ಎಮ್ಮೆ ಮೇಯಿಸುತ್ತಿದ್ದ ಬಾಲಕ ಹುಲಿಯ ದಾಳಿಗೆ ಬಲಿ

31/12/2020

ಭೋಪಾಲ್: 12 ವರ್ಷದ ಬಾಲಕನೋರ್ವನ ಮೇಲೆ ಹುಲಿ ದಾಳಿ ನಡೆಸಿ, ಕೊಂದು ಹಾಕಿರುವ ದಾರುಣ ಘಟನೆ ನಡೆದಿದ್ದು,  ಎಮ್ಮೆ ಮೇಯಿಸಲು ಹೋಗಿದ್ದ ಬಾಲಕ ಹುಲಿಗೆ ಬಲಿಯಾಗಿದ್ದಾನೆ.

ಮಧ್ಯಪ್ರದೇಶದ ಸಿಯೋನಿ ಜಿಲ್ಲಾಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. 12 ವರ್ಷದ  ಬಾಲಕ ಎಮ್ಮೆ ಮೇಯಿಸಲು ಖೈರಿ  ಅರಣ್ಯಪ್ರದೇಶಕ್ಕೆ ತೆರಳಿದ್ದು, ಈ ಸಂದರ್ಭ ಹುಲಿ ದಾಳಿ ನಡೆಸಿ, ಬಾಲಕನನ್ನು ತಿಂದು ಹಾಕಿದೆ.

ನರಭಕ್ಷಕ ಹುಲಿಯ ಹಿನ್ನೆಲೆ ಇಲ್ಲಿನ ಜನರು ತೀವ್ರ ಆತಂಕಗೊಂಡಿದ್ದು,  ನರಭಕ್ಷಕ ಹುಲಿಯನ್ನು ಹಿಡಿಯಬೇಕು ಎಂದು  ಒತ್ತಾಯಿಸಿದ್ದಾರೆ.  ಇದೀಗ ಅರಣ್ಯ ಇಲಾಖೆ ಹುಲಿಗೆ ಬೋನು ಸಿದ್ಧಪಡಿಸಿದ್ದು, ಹುಲಿಯನ್ನು ಹಿಡಿಯಲು ಅರಣ್ಯದಲ್ಲಿ ಬೋನು ಇರಿಸಲಾಗಿದೆ.

ಇತ್ತೀಚಿನ ಸುದ್ದಿ

Exit mobile version