ಕೆಜಿಎಫ್ –2 ನಾನು ನೋಡಿಲ್ಲ, ನನ್ನ ಅಭಿರುಚಿಯ ಚಿತ್ರ ಅದಲ್ಲ: ಕಿಶೋರ್ ಕುಮಾರ್ ನೇರ ಮಾತು
ನಾನು ಕೆಜಿಎಫ್—2 ಸಿನಿಮಾವನ್ನು ನೋಡಿಲ್ಲ, ನಾನು ಇಷ್ಟಪಡುವ ಸಿನಿಮಾ ಅದಲ್ಲ ಎಂದು ನಟ ಕಿಶೋರ್ ಕುಮಾರ್ ಹೇಳಿದ್ದು, ಇಂಡಿಯಾ ಟು ಡೇ ನಡೆಸಿದ ಸಂದರ್ಶನದಲ್ಲಿ ಕಿಶೋರ್ ಕುಮಾರ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದು ಸರಿಯೋ ಅಥವಾ ತಪ್ಪೋ ಗೊತ್ತಿಲ್ಲ, ನಾನು ಕೆಜಿಎಫ್ – 2 ಸಿನಿಮಾ ನೋಡಿಲ್ಲ, ನಾನು ಇಷ್ಟಪಡುವ ಸಿನಿಮಾ ಅದಲ್ಲ, ಇದು ವೈಯಕ್ತಿಕ ಆಯ್ಕೆಯ ವಿಚಾರ, ಯಶಸ್ವಿಯಾಗಿರದ ಕೆಲವು ಸಣ್ಣ ಸಿನಿಮಾಗಳನ್ನು ನೋಡಲು ನಾನು ಬಯಸುತ್ತೇನೆ, ಮೈಂಡ್ ಲೆಸ್ ಸಿನಿಮಾ(ಚಿಂತನೆಗಳಿಲ್ಲದ ಸಿನಿಮಾ)ಗಳಿಗಿಂತ ಗಂಭೀರ ವಿಚಾರಗಳ ಬಗ್ಗೆ ಮಾತನಾಡುವ ಚಿತ್ರಗಳನ್ನು ನೋಡುತ್ತೇನೆ ಎಂದು ಹೇಳಿದ್ದಾರೆ.
ನಟ ಕಿಶೋರ್ ಕುಮಾರ್ ಯಾವಾಗಲೂ ವೈಜ್ಞಾನಿಕವಾಗಿ ತಮ್ಮ ವಿಚಾರಗಳನ್ನು ಮಂಡಿಸುತ್ತಾರೆ. ಆದರೆ ಭ್ರಮೆ ಹಾಗೂ ಕಾಲ್ಪನಿಕ ವಿಚಾರಗಳ ಬಗ್ಗೆ ನಂಬಿಕೆ ಹೊಂದಿರುವವರು ಪದೇ ಪದೇ ಇವರ ಹೇಳಿಕೆಗಳಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಕಂಡು ಬಂದಿದೆ.
ಕಿಶೋರ್ ಕುಮಾರ್ ಅವರು ತಾವು ಗಂಭೀರವಾದ ಚಿಂತನೆಗಳ ವಿಚಾರಗಳ ಸಿನಿಮಾಗಳನ್ನು ನೋಡುತ್ತೇನೆ ಅನ್ನೋ ಹೇಳಿಕೆ ಇದೀಗ ನಾನಾ ರೂಪ ಪಡೆದುಕೊಂಡು ತಪ್ಪಾದ ಅರ್ಥದಲ್ಲಿ ಜನರಿಗೆ ತಲುಪುತ್ತಿದ್ದು, ಕೆಲವು ಮೈಂಡ್ ಲೆಸ್ ಜನರು ಕಿಶೋರ್ ಕುಮಾರ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಮುಗಿಬಿದ್ದಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw