ಹುಮ್ನಾಬಾದ್ ಪೊಲೀಸರ ಕಾರ್ಯಾಚರಣೆ: ಐಪಿಎಲ್ ಬುಕ್ಕಿಯ ಬಂಧನ - Mahanayaka
2:17 AM Saturday 14 - December 2024

ಹುಮ್ನಾಬಾದ್ ಪೊಲೀಸರ ಕಾರ್ಯಾಚರಣೆ: ಐಪಿಎಲ್ ಬುಕ್ಕಿಯ ಬಂಧನ

ipl bukki
30/03/2022

ಬೀದರ್: ಜಿಲ್ಲೆಯ ಹುಮ್ನಾಬಾದ್ ಪಟ್ಟಣದ ಬಸವನಗರದಲ್ಲಿ ಐಪಿಎಲ್ ಬುಕ್ಕಿಗಳ ಮೇಲೆ ಬೀದರ್ ಪೊಲೀಸರು ದಾಳಿ ಮಾಡಿ ಒಬ್ಬ ಐಪಿಎಲ್ ಬುಕ್ಕಿಯನ್ನು ಬಂಧಿಸಿರುವ ಘಟನೆ ನಡೆದಿದೆ.

ಅಲಿಯಾಸ್ ಪಮ್ಮಿ ಬಂಧಿತ ಐಪಿಎಲ್ ಬುಕ್ಕಿಯಾಗಿದ್ದಾನೆ. ದಾಳಿ ಮಾಡಿದ ವೇಳೆ 8 ಮೊಬೈಲ್, 1 ಲ್ಯಾಪ್‍ಟಾಪ್ ಹಾಗೂ 1,05,500 ರೂ. ನಗದನ್ನು ಹುಮ್ನಾಬಾದ್ ಪೊಲೀಸರು ಜಪ್ತಿ ಮಾಡಿದ್ದಾರೆ. ಅಲ್ಲದೆ, ಆರೋಪಿಯನ್ನು ಬಂಧಿಸಿ ಹುಮ್ನಾಬಾದ್ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಐಪಿಎಲ್ ಪಂದ್ಯಗಳಿಗೆ ಹಣ ಕಟ್ಟಿಸಿಕೊಂಡು ಮಹಾರಾಷ್ಟ್ರದ ಲಾತೂರಿನ ಪ್ರಮುಖ ಬುಕ್ಕಿಗೆ ಹಣ ನೀಡುತ್ತಿದ್ದನು. ಪರಮೇಶ್ವರ್ ಬಗ್ಗೆ ಖಚಿತ ಮಾಹಿತಿ ಪಡೆದ ಹುಮ್ನಾಬಾದ್ ಪೊಲೀಸರು ದಾಳಿ ಮಾಡಿದ್ದಾರೆ. ಎಸ್ಪಿ ಕಿಶೋರ್ ಬಾಬು ಮಾರ್ಗದರ್ಶನದಲ್ಲಿ ಹುಮ್ನಾಬಾದ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂಧನ ಬೆಲೆ ಇಳಿಕೆ ಬಿಜೆಪಿಯ ಚುನಾವಣಾ ಕಾರ್ಯತಂತ್ರವಾಗಿತ್ತು: ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮನೆಗೆ ದುಷ್ಕರ್ಮಿಗಳ ದಾಳಿ: ಸಿಸಿಟಿವಿ, ಭದ್ರತಾ ಗೋಡೆ ಧ್ವಂಸ

ಬಿಎಸ್‌ವೈ ರಾಜ್ಯ ರಾಜಕೀಯದಲ್ಲಿ ಶ್ರೀಕೃಷ್ಣ ಪಾತ್ರ ವಹಿಸಲಿದ್ದಾರೆ: ಶಾಸಕ ಎನ್.ಮಹೇಶ್

ಸಿಆರ್‌ಪಿಎಫ್‌ ಬಂಕರ್ ಮೇಲೆ ಬಾಂಬ್ ಎಸೆದ ಬುರ್ಖಾಧಾರಿ ಮಹಿಳೆ

ಇತ್ತೀಚಿನ ಸುದ್ದಿ