'ಇಂಡಿಯಾ' ಕೂಟಕ್ಕೆ ಮತ್ತಷ್ಟು ಬಲ: ಮತ್ತೆ ಏಳು ಹೊಸ ಸದಸ್ಯರ ನೇಮಕ - Mahanayaka
10:01 AM Saturday 21 - September 2024

‘ಇಂಡಿಯಾ’ ಕೂಟಕ್ಕೆ ಮತ್ತಷ್ಟು ಬಲ: ಮತ್ತೆ ಏಳು ಹೊಸ ಸದಸ್ಯರ ನೇಮಕ

02/09/2023

ಸುಮಾರು 26 ಪ್ರತಿಪಕ್ಷಗಳನ್ನು ಒಳಗೊಂಡಿರುವ ‘ಇಂಡಿಯಾ’ ಕೂಟದ ವಿವಿಧ ಕಾರ್ಯಕಾರಿ ಸಮಿತಿಗಳಿಗೆ ಡಿಎಂಕೆ ನಾಯಕಿ ಕನಿಮೋಳಿ ಕರುಣಾನಿಧಿ ಸೇರಿದಂತೆ ಒಟ್ಟು ಏಳು ಹೊಸ ಸದಸ್ಯರನ್ನು ಸೇರ್ಪಡೆಗೊಳಿಸಲಾಗಿದೆ.

ಮುಂಬೈನಲ್ಲಿ ನಡೆದ ಎರಡು ದಿನಗಳ ಸಭೆಯ ಕೊನೆಯಲ್ಲಿ ಮೈತ್ರಿಕೂಟವು 14 ಸದಸ್ಯರ ಕೇಂದ್ರ ಸಮನ್ವಯ ಸಮಿತಿ ಮತ್ತು 19 ಸದಸ್ಯರ ಪ್ರಚಾರ ಸಮಿತಿಯನ್ನು ಘೋಷಿಸಿದೆ.
ಪ್ರಚಾರ ಸಮಿತಿಯಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸಂಸದ ತಿರುಚಿ ಶಿವ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮುಖಂಡ ಮೆಹಬೂಬ್ ಬೇಗ್ ಅವರ ಹೆಸರುಗಳನ್ನು ಸೇರಿಸಲಾಗಿದೆ.

ಗುರ್ದೀಪ್ ಸಿಂಗ್ ಸಪ್ಪಲ್ (ಕಾಂಗ್ರೆಸ್), ಸಂಜಯ್ ಝಾ (ಜೆಡಿಯು), ಅನಿಲ್ ದೇಸಾಯಿ (ಶಿವಸೇನೆ-ಯುಬಿಟಿ), ಸಂಜಯ್ ಯಾದವ್ (ಆರ್ಜೆಡಿ), ಪಿಸಿ ಚಾಕೊ (ಎನ್ಸಿಪಿ), ಚಂಪೈ ಸೊರೆನ್ (ಜೆಎಂಎಂ), ಕಿರಣ್ಮಯ್ ನಂದಾ (ಎಸ್ಪಿ), ಸಂಜಯ್ ಸಿಂಗ್ (ಎಎಪಿ), ಅರುಣ್ ಕುಮಾರ್ (ಸಿಪಿಐ-ಎಂ) ಮತ್ತು ಇತರರು ಪಟ್ಟಿಯಲ್ಲಿದ್ದರು.


Provided by

ಡಿಎಂಕೆ ನಾಯಕ ದಯಾನಿಧಿ ಮಾರನ್ ಮತ್ತು ರಾಷ್ಟ್ರೀಯ ಲೋಕದಳದ ನಾಯಕ ರೋಹಿತ್ ಜಖಾಡ್ ಅವರು ಸಾಮಾಜಿಕ ಮಾಧ್ಯಮ ತಂಡಕ್ಕೆ ಹೊಸ ಸೇರ್ಪಡೆಯಾಗಿದ್ದಾರೆ. ಸುಪ್ರಿಯಾ ಶ್ರೀನಾಟೆ (ಐಎನ್ ಸಿ), ಸುಮಿತ್ ಶರ್ಮಾ (ಆರ್ ಜೆಡಿ), ಆಶಿಶ್ ಯಾದವ್ (ಎಸ್ಪಿ), ರಾಜೀವ್ ನಿಗಮ್ (ಎಸ್ಪಿ), ರಾಘವ್ ಚಡ್ಡಾ (ಎಎಪಿ), ಅವಿಂದಾನಿ (ಜೆಎಂಎಂ), ಇಲ್ತಿಜಾ ಮೆಹಬೂಬಾ (ಪಿಡಿಪಿ) ಈ ಹಿಂದೆ ಪಟ್ಟಿಯಲ್ಲಿದ್ದರು.

ಜೈರಾಮ್ ರಮೇಶ್ (ಕಾಂಗ್ರೆಸ್), ಮನೋಜ್ ಝಾ (ಆರ್​​ಜೆಡಿ), ಅರವಿಂದ್ ಸಾವಂತ್ (ಶಿವಸೇನೆ-ಯುಬಿಟಿ), ಜಿತೇಂದ್ರ ಅಹ್ವಾದ್ (ಎನ್​ಸಿಪಿ), ರಾಘವ್ ಚಡ್ಡಾ (ಎಎಪಿ), ರಾಜೀವ್ ರಂಜನ್ (ಜೆಡಿಯು), ಪ್ರಂಜಲ್ (ಸಿಪಿಐ-ಎಂ), ಆಶಿಶ್ ಯಾದವ್ (ಎಸ್ಪಿ), ಸುಪ್ರಿಯೋ ಭಟ್ಟಾಚಾರ್ಯ (ಜೆಎಂಎಂ), ಅಲೋಕ್ ಕುಮಾರ್ (ಜೆಎಂಎಂ), ಮನೀಶ್ ಕುಮಾರ್ (ಜೆಡಿಯು), ರಾಜೀವ್ ನಿಗಮ್ (ಎಸ್ಪಿ), ಭಾಲ್​ಚಂದ್ರನ್​ ಕಾಂಗೊ (ಸಿಪಿಐ) ಅವರಿದ್ದರು. ಡಿಎಂಕೆ ನಾಯಕ ಎ. ರಾಜಾ ಅವರನ್ನು ಸಂಶೋಧನೆಗಾಗಿನ ಕಾರ್ಯನಿರ್ವಹಣಾ ಗುಂಪಿಗೆ ಸೇರಿಸಲಾಗಿದೆ. ಅಮಿತಾಭ್ ದುಬೆ (ಕಾಂಗ್ರೆಸ್), ಸುಬೋಧ್ ಮೆಹ್ತಾ (ಆರ್ಜೆಡಿ), ಪ್ರಿಯಾಂಕಾ ಚತುರ್ವೇದಿ (ಶಿವಸೇನೆ-ಯುಬಿಟಿ), ವಂದನಾ ಚವಾಣ್ (ಎನ್ಸಿಪಿ), ಕೆಸಿ ತ್ಯಾಗಿ (ಜೆಡಿಯು), ಸುದಿವ್ಯ ಕುಮಾರ್ ಸೋನು (ಜೆಎಂಎಂ), ಜಾಸ್ಮಿನ್ ಶಾ (ಎಎಪಿ), ಅಲೋಕ್ ರಂಜನ್ (ಎಸ್ಪಿ), ಇಮ್ರಾನ್ ನಬಿ ದಾರ್ (ಎನ್ಸಿ) ಸಮಿತಿಯ ಇತರ ಸದಸ್ಯರಾಗಿದ್ದಾರೆ.

ಇತ್ತೀಚಿನ ಸುದ್ದಿ