ನಾನೂ ಬಜರಂಗದಳದ ಕಾರ್ಯಕರ್ತೆ, ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ: ಶೋಭಾ ಕರಂದ್ಲಾಜೆ ಕಿಡಿ - Mahanayaka
11:22 PM Thursday 12 - December 2024

ನಾನೂ ಬಜರಂಗದಳದ ಕಾರ್ಯಕರ್ತೆ, ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ: ಶೋಭಾ ಕರಂದ್ಲಾಜೆ ಕಿಡಿ

shobha karandlaje
02/05/2023

ಬೆಂಗಳೂರು:  ನಾನೂ ಬಜರಂಗದಳದ ಕಾರ್ಯಕರ್ತೆ, ತಾಕತ್ ಇದ್ರೆ ನನ್ನನ್ನೂ ಅರೆಸ್ಟ್ ಮಾಡಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಗುಡುಗಿದ್ದಾರೆ.

ನಿಮಗೆ ತಾಕತ್‌ ಇದ್ರೆ ಬಜರಂಗದಳ (Bajrang Dal) ನಿಷೇಧ ಮಾಡಿ ನೋಡಿ ಎಂದು ಕಾಂಗ್ರೆಸ್‌ (Congress) ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ (Shobha Karandlaje) ಸವಾಲು ಹಾಕಿದ್ದಾರೆ.

ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿ, ಅದರಲ್ಲಿ ಬಜರಂಗದಳ ನಿಷೇಧಿಸುವ ಕುರಿತು ಪ್ರಸ್ತಾಪಿಸಿತ್ತು. ಕಾಂಗ್ರೆಸ್‌ ಪ್ರಣಾಳಿಕೆ ವಿರುದ್ಧ ಶೋಭಾ ಕರಂದ್ಲಾಜೆ ಕೆಂಡಾಮಂಡಲರಾಗಿದ್ದಾರೆ.

ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ ನ ವಿನಾಶ ಕಾಲ‌ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ನವರು ಪಿಎಫ್ ಐ ನಿಷೇಧ ಮಾಡ್ತೀವಿ. ಜತೆಗೆ ಬಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ ನವರ ಟಾರ್ಗೆಟ್ ಇರೋದು ಪಿಎಫ್ ಐ ಅಲ್ಲ, ಅವರ ಟಾರ್ಗೆಟ್ ಬಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ.

ನಗರದಲ್ಲಿ ಈ ಕುರಿತು ಪ್ರತಿಕ್ರಿಯಿಸಿ, ವಿನಾಶಕಾಲ ವಿಪರೀತ ಬುದ್ಧಿ ಅನ್ನುವಂತೆ ಇದೆ ಕಾಂಗ್ರೆಸ್ ನಡೆ. ಕಾಂಗ್ರೆಸ್‌ನ ವಿನಾಶ ಕಾಲ‌ ಸಮೀಪಿಸಿದೆ. ಈಗಾಗಲೇ ಕೇಂದ್ರ ಸರ್ಕಾರ ಪಿಎಫ್ಐ ನಿಷೇಧ ಮಾಡಿದೆ. ಇವತ್ತು ಕಾಂಗ್ರೆಸ್‌ ನವರು ಪಿಎಫ್ ಐ ನಿಷೇಧ ಮಾಡ್ತೀವಿ. ಜತೆಗೆ ಬಜರಂಗದಳ ನಿಷೇಧ ಮಾಡ್ತೀವಿ ಎಂದಿದ್ದಾರೆ. ಕಾಂಗ್ರೆಸ್‌ ನವರ ಟಾರ್ಗೆಟ್ ಇರೋದು ಪಿಎಫ್ ಐ ಅಲ್ಲ, ಅವರ ಟಾರ್ಗೆಟ್ ಬಜರಂಗದಳ ಎಂದು ವಾಗ್ದಾಳಿ ನಡೆಸಿದ್ದಾರೆ.

ನೀವು PFIನ್ನು ಬಜರಂಗದಳದ ಜೊತೆ ಹೋಲಿಕೆ ಮಾಡ್ತೀರಾ? ಬಜರಂಗದಳ ಬ್ಯಾನ್ ಮಾಡುವ ನಿಮ್ಮ ಶಕ್ತಿ ತೋರಿಸಿ. ಆಗ ನಾವೂ ದೇಶಾದ್ಯಂತ ತೋರಿಸುತ್ತೇವೆ. ಬಜರಂಗದಳದ ನಿಷೇಧವನ್ನು‌ ಹಿಂದೂ ಸಮಾಜ ಒಪ್ಪಲ್ಲ. ಮುಸಲ್ಮಾನರ ಮುಖವಾಡ ಸಿದ್ದರಾಮಯ್ಯ ಅಂತ ನಾನು ಹಿಂದೆ ಹೇಳಿದ್ದೆ. ಅದು ಇವತ್ತು ಸಾಬೀತಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ