಬಗೆಯ ಚಹಾಗಳು!
ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ ವೇಳೆ ಅಪಘಾತ: ಇಬ್ಬರು ಸಾವು, ಓರ್ವ ಗಂಭೀರ
ಪ್ರೇಯಸಿಯನ್ನು ಗೋವಾ ಬೀಚ್ ಗೆ ಕರೆದೊಯ್ದು ಬರ್ಬರವಾಗಿ ಹತ್ಯೆ ಮಾಡಿದ ಯುವಕ!