ಹೂಗುಚ್ಛ, ಹಾರ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ | ಕನ್ನಡ ಪುಸ್ತಕ ಕೊಡಲು ಆದೇಶ - Mahanayaka

ಹೂಗುಚ್ಛ, ಹಾರ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ ಸಿಎಂ ಬೊಮ್ಮಾಯಿ | ಕನ್ನಡ ಪುಸ್ತಕ ಕೊಡಲು ಆದೇಶ

basavaraj bommai
10/08/2021

ಬೆಂಗಳೂರು: ಸಭೆಗಳಲ್ಲಿ ಹೂಗುಚ್ಚ, ಹಾರ, ಶಾಲುಗಳು, ಹಣ್ಣಿನ ಬುಟ್ಟಿಯನ್ನು ಅತಿಥಿಗಳಿಗೆ ನೀಡುವ ಸಂಪ್ರದಾಯವನ್ನು ನಿಷೇಧಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದ್ದು, ಇನ್ನು ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆಯಲ್ಲಿ ಕನ್ನಡ ಪುಸ್ತಕಗಳನ್ನು ಮಾತ್ರವೇ ಕೊಡಲು ನಿರ್ದೇಶಿಸಲಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳ ಸಭೆಗೆ ಆಗಮಿಸಿದ್ದ ಸಿಎಂ ಬಸವರಾಜ್ ಬೊಮ್ಮಾಯಿ ಅವರು, ಹೂಗುಚ್ಚ ಸ್ವೀಕರಿಸಲು ನಿರಾಕರಿಸಿದ್ದರು. ಜೊತೆಗೆ ಇದು ಅನಾವಶ್ಯಕ ವೆಚ್ಚವಾಗಿದೆ. ಇನ್ನು ಮುಂದೆ ಇಂತಹ ಸಂಪ್ರದಾಯ ಬೇಡ, ಶಿಷ್ಟಾಚಾರದ ಹೆಸರಿನಲ್ಲಿ ಹೂಗುಚ್ಚ ಹಾರ, ಶಾಲುಗಳನ್ನು ನೀಡುವ ಅಗತ್ಯವಿಲ್ಲ ಎಂದ ಹೇಳಿದ್ದರು.

ಸಿಎಂ ಹೇಳಿಕೆಯ ಬೆನ್ನಲ್ಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಿ.ರವಿಕುಮಾರ್ ಅವರು ಈ ಸಂಬಂಧ ಆದೇಶ ಹೊಡಿಸಿದ್ದು. ಈ ಆದೇಶದಲ್ಲಿ, ರಾಜ್ಯ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಸಂಸ್ಥೆಗಳು ನಡೆಸುವ ಸಭೆ ಮತ್ತು ಸಮಾರಂಭಗಳಲ್ಲಿ ಹೂಗುಚ್ಛ, ಹಾರ, ತುರಾಯಿ, ಹಣ್ಣಿನ ಬುಟ್ಟಿ, ಶಾಲು, ನೆನಪಿನ ಕಾಣಿಕೆ ಇತ್ಯಾದಿ ಯಾವುದೇ ರೀತಿಯ ಕಾಣಿಕೆಗಳನ್ನು ನೀಡಬಾರದು ಎಂದು ನಿರ್ದೇಶಿಸಲಾಗಿದ್ದು, ಇದರ ಬದಲು ಕನ್ನಡ ಪುಸ್ತಕಗಳನ್ನು ನೀಡಬಹುದು. ಈ ನಿರ್ದೇಶನವನ್ನು ಚಾಚು ತಪ್ಪದೇ ಅನುಷ್ಠಾನಗೊಳಿಸಲು ಸಂಬಂಧಪಟ್ಟ ಸರ್ಕಾರದ ಎಲ್ಲ ಇಲಾಖೆಗಳು ಮತ್ತು ರಾಜ್ಯ ಸರ್ಕಾರದ ಸ್ವಾಮ್ಯಕ್ಕೊಳಪಡುವ ಎಲ್ಲಾ ಸಂಸ್ಥೆಗಳು ತಮ್ಮ ಅಧೀನದಲ್ಲಿ ಬರುವ ಅಧಿಕಾರಿಗಳಿಗೆ ಸೂಚಿಸುವಂತೆ ತಿಳಿಸಲಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ಸುದ್ದಿಗಳು…

ಬಿಜೆಪಿಯಲ್ಲಿ ಅತೃಪ್ತಿಯ ಉರಿ: ದೆಹಲಿಯಲ್ಲಿ ಬೀಡು ಬಿಟ್ಟ ರಮೇಶ್ ಜಾರಕಿಹೊಳಿ ತಂಡ

ಎಟಿಎಂ ಒಡೆಯುತ್ತಿದ್ದ ವೇಳೆ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡ ಕಳ್ಳ! | ಮುಂದೆ ನಡೆದದ್ದೇನು ಗೊತ್ತಾ?

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಯಡಿಯೂರಪ್ಪಗೆ ವಯಸ್ಸಾಗಿಲ್ಲ, ಮದುವೆ ಮಾಡಿಸಿದ್ರೆ ಮಕ್ಕಳಾಗ್ತವೆ | ಸಿ.ಎಂ.ಇಬ್ರಾಹಿಂ

ಕಾಂಗ್ರೆಸ್ ನಲ್ಲಿ ಹಳ್ಳಿಯಿಂದ ಡೆಲ್ಲಿವರೆಗೆ ಬರೇ ಲೀಡರ್ ಗಳೇ ತುಂಬಿದ್ದಾರೆ | ಬಿಜೆಪಿ ಕಾರ್ಯಕರ್ತರನ್ನು ಹೊಗಳಿದ ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿ