ಹುಟ್ಟುವ ಮಗು ಯಾವ ಜಾತಿಯದ್ದು? | ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ! - Mahanayaka
5:24 PM Wednesday 11 - December 2024

ಹುಟ್ಟುವ ಮಗು ಯಾವ ಜಾತಿಯದ್ದು? | ಗರ್ಭಿಣಿ ಪತ್ನಿಯನ್ನು ಕೊಂದ ಪಾಪಿ!

mysore news
22/03/2022

ಮೈಸೂರು: ಪ್ರೀತಿಸಿ ಮದುವೆಯಾದ ಗರ್ಭಿಣಿ ಪತ್ನಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆಯಲ್ಲಿ ನಡೆದಿದ್ದು ಆರೋಪಿ  ಪತಿ ಹಿನಕಲ್ ನಿವಾಸಿ ಪ್ರಮೋದ್ ನನ್ನು ಪೋಲಿಸರು ಬಂಧಿಸಿದ್ದಾರೆ.

ಕೃಷಿ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರು ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರಮೋದ್, ಮೂರು ವರ್ಷಗಳ ಹಿಂದೆ ಅನ್ಯ ಜಾತಿಯ  ಅಶ್ವಿನಿಯನ್ನು ಪ್ರೀತಿಸಿ ವಿವಾಹವಾಗಿದ್ದ. ಖಾಸಗಿ ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಆಗಿ ಅಶ್ವಿನಿ ಕಾರ್ಯ ನಿರ್ವಹಿಸುತ್ತಿದ್ದರು. ಅಶ್ವಿನಿ ಗರ್ಭಿಣಿಯಾಗಿದ್ದು, ಹುಟ್ಟುವ ಮಗು ಯಾವ ಜಾತಿಗೆ ಸೇರಲಿದೆ ಎಂಬ ಗೊಂದಲದಲ್ಲಿದ್ದ ಪ್ರಮೋದ್, ಮಗುವನ್ನು ತೆಗೆಸುವಂತೆ ಒತ್ತಡ ಹೇರುತ್ತಿದ್ದ. ಈ ಬಗ್ಗೆ ಎರಡು ಕುಟುಂಬದ ಹಿರಿಯರು ರಾಜಿ ಸಂಧಾನ ನಡೆಸಿದ್ದರು.

ಶುಕ್ರವಾರ ಸಂಜೆ ಮನೆಗೆ ಬಂದ ಪ್ರಮೋದ್  ಪತ್ನಿ ಅಶ್ವಿನಿ ಜತೆ ಜಗಳವಾಡಿ ಕೊಲೆ ಮಾಡಿದ್ದಾನೆ. ಪುತ್ರಿ ಅಶ್ವಿನಿಯಿಂದ ಯಾವುದೇ ಕರೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡು ಅಶ್ವಿನಿ  ಪೋಷಕರು, ವಿಜಯ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

ಅನುಮಾನಗೊಂಡ ಪೊಲೀಸರು, ವಿಚಾರಣೆ ನಡೆಸಿದಾಗ ಪ್ರಮೋದ್ ತಾನೇ ಕೊಲೆ ಮಾಡಿ, ಬೆಳವಾಡಿ ಕೆರೆಯಲ್ಲಿ ಶವ ಎಸೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಪ್ರಮೋದ್ ನನ್ನು ಪೋಲಿಸರು  ಬಂಧಿಸಿದ್ದು, ಕಿರುಕುಳ ನೀಡಿದ ಪ್ರಮೋದ್ ನ ಪೋಷಕರು ಮತ್ತು ಸೋದರಿಗಾಗಿ ಶೋಧ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಪ್ರಿಲ್ ನಲ್ಲಿ KGF- Chapter-2 V/S ವಿಜಯ್ ನಟನೆಯ BEAST

ಮಾತು ಬಾರದ, ಕಿವಿಯೂ ಕೇಳದ ಯುವಕನ ವರಿಸಿದ ಪದವೀಧರ ಯುವತಿ

ನಾಳೆ ಪೊಸರುಗುಡ್ಡೆ ಮಿಯ್ಯಾರು ಶ್ರೀ ಸತ್ಯಸಾರಮಾನಿ ದೈವಸ್ಥಾನದ ವಾರ್ಷಿಕ ನೇಮೋತ್ಸವ

ಹಿಜಾಬ್ ತೀರ್ಪು: ಬಂದ್ ಕರೆ ನೀಡಿದವರ ವಿರುದ್ದ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಲು ಅರ್ಜಿ ಸಲ್ಲಿಕೆ

ಮತ್ತೆ ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ 50 ರೂ. ಏರಿಕೆ

ಇತ್ತೀಚಿನ ಸುದ್ದಿ