ಪತಿ ಹೃದಯಾಘಾತದಿಂದ ಸಾವು: ನೋವು ಸಹಿಸಲಾಗದೇ 7ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಬಿಟ್ಟ ಪತ್ನಿ
ನವದೆಹಲಿ: ಪತಿ ಹೃದಯಾಘಾತದಿಂದ ಸಾವನ್ನಪ್ಪಿದ ಬೆನ್ನಲ್ಲೇ ಪತಿ ಸಾವನ್ನು ಸ್ವೀಕರಿಸಲಾಗದೇ 7 ಅಂತಸ್ತಿನ ಕಟ್ಟಡದಿಂದ ಹಾರಿ ಪತ್ನಿ ಸಾವಿಗೆ ಶರಣಾದ ಘಟನೆ ಗಾಜಿಯಾಬಾದ್ ನಲ್ಲಿ ನಡೆದಿದೆ.
ಅಭಿಷೇಕ್ ಅಹ್ಲುವಾಲಿ(25) ಹಾಗೂ ಅಂಜಲಿ ಕಳೆದ ವರ್ಷ ನವೆಂಬರ್ 30ರಂದು ವಿವಾಹವಾಗಿದ್ದರು. ಸೋಮವಾರ ಇಬ್ಬರೂ ದೆಹಲಿಯ ಮೃಗಾಲಯಕ್ಕೆ ಖುಷಿ ಖುಷಿಯಿಂದಲೇ ಭೇಟಿ ನೀಡಿದ್ದರು.
ಆದರೆ ಇದ್ದಕ್ಕಿದ್ದ ಹಾಗೆ ಅಭಿಷೇಕ್ ಗೆ ಎದೆನೋವು ಕಾಣಿಸಿಕೊಂಡಿದೆ. ತಕ್ಷಣವೇ ಅಭಿಷೇಕ್ ನ್ನು ಅಂಜಲಿ ಮತ್ತು ಸ್ನೇಹಿತರು ಗುರು ತೇಗ್ ಬಹದ್ದೂರ್ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಅಭಿಷೇಕ್ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿರೋದಾಗಿ ವೈದ್ಯರು ಹೇಳಿದ್ದಾರೆ.
ಪತಿಯ ಸಾವಿನಿಂದ ಕಂಗಾಲಾಗಿದ್ದ ಅಂಜಲಿ, ಪತಿಯ ಮೃತದೇಹದ ಎದುರು ಬಿಕ್ಕಿಬಿಕ್ಕಿ ಅಳುತ್ತಾ ಕುಳಿತಿದ್ದರು. ಏಕಾಏಕಿ ಎದ್ದು 7 ಅಂತಸ್ತಿನ ಬಾಲ್ಕನಿಗೆ ಓಡಿ, ಅಲ್ಲಿಂದ ಕೆಳಗೆ ಜಿಗಿದು ಪ್ರಾಣ ಬಿಟ್ಟಿದ್ದಾಳೆ.
ಅಂಜಲಿಯನ್ನು ಹಿಡಿದುಕೊಳ್ಳಲು ನಾವು ಮುಂದಾದರೂ ನಾವು ಹಿಡಿಯುವಷ್ಟರಲ್ಲಿ ಅವಳು ಮಹಡಿಯಿಂದ ಹಾರಿದ್ದಳು ಎಂದು ಅಭಿಷೇಕ್ ಅವರ ಸಂಬಂಧಿ ಬಬಿತಾ ತೀವ್ರ ನೋವಿನೊಂದಿಗೆ ಮಾಧ್ಯಮಗಳಿಗೆ ತಿಳಿಸಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth