ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆ | ನಾಯಕತ್ವದ ಗೊಂದಲಕ್ಕೆ ತೆರೆ ಎಳೆದ ಸೋನಿಯಾ ಗಾಂಧಿ
ನವದೆಹಲಿ: ನಾನೇ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಸೋನಿಯಾ ಗಾಂಧಿ ಘೋಷಿಸಿದ್ದು, ಈ ಮೂಲಕ ಕಾಂಗ್ರೆಸ್ ನೊಳಗಿರುವ ನಾಯಕತ್ವದ ಗೊಂದಲಗಳಿಗೆ ಸಂಪೂರ್ಣವಾದ ತೆರೆಯನ್ನು ಎಳೆದಿದ್ದಾರೆ.
ದೆಹಲಿಯ ಎಐಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿರುವ ಪ್ರತಿಯೊಬ್ಬರಿಗೂ ಒಂದು ಸ್ಪಷ್ಟತೆಯನ್ನು ನೀಡಲು ಈ ಸಭೆ ಕರೆಯಲಾಗಿದೆ. ಪಕ್ಷದ ಪ್ರತಿ ಸದಸ್ಯನೂ ಈಗ ಕಾಂಗ್ರೆಸ್ ನ ಪುನರುಜ್ಜೀವನವನ್ನು ಬಯಸುತ್ತಿದ್ದಾರೆ. ಹಾಗೇ ಕಾಂಗ್ರೆಸ್ ಮತ್ತೆ ಪುಟಿದೇಳಬೇಕೆಂದರೆ ನಮ್ಮಲ್ಲಿ ಏಕತೆ ಇರಬೇಕು. ಪಕ್ಷದ ಹಿತಾಸಕ್ತಿಯನ್ನು ಪ್ರಧಾನವಾಗಿಟ್ಟುಕೊಳ್ಳಬೇಕು ಎಂದು ಅವರು ಹೇಳಿದರು.
ಇದೇ ವೇಳೆ ಜಿ23 ನಾಯಕರಿಗೆ ಒಂದು ಸ್ಪಷ್ಟ ಸಂದೇಶವನ್ನು ನೀಡಿದ ಸೋನಿಯಾ ಗಾಂಧಿ, ನಾನೀಗ ಕಾಂಗ್ರೆಸ್ ನ ಪೂರ್ಣಾವಧಿ ಅಧ್ಯಕ್ಷೆಯಂತೆಯೇ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾಯಕರು ಯಾರೇ ಇರಲಿ, ಯಾವುದೇ ವಿಷಯದ ಬಗ್ಗೆ ಮಾಧ್ಯಮಗಳ ಮೂಲಕ ಮಾತನಾಡಿ, ಅದನ್ನು ನನಗೆ ತಲುಪಿಸುವ ಅಗತ್ಯವಿಲ್ಲ. ಏನೇ ಇದ್ದರೂ ನನ್ನ ಬಳಿ ನೇರವಾಗಿ ಮಾತನಾಡಿ. ನನ್ನ ಬಳಿ ಯಾವುದೇ ವಿಷಯ ಚರ್ಚೆ ಮಾಡಲು ನಿಮಗೆಲ್ಲ ಸ್ವಾತಂತ್ರ್ಯವಿದೆ ಎಂದು ಹೇಳಿದರು.
ಜಿ 23 ನಾಯಕರಲ್ಲಿ ಒಬ್ಬರಾದ ಕಪಿಲ್ ಸಿಬಲ್ ಕಳೆದ ತಿಂಗಳು ಸೋನಿಯಾ ಗಾಂಧಿಯವರಿಗೆ ಒಂದು ಪತ್ರ ಬರೆದಿದ್ದರು. ಕಾಂಗ್ರೆಸ್ ಗೆ ಇನ್ನೂ ಪೂರ್ಣಾವಧಿ ಅಧ್ಯಕ್ಷರ ನೇಮಕವಾಗಿಲ್ಲ. ಹೀಗಿದ್ದಾಗ್ಯೂ ಪಕ್ಷ ಯಾರ ನೇತೃತ್ವದಲ್ಲಿ ಮಹತ್ವದ ವಿಚಾರಗಳ ನಿರ್ಧಾರ ಕೈಗೊಳ್ಳುತ್ತಿದೆ. ಪೂರ್ಣಾವಧಿ ಅಧ್ಯಕ್ಷ ಅನುಪಸ್ಥಿತಿಯಲ್ಲಿ ಯಾರು ನಿರ್ಣಯಗಳನ್ನು ರೂಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಈ ಸಭೆಯಲ್ಲಿ ಸೋನಿಯಾ ಗಾಂಧಿ ಸ್ಪಷ್ಟವಾದ ಉತ್ತರ ನೀಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb
ಇನ್ನಷ್ಟು ಸುದ್ದಿಗಳು…
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ | ಏಮ್ಸ್ ಅಧಿಕಾರಿ ಮಾಹಿತಿ
ವಿದ್ಯಾರ್ಥಿನಿಯ ಮೇಲೆ ಶಿಕ್ಷಕನಿಂದ ಶಾಲೆಯಲ್ಲಿಯೇ ಅತ್ಯಾಚಾರ!
ನಾನು ಕಬಡ್ಡಿ ಆಡಿದನ್ನು ವಿಡಿಯೋ ಮಾಡಿದವ ‘ರಾವಣ’ | ಪ್ರಗ್ಯಾ ಸಿಂಗ್ ಠಾಕೂರ್
ಲಾಡ್ಜ್ ನಲ್ಲಿ ದಸರ ಪಾರ್ಟಿಯ ವೇಳೆ ಸ್ನೇಹಿತರ ನಡುವೆ ಗಲಾಟೆ: ಓರ್ವನ ಬರ್ಬರ ಹತ್ಯೆ
ತ್ರಿಶೂಲ ದೀಕ್ಷೆ ನೀಡಿದ್ದೇವೆಯೇ ಹೊರತು ಬಾಂಬ್, ಗ್ರೆನೈಡ್ ಕೊಟ್ಟಿದ್ದಲ್ಲ | ಶರಣ್ ಪಂಪ್ ವೆಲ್
ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ 89 ಸಾವಿರ ರೂ. ಪಂಗನಾಮ ಹಾಕಿದ ಸೈಬರ್ ಕಳ್ಳರು!
ಸಲೀಂ- ಉಗ್ರಪ್ಪ ಸಂಭಾಷಣೆ: ಸ್ವತಂತ್ರ ಏಜೆನ್ಸಿಯಿಂದ ತನಿಖೆ ಮಾಡಿಸಬೇಕು | ಡಿ.ವಿ.ಸದಾನಂದ ಗೌಡ