ಐಸಿಯುನಲ್ಲಿದ್ದ ರೋಗಿಯನ್ನು ಕಚ್ಚಿ ಕೊಂದ ಇಲಿಗಳು
ಹೈದರಾಬಾದ್: ಹೈದರಾಬಾದ್ ನ ವಾರಂಗಲ್ ನಲ್ಲಿರುವ ಎಂಜಿಎಂ ಆಸ್ಪತ್ರೆಯ ಐಸಿಯುನಲ್ಲಿ ಇಲಿ ಕಡಿತದಿಂದ ರೋಗಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ.
ಮೃತರನ್ನು ಶ್ರೀನಿವಾಸನ್ (38) ಎಂದು ಗುರುತಿಸಲಾಗಿದೆ. ತೀವ್ರವಾಗಿ ಕುಡಿತದ ಚಟ ಹೊಂದಿದ್ದ ಶ್ರೀನಿವಾಸನ್ ಅವರ ದೇಹದ ಆಂತರಿಕ ಅಂಗಾಂಗಗಳಿಗೆ ತೀವ್ರ ಹಾನಿಯಾಗಿತ್ತು. ಹೀಗಾಗಿ ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಮಾರ್ಚ್ 30 ರಂದು ಐಸಿಯುನಲ್ಲಿ ಶ್ರೀನಿವಾಸನ್ ಗೆ ಇಲಿ ಕಚ್ಚಿದೆ ಎಂದು ಅವರ ಸಹೋದರ ಶ್ರೀಕಾಂತ್ ದೂರಿದ್ದಾರೆ .ಕಚ್ಚಿದ ನಂತರ ಗಾಯದಿಂದ ಭಾರೀ ರಕ್ತಸ್ರಾವವಾಗಿತ್ತು. ಹಾಸಿಗೆಯು ರಕ್ತದಿಂದ ಆವೃತವಾಗಿತ್ತು ಪರಿಣಾಮವಾಗಿ ಅವರು ಸಾವನ್ನಪ್ಪಿದ್ದರು ಎಂದು ಶ್ರೀಕಾಂತ್ ಅವರು ದೂರಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಎಂ.ಜಿ.ಎಂ. ಆಸ್ಪತ್ರೆಯ ಐಸಿಯು ವಿಭಾಗದ ಮುಖ್ಯಸ್ಥರನ್ನು ಅಮಾನತುಗೊಳಿಸಲಾಗಿದೆ. ಆಸ್ಪತ್ರೆಯ ಅಧೀಕ್ಷಕರನ್ನು ವರ್ಗಾವಣೆ ಮಾಡಲಾಗಿದೆ ಮತ್ತು ಇಬ್ಬರು ಡ್ಯೂಟಿ ವೈದ್ಯರ ಜೊತೆಗಿನ ಒಪ್ಪಂದವನ್ನು ರದ್ದು ಮಾಡಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮಹಿಳೆಯ ಮೇಲೆ ಹಲ್ಲೆ: ಸಾಮಾಜಿಕ ಕಾರ್ಯಕರ್ತ ಸಹಿತ ಮೂವರ ಬಂಧನ
80 ಸಾವಿರ ರೂ. ಖರ್ಚು ಮಾಡಿ ಪ್ರೀತಿಯ ನಾಯಿಯ ಪ್ರತಿಮೆ ನಿರ್ಮಿಸಿದ ಯಜಮಾನ!
ಲೋಕಾರ್ಪಣೆಯಾಗಲಿದೆ ಸ್ಮಾರ್ಟ್ ಬಸ್ ಪಾಸ್: ಈ ಆ್ಯಪ್ ನ ವಿಶೇಷತೆ ಏನು?