ಪತಿ- ಪತ್ನಿ ಒಂದೇ ದಿನ ಹೃದಯಾಘಾತದಿಂದ ಸಾವು: ಸಾವಿನಲ್ಲಿ ಒಂದಾದ ದಂಪತಿ! - Mahanayaka

ಪತಿ– ಪತ್ನಿ ಒಂದೇ ದಿನ ಹೃದಯಾಘಾತದಿಂದ ಸಾವು: ಸಾವಿನಲ್ಲಿ ಒಂದಾದ ದಂಪತಿ!

onkara murthy dakshayini
01/10/2024

ಚಿತ್ರದುರ್ಗ:  ಪತಿ ಹಾಗೂ ಪತ್ನಿ ಇಬ್ಬರೂ ಒಂದೇ ದಿನ ಹೃದಯಾಘಾತದಿಂದ ಮೃತಪಟ್ಟ  ಅಚ್ಚರಿ, ಆಘಾತದ ಘಟನೆಯೊಂದು  ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ನಡೆದಿದೆ.


Provided by

ಚಿತ್ರದುರ್ಗದ ಕೆಳಗೋಟೆ ಬಡಾವಣೆಯಲ್ಲಿ ವಾಸವಾಗಿದ್ದ ನಿವೃತ್ತ ಲೈಬ್ರರಿಯನ್ ಓಂಕಾರಮೂರ್ತಿ(66), ಅವರ ಪತ್ನಿ ದ್ರಾಕ್ಷಾಯಣಿ ಒಂದೇ ದಿನ ಮೃತಪಟ್ಟ ದಂಪತಿಯಾಗಿದ್ದಾರೆ.

ಓಂಕಾರಮೂರ್ತಿ ಅವರಿಗೆ ಸೋಮವಾರ ಹೃದಯಾಘಾತವಾಗಿತ್ತು. ಅವರನ್ನು ನಗರದ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪತಿಗೆ ಹೃದಯಾಘಾತವಾಗಿರುವ ಸುದ್ದಿ ಪತ್ನಿ ದ್ರಾಕ್ಷಾಯಣಿ ಅವರ ಕಿವಿಗೆ ಬಿದ್ದಿತ್ತು.


Provided by

ಇದರಿಂದಾಗಿ ಅವರು ತೀವ್ರವಾಗಿ ಆಘಾತಗೊಂಡಿದ್ದರು. ನಂತರ ಅವರಿಗೆ ಕೂಡ ಹೃದಯಾಘಾತವಾಗಿದ್ದು, ಅವರು ಸಾವನ್ನಪ್ಪಿದ್ದಾರೆ. ಇದರ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಓಂಕಾರಮೂರ್ತಿ ಕೂಡ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ