ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ - Mahanayaka
3:56 PM Thursday 12 - December 2024

ಹುಟ್ಟುಹಬ್ಬದ ಉಡುಗೊರೆ ಕೊಡುವುದಾಗಿ ನಂಬಿಸಿ ಬಡ ಬಾಲಕಿಯ ಸಾಮೂಹಿಕ ಅತ್ಯಾಚಾರ

kolara crime news
19/02/2022

ಕೋಲಾರ:  9ನೇ ತರಗತಿಯ ಬಾಲಕಿಗೆ ಹುಟ್ಟು ಹಬ್ಬದ ಕೊಡುಗೆ ನೀಡುವ ನೆಪದಲ್ಲಿ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ ಹೇಯ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ಆನಂದ ಕುಮಾರ್(25) ಪ್ರವೀಣ್(21), ಕಾಂತರಾಜು(23), ವೇಣು(19) ಎಂಬವರನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ಪೋಕ್ಸೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸಂತ್ರಸ್ತೆಯು ಬಡ ಕುಟುಂಬಕ್ಕೆ ಸೇರಿದವಳಾಗಿದ್ದು,  9ನೇ ತರಗತಿಯಲ್ಲಿ ಓದುತ್ತಿದ್ದಳು ಎನ್ನಲಾಗಿದೆ. ತನ್ನ ಹುಟ್ಟು ಹಬ್ಬದಂದು ಮನೆಯವರು ಹೊಸ ಬಟ್ಟೆ ತೆಗೆಸಿಕೊಟ್ಟಿಲ್ಲ ಎಂಬ ಕೋಪದಿಂದ ಸಂಜೆ ಮನೆಯಿಂದ ಹೊರ ಬಂದಿದ್ದಳು ಎನ್ನಲಾಗಿದೆ.

ಈ ವೇಳೆ ಆಕೆಗೆ ಪರಿಚಿತನಾಗಿದ್ದ ಯುವಕನೋರ್ವ ಹುಟ್ಟು ಹಬ್ಬಕ್ಕೆ ಉಡುಗೊರೆ ನೀಡುವುದಾಗಿ ನಂಬಿಸಿ, ಕರೆದೊಯ್ದು ತನ್ನ ಇತರ ಮೂವರು ಸ್ನೇಹಿತರ ಜೊತೆಗೂಡಿ, ಕಾಮಸಮುದ್ರ ವ್ಯಾಪ್ತಿಯ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ.

ಅತ್ಯಾಚಾರದಿಂದ ತೀವ್ರವಾಗಿ ಅಸ್ವಸ್ಥಳಾಗಿದ್ದ ಬಾಲಕಿ ಗ್ರಾಮಕ್ಕೆ ಬಂದ ಬಾಲಕಿ ತನ್ನ ಪೋಷಕರಿಗೆ ಈ ವಿಚಾರ ತಿಳಿಸಿದ್ದಾಳೆ. ಇದರಿಂದ ಗಾಬರಿಗೊಂಡ ಪೋಷಕರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇದರಿಂದಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಇನ್ನೂ ಸಂತ್ರಸ್ತ ಬಾಲಕಿಯ ಪೋಷಕರಿಗೆ ಪೊಲೀಸ್ ವರಿಷ್ಠಾಧಿಕಾರಿ ದೇವರಾಜ್ ಕಾಮಸಮುದ್ರ ಠಾಣೆಗೆ ಆಗಮಿಸಿ ಧೈರ್ಯ ತುಂಬಿದ ಬಳಿಕ ಅವರು  ದೂರು ನೀಡಲು ಒಪ್ಪಿಕೊಂಡಿದ್ದಾರೆನ್ನಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಂಪುಕೋಟೆ ಮೇಲೆ ಕೇಸರಿ ಬಾವುಟ ಹಾರಿಸುತ್ತೇನೆ ಎಂಬ ಹೇಳಿಕೆ: ಸಚಿವ ಈಶ್ವರಪ್ಪ ರಾಜೀನಾಮೆ ಒತ್ತಾಯಿಸಿ ಪ್ರತಿಭಟನೆ

ಮತಗಟ್ಟೆಯಲ್ಲಿ ನೂಕುನುಗ್ಗಲು: ಕ್ಷಮೆ ಕೇಳಿದ ತಮಿಳು ನಟ ವಿಜಯ್

ನೀಲಿ ಸಾಗರವಾದ ಬೆಂಗಳೂರು: ವಿಧಾನಸೌಧ-ಹೈಕೋರ್ಟ್ ಚಲೋ ಬೃಹತ್ ಪ್ರತಿಭಟನೆ

ಸಚಿವ ಈಶ್ವರಪ್ಪ ಭಾವಚಿತ್ರಕ್ಕೆ ಬಿಜೆಪಿ ಮುಖಂಡರಿಂದ ಹಾಲಿನ ಅಭಿಷೇಕ

ಜಮ್ಮು ಕಾಶ್ಮಿರದಲ್ಲಿ ಗುಂಡಿನ ಚಕಮಕಿ: ಉಗ್ರನ ಹತ್ಯೆ; ಇಬ್ಬರು ಯೋಧರು ಹುತಾತ್ಮ

 

 

ಇತ್ತೀಚಿನ ಸುದ್ದಿ