“ಐ ಲವ್ ತಾಲಿಬಾನ್” ಎಂದು ಕಮೆಂಟ್ ಮಾಡಿ, ವಿವಾದ ಸೃಷ್ಟಿಸಿದ ಯುವಕ! - Mahanayaka
11:23 PM Saturday 14 - December 2024

“ಐ ಲವ್ ತಾಲಿಬಾನ್” ಎಂದು ಕಮೆಂಟ್ ಮಾಡಿ, ವಿವಾದ ಸೃಷ್ಟಿಸಿದ ಯುವಕ!

asif galagali
20/08/2021

ಬಾಗಲಕೋಟೆ: ತಾಲಿಬಾನ್ ಪರವಾಗಿ ಯುವಕನೋರ್ವ ಕಮೆಂಟ್ ಹಾಕಿ ಇದೀಗ ವಿವಾದಕ್ಕೆ ಸಿಲುಕಿಕೊಂಡಿದ್ದು, “ಐ ಲವ್ ತಾಲಿಬಾನ್” ಎನ್ನುವ ಕಮೆಂಟ್ ನ್ನು ಯುವಕ ಹಾಕಿದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಗಳು ವೈರಲ್ ಆಗಿವೆ.

ಆಸೀಫ್  ಗಲಗಲಿ ಎಂಬ ಹೆಸರಿನ ಫೇಸ್ ಬುಕ್ ಖಾತೆಯಿಂದ ಈ ಕಮೆಂಟ್ ಹಾಕಲಾಗಿದೆ.  ಈ ಕಮೆಂಟ್ ವೈರಲ್ ಆದ ಬೆನ್ನಲ್ಲೇ ಮುಸ್ಲಿಮ್ ಸಮುದಾಯದ ಯುವಕರೇ ಆತನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಅನಗತ್ಯವಾಗಿ ಕೆಲವರು ಇಂತಹ ಹುಚ್ಚಾಟಗಳನ್ನು ಮೆರೆದು ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತಿದ್ದಾರೆ. ಇಂತಹವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈತನ ಕಮೆಂಟ್ ವೈರಲ್ ಆದ ಬೆನ್ನಲ್ಲೇ ಜಮಖಂಡಿ ಪೊಲೀಸರು ಆತನ ಪೋಷಕರು ಹಾಗೂ ಸಂಬಂಧಿಕರನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದೀಗ ಯುವಕನ ಹುಚ್ಚಾಟಕ್ಕೆ ಆತನ ಕುಟುಂಬಸ್ಥರು, ಸಂಬಂಧಿಕರಿಗೂ ನೆಮ್ಮದಿ ಇಲ್ಲದಂತಾಗಿದೆ.

ಈ ಘಟನೆ ಸಂಬಂಧ ಮಹಮ್ಮದ್ ಯಾಕುಬ್ ಎಂಬವರು ವಿಡಿಯೋ ಮಾಡಿದ್ದು, ಆತನಿಗೆ ಅಫ್ಘಾನಿಸ್ತಾನದ ಮೇಲೆ ಅಷ್ಟು ಇಷ್ಟ ಇದ್ದರೆ ಅಲ್ಲಿಗೆ ಹೋಗಿ ಬದುಕಲಿ, ಇಂತಹವರಿಂದ ಇಡೀ ಸಮುದಾಯವೇ ತಲೆ ತಗ್ಗಿಸುವಂತಾಗುತ್ತಿದೆ. ಆತನನ್ನು ಬಂಧಿಸಿ ಕ್ರಮಕೈಗೊಳ್ಳಬೇಕು ಎಂದು ಜಮಖಂಡಿ ಪೊಲೀಸರಿಗೆ ಮನವಿ ಮಾಡಿದ್ದಾರೆ. ಇನ್ನೂ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೈಗೆ ಮೊಬೈಲ್ ಸಿಕ್ಕಿದೆ ಎಂದು ಸಿಕ್ಕಿದೆಲ್ಲ ಕಮೆಂಟ್ ಮಾಡುವ ಯುವಕರು, ತಮ್ಮ ನೆಮ್ಮದಿಯನ್ನೂ ಹಾಳು ಮಾಡಿಕೊಂಡು ಸಮಾಜದ ನೆಮ್ಮದಿಯನ್ನೂ ಹಾಳು ಮಾಡುವ ಕೆಲಸ ಮಾಡುತ್ತಿದ್ದಾರೆ. ಇಂತಹವರು ಯಾವುದೇ ಜಾತಿ, ಧರ್ಮದವರಾಗಿದ್ದರೂ ಅವರಿಗೆ ಕಾನೂನಿನ ರುಚಿ ತೋರಿಸುವ ಕೆಲಸವನ್ನು ಪೊಲೀಸರು ಮಾಡಬೇಕಿದೆ ಎನ್ನುವ ಅಭಿಪ್ರಾಯಗಳು ಸಾರ್ವಜನಿಕವಾಗಿ ಕೇಳಿ ಬಂದಿದೆ.

ಇನ್ನಷ್ಟು ಸುದ್ದಿಗಳು…

ಬದುಕಿದ್ದ ಯೋಧನ ಮನೆಗೆ ಹೋಗಿ ಸಾಂತ್ವನ ಹೇಳಿದ ಕೇಂದ್ರ ಸಚಿವ: ಜನಾಶೀರ್ವಾದ ಯಾತ್ರೆಯಲ್ಲಿ ಯಡವಟ್ಟು

ನೋ ಪಾರ್ಕಿಂಗ್ ನಲ್ಲಿದ್ದ ಸವಾರ ಸಹಿತ ಬೈಕ್ ನ್ನು ಹೊತ್ತೊಯ್ದ ಟ್ರಾಫಿಕ್ ಪೊಲೀಸರು!

ಪಾಕಿಸ್ತಾನ ಪರ ಘೋಷಣೆ: ಮೊಹರಂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 6 ಯುವಕರ ಬಂಧನ

ಮೊಹರಂ ಮೆರವಣಿಗೆ ವೇಳೆ ವಿದ್ಯುತ್ ಅವಘಡ | ಯುವತಿ ಸೇರಿದಂತೆ ಇಬ್ಬರು ಸಾವು

ಗುಂಪುಗೂಡಬಾರದು ಎನ್ನುತ್ತಲೇ ಬಿಜೆಪಿ ಜನಾಶೀರ್ವಾದ ಜಾತ್ರೆಯ ಬಗ್ಗೆ ಮೌನ ವಹಿಸಿದ ಸಿಎಂ ಬೊಮ್ಮಾಯಿ

ಓವೈಸಿಯನ್ನು ಅಫ್ಘಾನಿಸ್ತಾನಕ್ಕೆ ಕಳುಹಿಸುವುದು ಉತ್ತಮ | ಸಚಿವೆ ಶೋಭಾ ಕರಂದ್ಲಾಜೆ

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಯುತ್ತಾರಾ ನಳಿನ್ ಕುಮಾರ್ ಕಟೀಲ್?

ಇತ್ತೀಚಿನ ಸುದ್ದಿ