ಕಾರ್ಕಳಕ್ಕೆ ಪ್ರವೇಶ ನಿರಾಕರಿಸಿದರೆ ಕೋರ್ಟಿಗೆ ಹೋಗಲಾರೆ: ಪ್ರಮೋದ್ ಮುತಾಲಿಕ್
ನಾನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನ ಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದು ಖಚಿತ. ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವ ಪ್ರಶ್ನೆ ಇಲ್ಲ. ಈ ವಿಷಯದಲ್ಲಿ ಇನ್ನು ಹೊಂದಾಣಿಕೆಯಾಗಲಿ, ಮಾತುಕತೆಯಾಗಲಿ ಮಾಡುವುದಿಲ್ಲ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಘೋಷಿಸಿದ್ದಾರೆ.
ಅವರು ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನನ್ನ ಮೇಲೆ ಸುಮಾರು 109 ಕೇಸುಗಳಿದ್ದು, ಈ ಪೈಕಿ ಅಧಿಕ ಕೇಸುಗಳು ಬಿಜೆಪಿ ಸರಕಾರವೇ ದಾಖಲಿಸಿದೆ. ಪ್ರವೇಶ ನಿರ್ಬಂಧ, ಗಡೀಪಾರು ಆದೇಶ ಕೂಡಾ ಬಿಜೆಪಿ ಸರಕಾರದ್ದೇ ಜಾಸ್ತಿ ಇವೆ ಎಂದು ಮುತಾಲಿಕ್ ಬಿಜೆಪಿ ವಿರುದ್ದ ಹರಿಹಾಯ್ದಿದ್ದಾರೆ.
ಕಳೆದ 3 ತಿಂಗಳುಗಳಿಂದ ಕಾರ್ಕಳ ವಿಧಾನ ಸಭಾ ಕ್ಷೇತ್ರಾದ್ಯಂತ ನಿರಂತರವಾಗಿ ಓಡಾಡುತ್ತಿದ್ದೇನೆ. ಪ್ರತಿ ನಿತ್ಯ ರಾತ್ರಿ 12 ಗಂಟೆ ತನಕವೂ ಕ್ಷೇತ್ರಾದ್ಯಂತ ಪ್ರವಾಸ ಮಾಡಿ ಕಾರ್ಯಕರ್ತರ ಭೇಟಿ ಮತ್ತು ಸಭೆಗಳನ್ನು ನಡೆಸುತ್ತಿದ್ದೇನೆ. ಕ್ಷೇತ್ರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜನವರಿ 23 ರಂದು ಸ್ಪರ್ಧೆಯ ಬಗ್ಗೆ ಘೋಷಿಸಿದ್ದು, ಇತ್ತೀಚೆಗೆ ಕಚೇರಿಯನ್ನೂ ತೆರೆದಿದ್ದೇನೆ ಎಂದಿದ್ದಾರೆ.
ಚುನಾವಣೆಯಲ್ಲಿ ಸ್ಪರ್ಧಿಸುವದಕ್ಕೆ ಯಾರೂ ನಿರ್ಬಂಧ ಮಾಡಲಾರರು ಎಂದು ಭಾವಿಸುತ್ತೇನೆ. ಒಂದೊಮ್ಮೆ ನನಗೆ ಪ್ರವೇಶ ನಿರಾಕರಿಸಿದರೆ ಕೋರ್ಟಿಗೆ ಹೋಗಲಾರೆ. ಬದಲಾಗಿ ಹೊರಗಿದ್ದುಕೊಂಡೇ ಸ್ಪರ್ಧಿಸುತ್ತಿದ್ದೇನೆ ಎಂದರು.
ನೂರಕ್ಕೆ ನೂರು ನಾನು ಗೆಲ್ಲುತ್ತೇನೆ ಎಂಬ ವಿಶ್ವಾಸವಿದೆ ಎಂದರು. ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ನನಗೆ ಬಿಜೆಪಿ ಅಥವಾ ಆರೆಸ್ಸೆಸ್ ನಿಂದ ಇದುವರೆಗೆ ಮನವಿ ಅಥವಾ ಒತ್ತಡಗಳು ಬಂದಿಲ್ಲ ಅಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw