ದಂಡ ಹಾಕಿದ್ದಕ್ಕೆ ಪೊಲೀಸ್ ಠಾಣೆಯ ವಿದ್ಯುತ್ ಸಂಪರ್ಕ ಕಟ್ ಮಾಡಿದ ಭೂಪ!
07/02/2021
ಹೈದರಾಬಾದ್: ಟ್ರಾಫಿಕ್ ಪೊಲೀಸರು ದಂಡ ಹಾಕಿದ್ದರಿಂದ ಕೋಪಗೊಂಡ ವಿದ್ಯುತ್ ಇಲಾಖೆಯ ನೌಕರನೋರ್ವ ಟ್ರಾಫಿಕ್ ಸಿಗ್ನಲ್ ಹಾಗೂ ಪೊಲೀಸ್ ಠಾಣೆಯ ವಿದ್ಯುತ್ ಕಡಿತಗೊಳಿಸಿದ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸಲಾಗಿದೆ.
ಮಲಕಾಜಾಗಿರಿಯ ವಿದ್ಯುತ್ ಇಲಾಖೆಯಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಎ.ರಮೇಶ್ ಬಂಧಿತ ಆರೋಪಿಯಾಗಿದ್ದಾನೆ. ರಮೇಶ್ ನ ಬೈಕ್ ನ್ನು ಅಪ್ರಾಪ್ತ ವಯಸ್ಸಿನ ಬಾಲಕ ಓಡಿಸಿದ್ದು, ಇದರಿಂದಾಗಿ ರಮೇಶ್ ಗೆ ದಂಡ ವಿಧಿಸಲಾಗಿತ್ತು. ಈ ವೇಳೆ ರಮೇಶ್ ಪರಿಪರಿಯಾಗಿ ಬೇಡಿಕೊಂಡರೂ ಪೊಲೀಸರು ದಂಡ ವಿಧಿಸಿದ್ದರು ಎನ್ನಲಾಗಿದೆ.
ಪೊಲೀಸರ ದಂಡ ಹಾಕಿಯೇ ಬಿಟ್ಟರಲ್ಲ ಎಂದು ಕೋಪಗೊಂಡ ರಮೇಶ್ ಪೊಲೀಸರಿಗೆ ಬುದ್ಧಿ ಕಲಿಸಬೇಕು, ಅವರಿಗೂ ತೊಂದರೆ ಕೊಡಬೇಕು ಎಂದು ಆಕ್ರೋಶದಲ್ಲಿ ಪೊಲೀಸ್ ಠಾಣೆ ಹಾಗೂ ಟ್ರಾಫಿಕ್ ಸಿಗ್ನಲ್ ನ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾನೆ ಎಂದು ಆರೋಪಿಸಲಾಗಿದೆ.