ಐಸ್ ಕ್ರೀಂನಲ್ಲಿ ಇಲಿಯ ವಿಷ ಬೆರೆಸಿ ಮಕ್ಕಳಿಗೆ ನೀಡಿದ ತಂದೆ | 5 ವರ್ಷದ ಮಗು ಸಾವು, ಇನ್ನಿಬ್ಬರು ಗಂಭೀರ - Mahanayaka
2:18 PM Monday 15 - September 2025

ಐಸ್ ಕ್ರೀಂನಲ್ಲಿ ಇಲಿಯ ವಿಷ ಬೆರೆಸಿ ಮಕ್ಕಳಿಗೆ ನೀಡಿದ ತಂದೆ | 5 ವರ್ಷದ ಮಗು ಸಾವು, ಇನ್ನಿಬ್ಬರು ಗಂಭೀರ

ice cream
30/06/2021

ಮುಂಬೈ: ತಂದೆಯೇ ಐಸ್ ಕ್ರೀಮ್ ನಲ್ಲಿ ಇಲಿಯ ವಿಷ ಬೆರೆಸಿ ತನ್ನ ಮಕ್ಕಳಿಗೆ ನೀಡಿದ ಘಟನೆ ಮುಂಬೈಯಲ್ಲಿ ನಡೆದಿದ್ದು, ಪರಿಣಾಮವಾಗಿ ಐದು ವರ್ಷದ ಮಗು ಸಾವನ್ನಪ್ಪಿದ್ದು, ಇನ್ನಿಬ್ಬರು ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ.


Provided by

ಐದು ವರ್ಷ ವಯಸ್ಸಿನ ಅಲಿಶಾನ್ ಅಲಿ ಮೊಹಮ್ಮದ್ ಮೃತಪಟ್ಟ ಮಗುವಾಗಿದ್ದು,  2 ವರ್ಷ ವಯಸ್ಸಿನ ಅರ್ಮಾನಾ ಹಾಗೂ 7 ವರ್ಷ ವಯಸ್ಸಿನ ಅಲೀನಾ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಶುಕ್ರವಾರ ಮನೆಯಲ್ಲಿ ಜಗಳ ನಡೆದ ಬಳಿಕ ಪತಿ ನೌಶಾದ್ ಐಸ್ ಕ್ರೀಮ್ ನಲ್ಲಿ ವಿಷ ಬೆರೆಸಿರುವುದಾಗಿ ಪತ್ನಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ ಎಂದು ವರದಿಯಾಗಿದೆ.  ಕೌಟುಂಬಿಕ ಕಲಹದ ಬಳಿಕ ಕೋಪಗೊಂಡ ಪತಿ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.

ಮುಂಬೈನ ಮನ್ ಕುರ್ಡ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ಬಳಿಕ ಆರೋಪಿ ತಂದೆ ಮೊಹಮ್ಮದ್ ಅಲಿ ನೌಶಾದ್ ನ ವಿರುದ್ಧ ಪತ್ನಿ ನೀಡಿದ ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ