ಪತ್ನಿಯ ಅಕ್ರಮ ಸಂಬಂಧದ ವಿಡಿಯೋ ನೋಡಿದ ಪತಿ: ನಡೆದೇ ಹೋಯ್ತು ಭೀಕರ ಹತ್ಯೆ

bangalore
28/07/2023

ಬೆಂಗಳೂರು: ಹೆಂಡತಿ ಅಕ್ರಮ ಸಂಬಂಧ ತಿಳಿದು‌ ಆಕೆಯನ್ನು ಪತಿ ಕೊಲೆಗೈದ ಘಟನೆ ಬೆಂಗಳೂರಿನ  ಮೂಡಲಪಾಳ್ಯದ ಶಿವಾನಂದ ನಗರದಲ್ಲಿ ನಡೆದಿದೆ.

ಶಂಕರ್ ಕೊಲೆ ಮಾಡಿದ ಆರೋಪಿಯಾಗಿದ್ದು ವೃತ್ತಿಯಲ್ಲಿ ಗುತ್ತಿಗೆದಾರನಾಗಿದ್ದ ಆರೋಪಿ ಶಂಕರ್ 13 ವರ್ಷಗಳ ಹಿಂದೆ ಗೀತಾಳನ್ನು ಮದುವೆ ಆಗಿದ್ದ. ಇವರಿಗೆ ಒಂದು ಗಂಡು ಮಗು ಇದೆ.

ಹೆಂಡತಿಯ ಮೇಲೆ ಗಂಡನಿಗಿದ್ದ ಅನುಮಾನಕ್ಕೆ ಸಾಕ್ಷಿಯೆಂಬಂತೆ ಒಂದು ವಿಡಿಯೋ ಆತನಿಗೆ ಸಿಗುತ್ತದೆ. ಹೆಂಡತಿಯ ಅಕ್ರಮ ಸಂಬಂಧದ ವಿಡಿಯೋ ಮೊಬೈಲ್‌ ನಲ್ಲಿ ನೋಡಿದ ಪತಿ ಮಾರಕಾಸ್ತ್ರಗಳಿಂದ ಹೊಡೆದು ಪತ್ನಿಯನ್ನು ಭೀಕರವಾಗಿ ಕೊಲೆಗೈದಿದ್ದಾನೆ.

ಪತ್ನಿ ಗೀತಾಳನ್ನು ಹತ್ಯೆ ಮಾಡಿದ ಬಳಿಕ ಆಕೆಯ ತಾಯಿಗೆ ಕರೆ ಮಾಡಿ ಮಗಳನ್ನು ಕೊಲೆ ಮಾಡಿರುವ ವಿಚಾರ ತಿಳಿಸಿದ್ದಾನೆ ಎನ್ನಲಾಗಿದೆ. ಮರ್ಯಾದೆ ಹೋಗುತ್ತದೆ ಎನ್ನುವ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ್ದಾಗಿ ಆರೋಪಿ ಹೇಳಿದ್ದಾನೆ.

ಪತ್ನಿಯ ಅಕ್ರಮ ಸಂಬಂಧ ವಿಡಿಯೋ ಪತಿಯ ಮೊಬೈಲ್‌ ಗೆ ಪತ್ನಿ ಕಳುಹಿಸಿದ್ದು ಮಾತ್ರವಲ್ಲದೇ ಪತ್ನಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ವ್ಯಕ್ತಿ ಕೂಡ ಶಂಕರ್‌ ಗೆ ಪತ್ನಿಯ ವಿಡಿಯೋವನ್ನು ಕಳುಹಿಸಿದ್ದ. ಈ ವಿಚಾರವಾಗಿ ಕಳೆದ 15 ದಿನದಿಂದ ನಿರಂತರವಾಗಿ ಗಲಾಟೆ ನಡೆಯುತ್ತಿತ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 7483551849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

FacebookTwitterWhatsappInstagramEmailTelegram

ಇತ್ತೀಚಿನ ಸುದ್ದಿ

Exit mobile version