ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಹೊಡೆದಾಟ - Mahanayaka
9:00 AM Thursday 12 - December 2024

ಹುಡುಗಿಯ ವಿಚಾರಕ್ಕೆ ಒಂದೇ ಸಂಘಟನೆಯ ಎರಡು ಗುಂಪುಗಳ ನಡುವೆ ಹೊಡೆದಾಟ

sullia
25/01/2022

ಸುಳ್ಯ: ಹುಡುಗಿಯೊಬ್ಬಳನ್ನು ಕಾರಿನಲ್ಲಿ ಕರೆದುಕೊಂಡು ಬಂದ ವಿಚಾರವಾಗಿ ಸುಳ್ಯ ತಾಲೂಕಿನ ಪೈಚಾರು ಎಂಬಲ್ಲಿ ಸಂಘಟನೆಯೊಂದರ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿರುವ ಘಟನೆ ವರದಿಯಾಗಿದೆ.

ಘಟನೆಯೊಂದರಲ್ಲಿ ಗುರುತಿಸಿಕೊಂಡಿರುವ ಯುವಕನೊಬ್ಬ ಅಪ್ರಾಪ್ತೆಯೋರ್ವಳನ್ನು ಆಕೆಯ ಮನೆಗೆ ಬಿಡಲೆಂದು ಪುತ್ತೂರಿನಿಂದ ಕಾರೊಂದರಲ್ಲಿ ಕರೆ ತಂದಿದ್ದಾನೆ. ಇದನ್ನು ಗಮನಿಸಿದ್ದ ಅದೇ ಸಂಘಟನೆಯ ಮತ್ತೊಂದು ಯುವಕರ ತಂಡ ಹಾಗೂ ಹುಡುಗಿಯ ಮನೆಯವರು ಕಾರನ್ನು ತಡೆದು ನಿಲ್ಲಿಸಿ ಆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲದೇ ಕಾರನ್ನು ಜಖಂಗೊಳಿಸಿದ್ದಾರೆ ಎನ್ನಲಾಗಿದೆ.

ಘಟನೆಯಲ್ಲಿ ಗಾಯಗೊಂಡ ಎರಡೂ ಗುಂಪುಗಳ ಕೆಲವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವೇಳೆ ಸಂಘಟನೆಯ ಪ್ರಮುಖರು ಮಧ್ಯ ಪ್ರವೇಶಿಸಿ ರಾಜಿ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ. ಆದರೆ ಯುವಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬೈಕ್ ಸವಾರನನ್ನು ಉಳಿಸುವ ಭರದಲ್ಲಿ ಕಂದಕಕ್ಕೆ ಉರುಳಿದ ಬಸ್!

ಇಕ್ಕೇರಿಯತ್ತ ಕಾನದ – ಕಟದರ ಪಯಣ/ ತುಳುನಾಡಿಗೆ ಅತಿಕಾರ/ ಅತ್ಯರ ಬಿದೆ/ತಳಿಯ ಪರಿಚಯ: ಸಂಚಿಕೆ: 14

ಏಕಾಏಕಿ ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್ ಬೈಕ್‌ ಗೆ ಡಿಕ್ಕಿ: ಸವಾರ ಸ್ಥಳದಲ್ಲೇ ಸಾವು

ಸಮಾಜವಾದಿ ವ್ಯವಸ್ಥೆಯ ಹರಿಕಾರ ಲೆನಿನ್ : ಮನೋಜ್ ವಾಮಂಜೂರು 

ಇತ್ತೀಚಿನ ಸುದ್ದಿ