ಗೂಗಲ್ ನ ಜಾಹೀರಾತು ಮಾರಾಟ ವಿಭಾಗದ ನೂರಾರು ಉದ್ಯೋಗಿಗಳು ವಜಾ

google
17/01/2024

ಬೆಂಗಳೂರು: ಗೂಗಲ್ ನ ಜಾಬ್ ಕಟ್ ಪ್ರಕ್ರಿಯೆ ಮುಂದುವರಿದಿದ್ದು, ಜಾಹೀರಾತು ಮಾರಾಟ ವಿಭಾಗದಿಂದ ಗೂಗಲ್ ಇದೀಗ ನೂರಾರು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿರುವುದಾಗಿ ಮಂಗಳವಾರ ತಿಳಿಸಿದೆ.

ಗೂಗಲ್  ತನ್ನ ಹಾರ್ಡ್ ವೇರ್, ಸೆಂಟ್ರಲ್ ಎಂಜಿನಿಯರಿಂಗ್  ಹಾಗೂ ಗೂಗಲ್ ಅಸಿಸ್ಟೆಂಟ್ ತಂಡದಿಂದ ಉದ್ಯೋಗಿಗಳನ್ನು ವಜಾ ಮಾಡುವುದಾಗಿ  ಹೇಳಿದ ಕೆಲವೇ ದಿನಗಳಲ್ಲಿ ಈ ಘೋಷಣೆ ಮಾಡಿದೆ.

ಗೂಗಲ್ ಕೃತಕ ಬುದ್ಧಿಮತ್ತೆ ಸಾಫ್ಟ್ ವೇರ್ ಹಾಗೂ ಕೆಲಸದ ಹೊರೆಗಳನ್ನು ಕಡಿಮೆಗೊಳಿಸಲು ಮುಂದಾಗಿದ್ದು, ಇದಕ್ಕಾಗಿ ಸ್ವಯಂ ಚಾಲಿತ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಹೀಗಾಗಿ ನೌಕರರನ್ನು ವಜಾಗೊಳಿಸುವ ಪ್ರಕ್ರಿಯೆ ಮುಂದುವರಿಯುವ ಸಾಧ್ಯತೆಗಳಿವೆ.

ಜಾಗತಿಕವಾಗಿ  12 ಸಾವಿರ ಜನರನ್ನು ಕೆಲಸದಿಂದ ವಜಾಗೊಳಿಸುವುದಾಗಿ ಕಳೆದ ವರ್ಷ ಜನವರಿಯಲ್ಲಿ ಗೂಗಲ್ ಹೇಳಿತ್ತು. ಇದೀಗ ಇದರ ಪ್ರಕ್ರಿಯೆ ಆರಂಭವಾಗಿದೆ.

ಇತ್ತೀಚಿನ ಸುದ್ದಿ

Exit mobile version