ಪಕ್ಷದಲ್ಲಿ ಸಿದ್ದಾಂತವೆ ಪ್ರಮುಖ: ದೇವರಾಜ್ ಶೆಟ್ಟಿ - Mahanayaka

ಪಕ್ಷದಲ್ಲಿ ಸಿದ್ದಾಂತವೆ ಪ್ರಮುಖ: ದೇವರಾಜ್ ಶೆಟ್ಟಿ

chikamagalore
09/01/2025

ಮೂಡಿಗೆರೆ: ಪಕ್ಷ ಸಿದ್ದಾಂತವೆ ಪ್ರಮುಖವಾಗಿದ್ದು, ಪಕ್ಷದಿಂದ ಹೋರಗೆ ಯಾವ ವ್ಯಕ್ತಿಯು ಪ್ರಮುಖರಲ್ಲ. ಇದನ್ನು ಅರಿತು ಪಕ್ಷ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿ ಎಂದು ಜಿಲ್ಲಾ ಬಿಜೆಪಿ ಅದ್ಯಕ್ಷ ದೇವರಾಜ್ ಶೆಟ್ಟಿ ತಿಳಿಸಿದರು.

ಅವರು ಪಕ್ಷದ ಅದಿಕೃತ ಗೋಷಣೆಯ ಸಂಘಟನಾ ಪರ್ವ ವಿಷೇಶ ಸಭೆಯನ್ನು ಉದ್ದೇಶಿಸಿ ಮಾತನಾಡಿ. ನಮ್ಮ ಅಂತರಿಕ ಬಿನ್ನಾಬಿಪ್ರಾಯ ಎಲ್ಲವನ್ನು ತೊರೆದು ಎಲ್ಲರು ಕಾರ್ಯ ನಿರ್ವಹಿಸಬೇಕು. ಇದು ನಮ್ಮ ಗೆಲುವಿಗೆ ಕಾರಣವಾಗಿದ್ದು. ಪಕ್ಷದಲ್ಲಿ ಅಂತರಿಕ ಚುನಾವಣೆ. ಸಂಘಟನೆಯನ್ನು ಬಲಗೋಳಿಸಲು ಅತ್ಯಮೂಲವಾಗಿದ್ದು. ಸಂಘಟನಾತ್ಮಕ ಜಿಲ್ಲೆಯಾಗಿ ಇಂದು ಲೋಕಸಭೆ ಚುನಾವಣೆ ಸೇರಿದಂತೆ ಎಂಎಲ್ ಸಿ ಸಹಕಾರ ಸಂಘ ಚುನಾವಣೆಯಲ್ಲಿ ಈಗಾಗಲೆ ಉತ್ತಮ ಯಶಸ್ಸು ಸಾದಿಸಿದ್ದು,ಪಕ್ಷವೆ ಪ್ರಮುಖವಾಗಿದ್ದು, ಸಿದ್ದಾಂತವೆ ನಮ್ಮ ನಿಲುವು. ಪಕ್ಷ ಮೋದಲು ಎಂಬುದಾಗಿದ್ದು. ಪಕ್ಷ ಬಿಟ್ಟರೆ ಇಲ್ಲಿ ವ್ಯಕ್ತಿ ನಗಣ್ಯ. ಹಾಗಾಗಿ ಬೂತ್ ಸಮಿತಿ ಸೇರಿದಂತೆ ಜಿಲ್ಲಾ ಪಧಾದಿಕಾರಿಗಳು ಪಕ್ಷದ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದು ತಿಳಿಸಿದರು.


ADS

ಪ್ರಸ್ತಾವಿಕ ಮಾತನಾಡಿದ ನರೇಂದ್ರ. ಪಕ್ಷದ ಅಂತರಿಕ ಸಭೆಯ ಒಂದು ಭಾಗವಾಗಿ ಎಲ್ಲರು ಒಂದು ಪ್ರಕ್ರಿಯೆ ಅಡಿಯಲ್ಲಿ ಬಂದು ಸಂವಿದಾನ ಬದ್ದವಾಗಿ ಪ್ರಾಥಮಿಕ ಸದಸ್ಯತ್ವ ಪಢದು ಸಂಘಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪಕ್ಷ ಕಟ್ಟಿ ಈ ಮೂಲಕ ದೇಶ ಸೇವೆ ಮಾಡುವುದೆ ಬಿಜೆಪಿ ಗುರಿಯಾಗಿದೆ ಎಂದರು. ದೀಪಕ್ ದೊಡ್ಡಯ್ಯ ಮಾತನಾಡಿ. ಪಕ್ಷದ ಅಭ್ಯಾರ್ಥಿ ಸೋಲು. ಇಡಿ ಕಾರ್ಯಕರ್ತರ ವಯಕ್ತಿಕ ಸೋಲಾಗಿದ್ದು. ಯಾವ ಚುನಾವಣೆಯಲ್ಲಿಯು ಬಿನ್ನಮತ ಮಾಡದೆ ಪಕ್ಷ ಗೆಲ್ಲಿಸಲು ಸಂಘಟನೆ ಮಾಡೋಣ ಎಂದರು.

ಮಂಡಲ ಅದ್ಯಕ್ಷ ಗಜೇಂದ್ರ ಸಕ್ರೀಯ ಸದಸ್ಯತ್ವವನ್ನು ನಮ್ಮ ವಿಧಾನಸಭಾ ಕ್ಷೇತ್ರದ ಪಧಾದಿಕಾರಿಗಳು ಮತ್ತು ಕಾರ್ಯಕರ್ತರು ಅತ್ಯತ್ಯಮವಾಗಿ ನಡೆಸಿಕೊಂಡು ಬಂದಿದ್ದು ಮುಂದಿನ ಮೂರು ವರ್ಷ ಅವಿರತವಾಗಿ ಪಕ್ಷ ಸಂಘಟನೆಯಲ್ಲಿ ಶ್ರಮಿಸೋಣ ಎಂದು ತಿಳಿಸಿದರು. ಚುನಾವಣಾ ಅಧಿಕಾರಿ ಚೇತನ್. ಗಜೇಂದ್ರ ಕೊಟ್ಟಿಗೆಹಾರ. ಜಿಎಸ್ ರಘು. ಪಂಚಾಕ್ಷರಿ. ಕೆಸಿ. ರತನ್. ಎಂಅರ್ ಜಗಧೇಶ್. ಗೌರಮ್ಮ. ಪ್ರಶಾಂತ್. ದನಿಕ್. ಲೋಕೇಶ್. ಮತ್ತಿತರರಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

 

 

ಇತ್ತೀಚಿನ ಸುದ್ದಿ