IDBI ಬ್ಯಾಂಕ್ ನಲ್ಲಿ 1 ಸಾವಿರ ಹುದ್ದೆಗಳ ನೇಮಕಾತಿ: ಪದವೀಧರರಿಗೆ ಅದ್ಭುತ ಅವಕಾಶ

idbi bank recruitment
07/11/2024

IDBI Bank Recruitment 2024 — ಭಾರತ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಒಂದಾಗಿರುವಂತಹ ಭಾರತೀಯ ಕೈಗಾರಿಕಾ ಅಭಿವೃದ್ಧಿ ಬ್ಯಾಂಕಿನಲ್ಲಿ ಖಾಲಿ ಇರುವಂತಹ 1000 ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಅಧಿಸೂಚನೆ ಹೊರಡಿಸಿದೆ.

2024–25 ನೇ ಸಾಲಿನ ಸೇಲ್ಸ್ & ಆಪರೇಷನ್ ವಿಭಾಗದಲ್ಲಿ   ಎಕ್ಸಿಕ್ಯೂಟಿವ್ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಒಟ್ಟು 1,000 ಹುದ್ದೆಗಳಲ್ಲಿ ವರ್ಗವರು ಹುದ್ದೆಗಳ ವಿಂಗಡಣೆಯು ಈ ಕೆಳಗಿನಂತೆ :

* ಸಾಮಾನ್ಯ ವರ್ಗ : 448 ಹುದ್ದೆಗಳು

* ಪ. ಜಾತಿ : 127 ಹುದ್ದೆಗಳು

* ಪ. ಪಂಗಡ : 94 ಹುದ್ದೆಗಳು

* ಆರ್ಥಿಕ ದುರ್ಬಲ ವರ್ಗ: 100 ಹುದ್ದೆಗಳು

* ಇತರೆ ಹಿಂದುಳಿದ ವರ್ಗದವರಿಗೆ : 231 ಹುದ್ದೆಗಳು

ಶೈಕ್ಷಣಿಕ ಮತ್ತು ವಯೋಮಿತಿ ಅರ್ಹತೆಗಳೇನು?

ಎಕ್ಸಿಕ್ಯೂಟಿವ್ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ ಮುಗಿಸಿರಬೇಕು. ವಯೋಮಿತಿ ಅರ್ಹತೆ ನೋಡುವುದಾದರೆ ಕನಿಷ್ಠ 20 ವರ್ಷ  ಹಾಗೂ ಗರಿಷ್ಟ 25 ವರ್ಷದ ಒಳಗಿರಬೇಕು.

ವೇತನ: ಎಕ್ಸಿಕ್ಯೂಟಿವ್ ಆಗಿ ನೇಮಕಗೊಳ್ಳುವ ಅಭ್ಯರ್ಥಿಗಳಿಗೆ ಮಾಸಿಕ 29,000ರೂ. ನಿಂದ 31,000ರೂ. ವರೆಗೆ ಇರಲಿದೆ.

ಅರ್ಜಿ ಶುಲ್ಕ:

*   ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಅಂಗವಿಕಲ ಅಭ್ಯರ್ಥಿಗಳು 250 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕು.

*   ಮೇಲಿನ ವರ್ಗದವರನ್ನು ಹೊರತುಪಡಿಸಿ ಉಳಿದ ಎಲ್ಲಾ ವರ್ಗದವರು 1,050 ರೂ. ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ:  16 ನವೆಂಬರ್ 2024

ಅರ್ಜಿ ಲಿಂಕ್:  www.idbibank.in


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version